AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Family Suicide Case | ಮಗುವಿನ ಸಾವು ಹಸಿವಿನಿಂದ ಅಲ್ಲ ಕೊಲೆ ಆಡಿಯೋ, ವಿಡಿಯೋ ಸಮೇತ ಸಾಕ್ಷಿ ಸಲ್ಲಿಕೆ

Family Suicide Case | ಮಗುವಿನ ಸಾವು ಹಸಿವಿನಿಂದ ಅಲ್ಲ ಕೊಲೆ ಆಡಿಯೋ, ವಿಡಿಯೋ ಸಮೇತ ಸಾಕ್ಷಿ ಸಲ್ಲಿಕೆ

TV9 Web
| Updated By: ಆಯೇಷಾ ಬಾನು

Updated on: Dec 14, 2021 | 8:49 AM

ಆವತ್ತು ಬೆಂಗಳೂರಂತಹ ಬೆಂಗಳೂರು ಬೆಚ್ಚಿಬಿದ್ದಿತ್ತು. ಜನ ಅಯ್ಯೋ ದೇವರೆ ಅಂತಾ ಮರುಗಿದ್ರು. ಯಾಕಂದ್ರೆ, ಒಂದೇ ಮನೆಯಲ್ಲಿ ಐವರು ಹೆಣವಾಗಿದ್ರು.. ಪುಟ್ಟ ಮಗು ಕೂಡ ಕೊಲೆಯಾಗಿದ್ದ.. ಈ ಕೇಸ್ನ ತನಿಖೆ ನಡೆಸಿರೋ ಪೊಲೀಸರು ಮಹತ್ವದ ಆರೋಪಿಗಳ ಜನ್ಮ ಜಾಲಾಡಿ, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು: ಭವ್ಯ ಬಂಗಲೆ.. ಹಣ, ಆಸ್ತಿ.. ಮನೆಯಲ್ಲಿ ಎಲ್ಲವೂ ಇತ್ತು.. ಇಂತಹ ನಿವಾಸದಲ್ಲಿ 2 ತಿಂಗಳ ಹಿಂದೆ ಯಾರೂ ಊಹೆ ಮಾಡ್ಲಾಗದ ದುರಂತ ನಡೆದು ಹೋಗಿತ್ತು. ಈ ಕೇಸ್ನ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮನೆ ಮಾಲೀಕ ಹಲ್ಲೆಗೆರೆ ಶಂಕರ್ ಮತ್ತು ಆತನ ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ನ್ನ ಬಂಧಿಸಿದ್ರು. ಆದ್ರೀಗ, ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಕೋರ್ಟ್ಗೆ 400 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಖಾಕಿ
ಕಳೆದ ಸೆಪ್ಟಂಬರ್ 17ರಂದು ಅಂದರಹಳ್ಳಿ ಮುಖ್ಯರಸ್ತೆಯ ವಿನಾಯಕನಗರದಲ್ಲಿರುವ ಇದೇ ಮನೆಯಲ್ಲಿ ಹಲ್ಲೆಗೆರೆ ಶಂಕರ್ ಕುಟುಂಬದ ಐವರು ಹೆಣವಾಗಿದ್ರು. ಶಂಕರ್ ಪತ್ನಿ ಭಾರತಿ, ಪುತ್ರಿಯರಾದ ಸಿಂಧೂರಾಣಿ, ಸಿಂಚನಾ ಹಾಗೂ ಪುತ್ರ ಮಧುಸಾಗರ್, ಸಿಂಧೂರಾಣಿಯ 9 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಮುಕ್ತಾಯ ಗೊಳಿಸಿರುವ ಪೊಲೀಸರು ಕೋರ್ಟ್ಗೆ 400 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ..ಇಷ್ಟಕ್ಕೂ ಪೊಲೀಸರು ಕೋರ್ಟ್ಗೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಏನಿದೆ ಅಂತಾ ನೋಡೋದಾದ್ರೆ

ಆತ್ಮಹತ್ಯೆಗೆ ಹಲ್ಲೆಗೆರೆ ಶಂಕರ್ ಹಾಗೂ ಅಳಿಯಂದಿರು ಪ್ರಚೋದನೆ ನೀಡಿದ್ದ ಬಗ್ಗ ಪೊಲೀಸರು ಮಾಹಿತಿ ಕಲೆಹಾಕಿದ್ರು. ಅದಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋಗಳ ಸಾಕ್ಷ್ಯಾಧಾರವನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದಾರೆ. ಅಲ್ದೆ, ತಂದೆ ಆಟಗಳನ್ನ ಮೃತ ಮಧುಸಾಗರ್ ಡೆತ್ನೋಟ್ನಲ್ಲಿ ಬರೆದಿದ್ದ. ಈ ಡೆತ್ನೋಟನ್ನು ಸಹ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಇನ್ನು, 9ತಿಂಗಳ ಮಗುವಿನ ಸಾವಿನ ಕುರಿತು FSL ರಿಪೋರ್ಟ್ ಬಂದಿದ್ದು, ಮಗು ಹಸಿವಿನಿಂದ ಸಿತ್ತಿಲ್ಲ.. ಬದ್ಲಿಗೆ ಕೊಲೆ ಮಾಡಲಾಗಿದೆ ಅನ್ನೋದು ಕನ್ಫರ್ಮ್ ಆಗಿದೆ.

ಇನ್ನೂ, ಸದ್ಯ ಜೈಲುವಾಸ ಅನುಭವಿಸ್ತಿರೋ ಶಂಕರ್ ಮತ್ತು ಅಳಿಯಂದಿರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಆದ್ರೆ, ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ವಜಾಗೊಳಿಸಿತ್ತು.. ಹಾಗಾಗಿ ಜಾಮೀನಿಗಾಗಿ ಮೂವರು ಹೈಕೋರ್ಟ್