‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು

ಸಿದ್ದಾರ್ಥ್​ ಶುಕ್ಲಾ ನಿಧನರಾದ ಬಳಿಕ ಅವರ ಮನೆಗೆ ಭೇಟಿ ನೀಡಿದ ನಟಿ ಜಸ್ಲೀನ್​ ಮಥಾರು ಅವರಿಗೆ ತೀವ್ರ ಜ್ವರ ಶುರುವಾಗಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು
ಸಿದ್ದಾರ್ಥ್ ಶುಕ್ಲಾ, ಜಸ್ಲೀನ್ ಮಥಾರು

ಹಿಂದಿ ಬಿಗ್​ ಬಾಸ್​ ಸೀಸನ್​ 13ರ ವಿನ್ನರ್​ ಸಿದ್ದಾರ್ಥ್​ ಶುಕ್ಲಾ ನಿಧನರಾದ ಸುದ್ದಿ ಅನೇಕರನ್ನು ಘಾಸಿಗೊಳಿಸಿದೆ. ಅಭಿಮಾನಿಗಳಿಗೆ ಈ ಸಾವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಿದ್ದಾರ್ಥ್ ಜೊತೆ ಆಪ್ತವಾಗಿದ್ದವರಂತೂ ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದಾರೆ. ಸೋಮವಾರ (ಸೆ.6) ಶ್ರದ್ಧಾಂಜಲಿ ಸಭೆ ನಡೆದಿದೆ. ಈ ಸಾವಿನ ನೋವಿನಲ್ಲೂ ಕೆಲವು ಕಿಡಿಗೇಡಿಗಳು ತಮ್ಮ ಕೆಟ್ಟ ಬುದ್ಧಿ ತೋರಿಸುತ್ತಿದ್ದಾರೆ. ಸಿದ್ದಾರ್ಥ್​ ಜೊತೆ ರಿಯಾಲಿಟಿ ಶೋವೊಂದರಲ್ಲಿ ಕೆಲಸ ಮಾಡಿದ್ದ ನಟಿ ಜಸ್ಲೀನ್ ಮಥಾರು ಅವರಿಗೆ ಕೆಲವರು ಹಿಡಿ ಶಾಪ ಹಾಕುತ್ತಿದ್ದಾರೆ. ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಿಂದಿ ಬಿಗ್​ ಬಾಸ್​ 12ರಲ್ಲಿ ಜಸ್ಲೀನ್​ ಮಥಾರು ಸ್ಪರ್ಧಿಸಿದ್ದರು. ಬಳಿಕ ‘ಮುಜ್ಸೆ ಶಾದಿ ಕರೋಗೆ’ ಶೋನಲ್ಲಿ ಸಿದ್ದಾರ್ಥ್​ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ಸಿದ್ದಾರ್ಥ್​ ನಿಧನರಾದ ಬಳಿಕ ಅವರ ಮನೆಗೆ ಭೇಟಿ ನೀಡಿದ ಜಸ್ಲೀನ್​ಗೆ ತೀವ್ರ ಜ್ವರ ಶುರುವಾಗಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಂದಲೇ ವಿಡಿಯೋ ಮಾಡಿ ಈ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದಾರೆ.

‘ಸಿದ್ದಾರ್ಥ್​ ಸಾವಿನಿಂದಾಗಿ ನಾನು ವಿಚಲಿತಳಾಗಿದ್ದೇನೆ. ಸಾವಿನ ಸುದ್ದಿ ಕೇಳಿ ಮತ್ತು ಅವರ ಮನೆಯ ವಾತಾವರಣ ನೋಡಿ ಆಘಾತ ಆಯಿತು. ಸಿದ್ದಾರ್ಥ್​ ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್​ ಅವರನ್ನು ಭೇಟಿ ಮಾಡಿ ಬಂದೆ. ನೀನು ಕೂಡ ಸತ್ತು ಹೋಗು ಎಂಬ ಮೆಸೇಜ್​ಗಳು ಬಂದಿವೆ. ಜೀವನದಲ್ಲಿ ಇದೇ ಮೊದಲ ಬಾರಿಗೆ ನನ್ನ ಮೇಲೆ ಇಷ್ಟು ಕೆಟ್ಟ ಪರಿಣಾಮ ಉಂಟಾಗಿದೆ. ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಎಲ್ಲವೂ ವಿಚಿತ್ರವಾಗಿ ಕಾಣುತ್ತಿದೆ. ಏನಾಯಿತೋ ನನಗೆ ಗೊತ್ತಿಲ್ಲ. ಆದರೆ 103 ಡಿಗ್ರಿ ಜ್ವರ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿಕೊಂಡಿದ್ದಾರೆ.

ಸೆ.2ರ ಮುಂಜಾನೆ ಸಿದ್ದಾರ್ಥ್ ನಿಧನರಾದರು. ಸೋಮವಾರ (ಸೆ.6) ನಾಲ್ಕು ದಿನ ಕಳೆದ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಶ್ರದ್ಧಾಂಜಲಿ ಸಭೆ ಆಯೋಜಿಸಿದ್ದರು. ಆ ಸಭೆಗೆ ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿತ್ತು. ಸಂಜೆ 5 ಗಂಟೆಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜೂಮ್​ ಮೀಟ್​ ಮೂಲಕ ಅಭಿಮಾನಿಗಳು ಪಾಲ್ಗೊಂಡರು.

ಇದನ್ನೂ ಓದಿ:

ಸುಶಾಂತ್​ ಮತ್ತು ಸಿದ್ದಾರ್ಥ್​ ಶುಕ್ಲಾ ಸಾವಿನ ನಡುವೆ ಹಲವು ಹೋಲಿಕೆ; ಧ್ವನಿ ಎತ್ತಿದ ನೆಟ್ಟಿಗರು

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

Read Full Article

Click on your DTH Provider to Add TV9 Kannada