ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

ಕೆಲವೇ ತಿಂಗಳ ಹಿಂದೆ ಕಿರಣ್​ ರಾವ್​ಗೆ ವಿಚ್ಛೇದನ ನೀಡುವ ಮೂಲಕ ಆಮಿರ್​ ಖಾನ್​ ಹೆಚ್ಚು ಸುದ್ದಿ ಆಗಿದ್ದರು. ಈಗ ಅವರ ಕುರಿತು ಸಹೋದರ ಫೈಸಲ್​ ಖಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ
ಆಮಿರ್​ ಖಾನ್​, ಫೈಸಲ್​ ಖಾನ್​
TV9kannada Web Team

| Edited By: Madan Kumar

Sep 07, 2021 | 9:58 AM

ಬಾಲಿವುಡ್​ ನಟ ಆಮಿರ್​ ಖಾನ್​ ಅವರು ಅನೇಕರ ಪಾಲಿಗೆ ಗಾಡ್​ ಫಾದರ್​ ಆಗಿದ್ದಾರೆ. ಹಲವು ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದ್ದಾರೆ. ಆದರೆ ಸ್ವಂತ ತಮ್ಮನ ವೃತ್ತಿಜೀವನವನ್ನೇ ತುಳಿದುಹಾಕಿದರು ಎಂಬುದು ಕಟುಸತ್ಯ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಅವರ ತಮ್ಮ ಫೈಸಲ್​ ಖಾನ್​ ಅವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ಮಾಧ್ಯಮದ ಮುಂದೆ ಅವರು ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಆಮಿರ್​ ಖಾನ್ ಹೇಳಿದ ಒಂದೇ ಒಂದು ಮಾತಿನಿಂದ ತಮ್ಮ ಸಿನಿಮಾ ಕನಸು ಭಗ್ನವಾಯಿತು ಎಂದು ಫೈಸಲ್​ ಖಾನ್​ ಅವರು ಬೇಸರ ತೋಡಿಕೊಂಡಿದ್ದಾರೆ.

ಅನೇಕರಿಗೆ ತಿಳಿದಿರದ ವಿಚಾರ ಏನೆಂದರೆ, ಆಮಿರ್​ ಖಾನ್​ ​ತಮ್ಮ ಫೈಸಲ್​ ಖಾನ್​ ಅವರು ಕೂಡ ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೂಡ ಸಿಕ್ಕಿತ್ತು. 2000ನೇ ಇಸವಿಯಲ್ಲಿ ಬಂದ ‘ಮೇಲಾ’ ಸಿನಿಮಾದಲ್ಲಿ ಆಮಿರ್​ ಖಾನ್ ಜೊತೆ ಅವರು ಹೀರೋ ಆಗಿ ನಟಿಸಿದ್ದರು. ಆದರೆ ಆ ಸಿನಿಮಾ ಫ್ಲಾಪ್​ ಆಯಿತು.

‘ಆ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ನನಗೆ ಕರೆ ಮಾಡಿ ಮಾತನಾಡಿದರು. ನೀನು ಒಳ್ಳೆಯ ನಟ ಅಲ್ಲ. ಹೊಟ್ಟೆಪಾಡಿಗೆ ಸಿನಿಮಾ ಬದಲಿಗೆ ಬೇರೆ ಏನಾದರೂ ಕೆಲಸ ಮಾಡು ಅಂತ ಹೇಳಿದರು. ಆ ಸಿನಿಮಾದ ಸೋಲನ್ನು ನನ್ನ ತಲೆಗೆ ಕಟ್ಟಿದರು. ಆ ಸೋಲಿಗೆ ಬೇರೆ ಬೇರೆ ಕಾರಣಗಳು ಕೂಡ ಇದ್ದವು. ಅವರ ಬಳಿ ನಾನು ಏನು ಸಹಾಯ ಕೇಳಲು ಸಾಧ್ಯ?’ ಎಂದು ಅಸಮಾಧಾನದ ಮಾತುಗಳನ್ನು ಫೈಸಲ್​ ಖಾನ್​ ಹೇಳಿದ್ದಾರೆ.

‘ಮೇಲಾ’ ಸೋತ ಬಳಿಕವೂ ಫೈಸಲ್​ ಅವರು ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸಿದರು. ಈಗ ಅವರು ‘ಫ್ಯಾಕ್ಟರಿ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಸ್ವಂತ ತಮ್ಮನೇ ಮಾಡಿರುವ ಈ ಆರೋಪಗಳಿಗೆ ಆಮಿರ್​ ಖಾನ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಈಗ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಸದ್ಯ ಅವರು ‘ಲಾಲ್​ ಸಿಂಗ್ ಚೆಡ್ಡಾ’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​. ಈ ಸಿನಿಮಾದಲ್ಲಿ ಆಮೀರ್​ ಖಾನ್​ಗೆ ಬೇರೆ ಬೇರೆ ಗೆಟಪ್​ಗಳಿವೆ.

ಇದನ್ನೂ ಓದಿ:

ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟ ಆಮಿರ್​ ಖಾನ್​; ಗವರ್ನರ್​ ಭೇಟಿ ಬಳಿಕ ಹೊರಬಿತ್ತು ಸುದ್ದಿ

‘ಅಜ್ಜನಾಗುವ ವಯಸ್ಸಿನಲ್ಲಿ ಆಮಿರ್​ ಖಾನ್​ಗೆ 3ನೇ ಹೆಂಡತಿ ಚಿಂತೆ’: ಬಿಜೆಪಿ ಸಂಸದ ಸುಧೀರ್​ ಗುಪ್ತಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada