‘ಅಜ್ಜನಾಗುವ ವಯಸ್ಸಿನಲ್ಲಿ ಆಮಿರ್​ ಖಾನ್​ಗೆ 3ನೇ ಹೆಂಡತಿ ಚಿಂತೆ’: ಬಿಜೆಪಿ ಸಂಸದ ಸುಧೀರ್​ ಗುಪ್ತಾ

ಬಿಜೆಪಿ ಸಂಸದ ಸುಧೀರ್​ ಗುಪ್ತಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ಆಮಿರ್​ ಖಾನ್​ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ.

‘ಅಜ್ಜನಾಗುವ ವಯಸ್ಸಿನಲ್ಲಿ ಆಮಿರ್​ ಖಾನ್​ಗೆ 3ನೇ ಹೆಂಡತಿ ಚಿಂತೆ’: ಬಿಜೆಪಿ ಸಂಸದ ಸುಧೀರ್​ ಗುಪ್ತಾ
ಆಮಿರ್​ ಖಾನ್​, ಕಿರಣ್​ ರಾವ್​, ಸುಧೀರ್​ ಗುಪ್ತಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 13, 2021 | 12:20 PM

ಎರಡನೇ ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿದ ಬಳಿಕ ಆಮಿರ್​ ಖಾನ್​ (Aamir Khan) ಅವರು ಹಲವರ ಟೀಕೆಗೆ ಒಳಗಾಗುತ್ತಿದ್ದಾರೆ. ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ 15 ವರ್ಷ ಸುಖವಾಗಿ ದಾಂಪತ್ಯ ಜೀವನ ನಡೆಸಿ, ಯಾವುದೇ ರಂಪಾಟ ಇಲ್ಲದೇ ಡಿವೋರ್ಸ್​ (Divorce)ಪಡೆದುಕೊಂಡಿದ್ದಾರೆ. ಅವರಿಬ್ಬರು ಈ ಬೆಳವಣಿಗೆಯನ್ನು ತುಂಬ ಕೂಲ್​ ಆಗಿ ಸ್ವೀಕರಿಸಿದ್ದಾರೆ. ಆದರೆ ಟೀಕೆ ಮಾಡುವವರ ಸಂಖ್ಯೆಯೇ ದೊಡ್ಡದಿದೆ. ಈಗ ಆಮಿರ್​-ಕಿರಣ್​ ರಾವ್​ (Kiran Rao) ವಿಚ್ಛೇದನದ ಬಗ್ಗೆ ಬಿಜೆಪಿ ಸಂಸದ ಸುಧೀರ್​ ಗುಪ್ತಾ (Sudhir Gupta) ಅವರು ಕೆಲವು ಹೇಳಿಕೆಗಳನ್ನು ನೀಡಿ ಸುದ್ದಿ ಆಗಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್​ ಗುಪ್ತಾ ಅವರು ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ ಸುದ್ದಿ ಆಗುತ್ತಿರುತ್ತಾರೆ. ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಆಮಿರ್​ ಖಾನ್​ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ‘ಆಮಿರ್​ ಖಾನ್​ ಅವರು ತಮ್ಮ ಮೊದಲ ಹೆಂಡತಿ ರೀನಾ ದತ್ತಾಗೆ ಎರಡು ಮಕ್ಕಳಾದ ಬಳಿಕ ವಿಚ್ಛೇದನ ನೀಡಿದ್ದರು. ಈಗ ಎರಡನೇ ಹೆಂಡತಿ ಕಿರಣ್​ ರಾವ್​ಗೆ ಒಂದು ಮಗು ಆದ ನಂತರ ವಿಚ್ಛೇದನ ನೀಡಿದ್ದಾರೆ. ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಹೆಂಡತಿಯನ್ನು ಬಯಸುತ್ತಿದ್ದಾರೆ’ ಎಂದು ಸುಧೀರ್​ ಗುಪ್ತಾ ಹೇಳಿದ್ದಾರೆ.

15 ವರ್ಷ ಯಾವುದೇ ಕಿರಿಕ್​ ಇಲ್ಲದೆ ಸಂಸಾರ ನಡೆಸಿದ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರ ವಿಚ್ಛೇದನದ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಡಿವೋರ್ಸ್​ ಬಳಿಕ ತಮ್ಮ ಪುತ್ರ ಆಜಾದ್​ ರಾವ್​ ಖಾನ್​ನನ್ನು ಬೆಳೆಸುವ ಜವಾಬ್ದಾರಿಯನ್ನು ಇಬ್ಬರೂ ಸಮನಾಗಿ ಹೊಂದಿದ್ದಾರೆ. ಪಾನಿ ಫೌಂಡೇಶನ್​ ಮತ್ತು ಕೆಲವು ಸಿನಿಮಾ ಸೇರಿದಂತೆ ಅನೇಕ ಪ್ರಾಜೆಕ್ಟ್​ಗಳನ್ನು ಜೊತೆಯಾಗಿ ಮುಂದುವರಿಸುವುದಾಗಿ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ.

ಕಿರಣ್​ ರಾವ್​ಗೆ ವಿಚ್ಛೇದನ ನೀಡಿರುವ ಆಮಿರ್​ ಖಾನ್​ ಅವರು ಈಗ ಯಾರನ್ನು ಮದುವೆ ಆಗಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಆ ವಿಚಾರಗಳ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಸದ್ಯ ಅವರು ನಟಿಸಿರುವ ‘ಲಾಲ್​ ಸಿಂಗ್​ ಚೆಡ್ಡಾ’ ಸಿನಿಮಾದ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?

‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್