AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ; ಆರೋಪಿ ಅರುಣಾ ಕುಮಾರಿ ನಾಪತ್ತೆ

ನನ್ನ ಲೈಫ್ ಹಾಳಾದರೆ ಯಾರೂ ಕೂಡ ಬರುವುದಿಲ್ಲ. ನಿರ್ಮಾಪಕ ಉಮಾಪತಿ ಮಾಡಿರುವುದು ತಪ್ಪು. ಅವರ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳಬೇಕಿತ್ತು. ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ದಯವಿಟ್ಟು ನಮ್ಮನ್ನು ಬದುಕಲು ಬಿಟ್ಟುಬಿಡಿ. ನನ್ನ ಜತೆ ಉಮಾಪತಿಯನ್ನು ವಿಚಾರಣೆಗೆ ಕರೆದಿದ್ದರು.

ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ; ಆರೋಪಿ ಅರುಣಾ ಕುಮಾರಿ ನಾಪತ್ತೆ
ಅರುಣಾ ಕುಮಾರಿ
TV9 Web
| Updated By: sandhya thejappa|

Updated on:Jul 13, 2021 | 1:34 PM

Share

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಅರುಣಾ ಕುಮಾರಿ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಹಾಕಿ ಆರೋಪಿ ಅರುಣಾ ಕುಮಾರಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಜಂಬೂಸವಾರಿ ದಿಣ್ಣೆಯ ಬಾಡಿಗೆ ಮನೆಯಿಂದ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ನನ್ನ ಲೈಫ್ ಹಾಳಾದರೆ ಯಾರೂ ಕೂಡ ಬರುವುದಿಲ್ಲ. ನಿರ್ಮಾಪಕ ಉಮಾಪತಿ ಮಾಡಿರುವುದು ತಪ್ಪು. ಅವರ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳಬೇಕಿತ್ತು. ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ದಯವಿಟ್ಟು ನಮ್ಮನ್ನು ಬದುಕಲು ಬಿಟ್ಟುಬಿಡಿ. ನನ್ನ ಜತೆ ಉಮಾಪತಿಯನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೂ ಮುನ್ನವೇ ತಪ್ಪಿತಸ್ಥೆ ಎನ್ನುವುದು ಯಾಕೆ? ಎಂದು ಅರುಣಾ ಕುಮಾರಿ ಬಿಡುಗಡೆಯಾದ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಮನೆಯಲ್ಲಿ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ತೇವೆ ಅಂತಿದ್ದಾರೆ. ಉಮಾಪತಿ ಫೋನ್ ಮಾಡಿದ್ದು, ಕರೆದಿದ್ದು ಎಲ್ಲವೂ ಸತ್ಯ. ಮಾರ್ಚ್‌ ತಿಂಗಳಿಂದ ಉಮಾಪತಿ ನನಗೆ ಪರಿಚಯವಿದೆ. ಇದರಿಂದ ಉಮಾಪತಿಗೆ ಲಾಭವೋ, ನಷ್ಟವೋ ಗೊತ್ತಿಲ್ಲ. ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ಇದರಿಂದ ನನಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ನಮಗೆ ಸಿಗುತ್ತಿರುವುದು ಅವಮಾನ ಅಷ್ಟೆ ಎಂದು ಅರುಣಾ ಕುಮಾರಿ ತಿಳಿಸಿದ್ದಾರೆ.

ನನ್ನ ಪ್ರತಿಯೊಂದು ಫೋಟೋ ಕೊಡುತ್ತಿರುವುದು ನನ್ನ ಗಂಡ. ಆತನನ್ನು ನನ್ನ ಗಂಡ ಎಂದು ಹೇಳಿಕೊಳ್ಳಲೂ ಆಗಲ್ಲ. ಉಮಾಪತಿಯೇ ಹೋಗಿ ಹರ್ಷ ಬಳಿ ಮಾತಾಡಬಹುದಿತ್ತು. ನಟ ದರ್ಶನ್ ಅವರು ಒಳ್ಳೆಯವರು ಎಂದು ಹೇಳಿಕೆ ನೀಡಿದ ಅರುಣಾ ಕುಮಾರಿ ನನ್ನನ್ನು ತೇಜೋವಧೆ ಮಾಡುತ್ತಿರುವುದು ಯಾಕೆ? ಎಂದು ಕೇಳಿದ್ದಾರೆ.

ನಟ ದರ್ಶನ್ ಅವರ ಮನೆಗೆ ಹೋಗಿ ಬಂದಿದ್ದೇನೆ. ಅಲ್ಲಿಂದ ಏನಾದರೂ ಕದ್ದುಕೊಂಡು ಬಂದಿದ್ದೇನಾ? ಅವರು ಯಾರೂ ಸಹ ಲೋನ್​ಗೆ ಅಪ್ಲೈ ಮಾಡಿಲ್ಲ. ಲೋನ್‌ಗೆ ಅಪ್ರೋಚ್ ಮಾಡಿದ್ದಾರೆ ಎಂದು ನಾನು ಹೇಳಿದ್ದು. ಉಮಾಪತಿ ಉದ್ದೇಶ ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ಅವರು ಇದರಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ನನ್ನ ಜೀವನ ಹಾಳಾದರೆ ನಟ ದರ್ಶನ್, ಸ್ನೇಹಿತ ಹರ್ಷ, ನಿರ್ಮಾಪಕ ಉಮಾಪತಿ ಸೇರಿದಂತೆ ಯಾರೊಬ್ಬರೂ ಬರಲ್ಲ ಎಂದು ಅರುಣಾ ಕುಮಾರಿ ಬಿಡುಗಡೆಯಾದ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ

Umapati Press Meet: ದರ್ಶನ್ ಸರ್ ಕಳೆದುಕೊಳ್ಳಲು ನನಗೂ ಇಷ್ಟ ಇಲ್ಲ; ನಿರ್ಮಾಪಕ ಉಮಾಪತಿ

ನಾನು ಅಮಾಯಕಿ, ದಯವಿಟ್ಟು ನನ್ನನ್ನು ಬದುಕಲು ಬಿಡಿ: ಅರುಣಾ ಕುಮಾರಿ

(accused Aruna Kumari is missing from Bangalore)

Published On - 12:58 pm, Tue, 13 July 21