‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್-ಕಿರಣ್ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ
ಆಮಿರ್-ಕಿರಣ್ ವಿಚ್ಛೇದನಕ್ಕೆ ಸಂಬಂಧಿಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ವಿಚ್ಛೇದನ ಪಡೆಯುವ ಮೂಲಕ 15 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿದ್ದಾರೆ. ಅವರು ವಿಚ್ಛೇದನ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಮಿರ್ ಅವರನ್ನು ಟ್ರೋಲ್ ಮಾಡಿದ್ದಾರೆ. ‘ದಂಗಲ್’ ಚಿತ್ರದ ನಟಿ ಫಾತಿಮಾ ಶೇಖ್ಗಾಗಿ ಆಮಿರ್ ವಿಚ್ಛೇದನ ಪಡೆದರು ಎಂದು ಕೆಲವರು ಬರೆದುಕೊಂಡಿದ್ದಾರೆ. ಆಮಿರ್-ಕಿರಣ್ ವಿಚ್ಛೇದನಕ್ಕೆ ಸಂಬಂಧಿಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಆರ್ಜಿವಿ, ‘ಆಮಿರ್-ಕಿರಣ್ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರಿಂದ ಅವರಿಗೆ ಸಮಸ್ಯೆ ಇಲ್ಲ. ಆದರೆ, ಉಳಿದವರು ಚಿಂತಿಸುತ್ತಿದ್ದಾರೆ. ಟ್ರೋಲ್ ಪೇಜ್ಗಳು ಟ್ರೋಲ್ ಮಾಡುತ್ತಿವೆ. ಅದೂ ವೈಯಕ್ತಿಕವಾಗಿ’ ಎಂದಿದ್ದಾರೆ.
If #AamirKhan and #KiranRao have no problem with divorcing each other , why the F…. should anyone else have it in the whole world ? Trollers are trolling it in a stupidly personal way , whereas the couple are being personally professional !
— Ram Gopal Varma (@RGVzoomin) July 3, 2021
‘ಆಮಿರ್ ಖಾನ್ ಮತ್ತು ಕಿರಣ್ ರಾವ್ ನೀವು ಒಬ್ಬರಿಗೊಬ್ಬರು ಒಳ್ಳೆಯದನ್ನು ಬಯಸುತ್ತಿದ್ದೀರಿ. ನೀವು ಮಾಡುತ್ತಿರುವ ಈ ಕಾರ್ಯದಿಂದ ಭವಿಷ್ಯದಲ್ಲಿ ಸಂತೋಷ ಸಿಗಲಿದೆ. ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರ ವೈಯಕ್ತಿಕವಾದುದ್ದು ಮತ್ತು ಅದಕ್ಕೆ ಕಾರಣ ನಿಮಗೆ ಮಾತ್ರ ಚೆನ್ನಾಗಿ ಗೊತ್ತು. ಹೀಗಾಗಿ, ಟ್ರೋಲ್ಗಳ ಬಗ್ಗೆ ಚಿಂತೆ ಬೇಡ’ ಎಂದಿದ್ದಾರೆ ಅವರು.
‘ಮದುವೆಗಿಂತ ಡೈವೋರ್ಸ್ಅನ್ನು ಸಂಭ್ರಮಿಸಬೇಕು. ಏಕೆಂದರೆ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ವಿಚ್ಛೇದನ ಸಂಭವಿಸುತ್ತದೆ. ಅಜ್ಞಾನ ಮತ್ತು ಮೂರ್ಖತನದಿಂದ ವಿವಾಹ ನಡೆಯುತ್ತದೆ’ ಎಂದು ಆರ್ಜಿವಿ ಹೇಳಿದ್ದಾರೆ.
I wish u both #AmirKhan and #KiranRao a very RANGEELA life much more COLOURFUL than before ..I believe that a divorce should be celebrated more than a marriage because divorces happen out of knowledge and wisdom …and marriages happen out of ignorance and stupidity
— Ram Gopal Varma (@RGVzoomin) July 3, 2021
1995ರಲ್ಲಿ ತೆರೆಗೆ ಬಂದಿದ್ದ ‘ರಂಗೀಲಾ’ ಸಿನಿಮಾಗೆ ರಾಮ್ ಗೋಪಾಲ್ ವರ್ಮಾ ನಿರ್ದೇಶನವಿತ್ತು. ಈ ಚಿತ್ರದಲ್ಲಿ ಆಮಿರ್ ಖಾನ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರ ತೆರೆಕಂಡ ನಂತರದಲ್ಲಿ ಆಮಿರ್ ಹಾಗೂ ಆರ್ಜಿವಿ ನಡುವಿನ ಫ್ರೆಂಡ್ಶಿಪ್ ಮುರಿದು ಬಿದ್ದಿತ್ತು. ಇದರಲ್ಲಿ ನನ್ನದೇ ತಪ್ಪಿದೆ ಎಂದು ಆರ್ಜಿವಿ ಇತ್ತೀಚೆಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ:
ಆಮೀರ್ ಖಾನ್ಗಿಂತ ವೇಯ್ಟರ್ ಉತ್ತಮವಾಗಿ ಆ್ಯಕ್ಟ್ ಮಾಡಿದ್ದ; ಆರ್ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ
Aamir Khan: ಆಮಿರ್ ಖಾನ್-ಕಿರಣ್ ರಾವ್ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ