AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮೆರಾ ಮುಂದೆಯೇ ಸಂಪೂರ್ಣ ಬೆತ್ತಲಾದ ಜನಪ್ರಿಯ ನಟ; ಫೋಟೋ ವೈರಲ್

ಟಾಲಿವುಡ್​ನಲ್ಲಿ ಕಾಮಿಡಿ ಸಿನಿಮಾಗಳ ಮೂಲಕ ಹೆಸರಾದವರು ಸಂಪೂರ್ಣೇಶ್​ ಬಾಬು. ಈಗ ಅವರು ‘ಕಾಲಿಫ್ಲವರ್​’ ಶೀರ್ಷಿಕೆಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಬೆತ್ತಲಾಗಿ ಪೋಸ್​ ನೀಡಿದ್ದಾರೆ.

ಕ್ಯಾಮೆರಾ ಮುಂದೆಯೇ ಸಂಪೂರ್ಣ ಬೆತ್ತಲಾದ ಜನಪ್ರಿಯ ನಟ; ಫೋಟೋ ವೈರಲ್
ಕ್ಯಾಮೆರಾ ಮುಂದೆಯೇ ಸಂಪೂರ್ಣ ಬೆತ್ತಲಾದ ಜನಪ್ರಿಯ ನಟ; ಫೋಟೋ ವೈರಲ್
TV9 Web
| Updated By: ಮದನ್​ ಕುಮಾರ್​|

Updated on:Jul 04, 2021 | 1:44 PM

Share

ಈ ಹಿಂದೆ ‘ಪಿಕೆ’ ಸಿನಿಮಾದಲ್ಲಿ ನಟ ಆಮಿರ್​ ಖಾನ್​ ಅವರು ಬೆತ್ತಲಾಗಿ ನಟಿಸಿದ್ದು ನಿಮಗೆ ನೆನಪಿರಬಹುದು. ಮಾನ ಮುಚ್ಚಿಕೊಳ್ಳಲು ಅವರು ಒಂದು ರೇಡಿಯೋ ಅಡ್ಡಲಾಗಿ ಹಿಡಿದುಕೊಂಡಿದ್ದರು. ಈಗ ಅದೇ ರೀತಿ ಜನಪ್ರಿಯ ನಟ ಸಂಪೂರ್ಣೇಶ್​ ಬಾಬು ಅವರು ಬೆತ್ತಲಾಗಿದ್ದಾರೆ. ಅವರ ಹೊಸ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿದೆ. ಅದರಲ್ಲಿ ಅವರು ನಗ್ನವಾಗಿ ನಟಿಸಿರುವುದು ಗೊತ್ತಾಗಿದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟರ್​ ವೈರಲ್​ ಆಗುತ್ತಿದೆ. ಪೋಸ್ಟರ್​ನ ಹಿಂದಿರುವ ಕಹಾನಿ ಏನೆಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ಟಾಲಿವುಡ್​ನಲ್ಲಿ ಕಾಮಿಡಿ ಸಿನಿಮಾಗಳ ಮೂಲಕ ಹೆಸರಾದವರು ಸಂಪೂರ್ಣೇಶ್​ ಬಾಬು. ಕಮರ್ಷಿಯಲ್​ ಸಿನಿಮಾಗಳ ಅತಿರೇಕವನ್ನು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡುವಂತಹ ಚಿತ್ರಗಳಲ್ಲಿ ನಟಿಸಿ ಅವರು ಸಿಕ್ಕಾಪಟ್ಟೆ ಫೇಮಸ್​ ಆದವರು. ಈಗ ಅವರು ‘ಕಾಲಿಫ್ಲವರ್​’ ಶೀರ್ಷಿಕೆಯ ಹೊಸ ಸಿನಿಮಾ ಚಿತ್ರದಲ್ಲಿ ನಟಿಸುತ್ತಿದ್ದು, ಅದೇ ಚಿತ್ರದ ಪೋಸ್ಟರ್​ನಲ್ಲಿ ಸಂಪೂರ್ಣ ಬೆತ್ತಲಾಗಿ ಪೋಸ್​ ನೀಡಿದ್ದಾರೆ.

ಈ ಪೋಸ್ಟರ್​ನಲ್ಲಿ ಕೆಲವು ಸುಳಿವು ಬಿಟ್ಟುಕೊಡಲಾಗಿದೆ. ಅಸೆಂಬ್ಲಿ ಎದುರುಗಡೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡುತ್ತಿದ್ದಾರೆ. ಪೊಲೀಸರಿಂದ ಲಾಠಿ ಏಟು ತಿಂದು ಬಂದಿರುವ ಸಂಪೂರ್ಣೇಶ್​ ಪೂರ್ತಿ ಬೆತ್ತಲಾಗಿ ನಿಂತುಕೊಂಡಿದ್ದಾರೆ. ಮಾನ ಮುಚ್ಚಿಕೊಳ್ಳಲು ಹೂಕೋಸು ಅಡ್ಡಲಾಗಿ ಹಿಡಿದುಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಮಾಧ್ಯಮದ ಕ್ಯಾಮಾರಾವೊಂದು ಸೆರೆ ಹಿಡಿಯುತ್ತಿದೆ. ಇವು ‘ಕಾಲಿಫ್ಲವರ್​’ ಪೋಸ್ಟರ್​ನಲ್ಲಿ ಕಾಣಿಸಿದ ಅಂಶಗಳು.

ಆರ್​.ಕೆ. ಮಾಲಿನೇನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆಶಾ ಜ್ಯೋತಿ ಗೊಗಿನೇನಿ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಸಂಪೂರ್ಣೇಶ್​ ಬಾಬು ಜನ್ಮದಿನದಂದು ಟೀಸರ್​ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್​ಗಿಂತಲೂ ಈಗ ಹೊರಬಂದಿರುವ ಪೋಸ್ಟರ್​ ಹೆಚ್ಚು ವೈರಲ್​ ಆಗುತ್ತಿದೆ. ‘ಶೀಲಾ ರಕ್ಷತಿ ರಕ್ಷಿತಃ’ ಎಂಬ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿದೆ.

ವಾಸಂತಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಆದಷ್ಟು ಬೇಗ ಚಿತ್ರ ರಿಲೀಸ್​ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಪೂರ್ಣ ಕಾಮಿಡಿ ಶೈಲಿಯಲ್ಲಿ ‘ಕಾಲಿಫ್ಲವರ್​’ ಮೂಡಿಬರುತ್ತಿದೆ.

ಇದನ್ನೂ ಓದಿ:

ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?

ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್​

Published On - 1:36 pm, Sun, 4 July 21