AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯನಾರಾಯಣ ಕಥೆ ವಿಚಾರದಲ್ಲಿ ತಪ್ಪು ಮಾಡುವ ಮುನ್ನವೇ ಎಚ್ಚೆತ್ತುಕೊಂಡು ನಿರ್ದೇಶಕ; ಸಡನ್​ ಟ್ವಿಸ್ಟ್​

ಹಿಂದುಗಳಲ್ಲಿ ಸತ್ಯನಾರಾಯಣ ಕಥೆಯ ಬಗ್ಗೆ ಅಪಾರ ನಂಬಿಕೆ ಇದೆ. ಹಾಗಾಗಿ ಟೈಟಲ್​ ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿದೆ.

ಸತ್ಯನಾರಾಯಣ ಕಥೆ ವಿಚಾರದಲ್ಲಿ ತಪ್ಪು ಮಾಡುವ ಮುನ್ನವೇ ಎಚ್ಚೆತ್ತುಕೊಂಡು ನಿರ್ದೇಶಕ; ಸಡನ್​ ಟ್ವಿಸ್ಟ್​
ಸಮೀರ್​ ವಿದ್ವಾಂಸ್​, ಕಾರ್ತಿಕ್​ ಆರ್ಯನ್​
TV9 Web
| Edited By: |

Updated on: Jul 04, 2021 | 9:58 AM

Share

ಇತ್ತೀಚೆಗೆ ಹಲವು ಸಿನಿಮಾ ಮತ್ತು ವೆಬ್​ ಸಿರೀಸ್​ಗಳು ವಿವಾದ ಮಾಡಿಕೊಳ್ಳುತ್ತಿವೆ. ಅದರಲ್ಲೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕಿರಿಕ್​ ಆಗುತ್ತಿರುವುದೇ ಹೆಚ್ಚು. ಕನ್ನಡದ ‘ಪೊಗರು’ ಸಿನಿಮಾ, ಹಿಂದಿಯ ‘ತಾಂಡವ್​’ ವೆಬ್​ ಸರಣಿ ಸೇರಿದಂತೆ ಅನೇಕ ಉದಾಹರಣೆಗಳನ್ನು ನೋಡಬಹುದು. ಆದರೆ ಇಂಥ ಕಿರಿಕ್​ನ ಸಹವಾಸವೇ ಬೇಡ ಎಂದು ಆರಂಭದಲ್ಲಿಯೇ ಬಾಲಿವುಡ್​ನ ಸ್ಟಾರ್​ ನಟನ ಚಿತ್ರದಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಹೌದು, ಕಾರ್ತಿಕ್​ ಆರ್ಯನ್​ ನಟನೆಯ ಹೊಸ ಚಿತ್ರಕ್ಕೆ ಶೀರ್ಷಿಕೆ ಬದಲಾಗುತ್ತಿದೆ.

ನಟ ಕಾರ್ತಿಕ್​ ಆರ್ಯನ್​ ಮತ್ತು ನಿರ್ದೇಶಕ ಸಮೀರ್​ ವಿದ್ವಾಂಸ್​​ ಕಾಂಬಿನೇಷನ್​ನಲ್ಲಿ ಮೂಡಿಬರಬೇಕಿರುವ ಸಿನಿಮಾಗೆ ‘ಸತ್ಯನಾರಾಯಣ್​ ಕಿ ಕಥಾ’ ಎಂದು ಶೀರ್ಷಿಕೆ ಇಡಲಾಗಿತ್ತು. ಹಿಂದುಗಳಲ್ಲಿ ಸತ್ಯನಾರಾಯಣ ಕಥೆಯ ಬಗ್ಗೆ ಅಪಾರ ನಂಬಿಕೆ ಇದೆ. ಹಾಗಾಗಿ ಇಂಥ ಶೀರ್ಷಿಕೆಯನ್ನು ಸಿನಿಮಾಗೆ ಇಟ್ಟುಕೊಂಡು ಇಲ್ಲಸಲ್ಲದ್ದನ್ನು ತೋರಿಸಿದರೆ ಜನರು ಸಿಟ್ಟಾಗುವುದು ಗ್ಯಾರಂಟಿ ಎಂಬುದು ಚಿತ್ರತಂಡಕ್ಕೆ ಅರಿವಾದಂತಿದೆ. ಹಾಗಾಗಿ ಟೈಟಲ್​ ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ.

‘ಸೃಜನಾತ್ಮಕವಾಗಿ ಒಂದು ಸಿನಿಮಾದ ಟೈಟಲ್​ ಇಡಲಾಗುತ್ತದೆ. ಇತ್ತೀಚೆಗೆ ನಾವು ಅನೌನ್ಸ್​ ಮಾಡಿರುವ ಸತ್ಯನಾರಾಯಣ್​ ಕಿ ಕಥಾ ಚಿತ್ರದ ಶೀರ್ಷಿಕೆ ಬದಲಾಯಿಸಲು ತೀರ್ಮಾನಿಸಿದ್ದೇವೆ. ಜನರ ಭಾವನೆಗೆ ಧಕ್ಕೆ ತರುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಈ ನಿರ್ಧಾರಕ್ಕೆ ನಿರ್ಮಾಪಕರು ಮತ್ತು ಇಡೀ ಕ್ರಿಯೇಟಿವ್​ ತಂಡದ ಬೆಂಬಲ ಇದೆ. ಮುಂದಿನ ದಿನಗಳಲ್ಲಿ ಹೊಸ ಟೈಟಲ್​ ಏನೆಂಬುದನ್ನು ತಿಳಿಸುತ್ತೇವೆ’ ಎಂದು ನಿರ್ದೇಶಕ ಸಮೀರ್​ ವಿದ್ವಾಂಸ್​​ ಟ್ವೀಟ್​ ಮಾಡಿದ್ದಾರೆ.

ಈ ವರ್ಷ ಅಂತ್ಯದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಸಾಜಿದ್​ ನಾಡಿಯದ್ವಾಲಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಕರಣ್​ ಜೋಹರ್​ ಜೊತೆಗಿನ ಕಿರಿಕ್​ನ ಕಾರಣದಿಂದ ಕಾರ್ತಿಕ್​ ಆರ್ಯನ್​ ಸುದ್ದಿ ಆಗಿದ್ದರು. ‘ದೋಸ್ತಾನಾ 2’ ಸೇರಿದಂತೆ ಬಾಲಿವುಡ್​ನ ಕೆಲವು ಪ್ರಾಜೆಕ್ಟ್​ಗಳಿಂದ ಅವರನ್ನು ಕೈ ಬಿಡಲಾಗಿತ್ತು. ಪ್ರಸ್ತುತ ‘ಧಮಾಕಾ’, ‘ಭೂಲ್​ ಭುಲಯ್ಯ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!