‘ದ್ವಿತ್ವ’ ಪೋಸ್ಟರ್​ ಹಿಂದಿನ ಸತ್ಯ ತೆರೆದಿಟ್ಟು, ಫ್ಯಾನ್ಸ್​ ಬಳಿ ಕ್ಷಮೆ ಕೇಳಿದ ಪವನ್​ ಕುಮಾರ್​

Dvitva Poster: ಪುನೀತ್​ ರಾಜ್​ಕುಮಾರ್​ ನಟಿಸಲಿರುವ ‘ದ್ವಿತ್ವ’ ಪೋಸ್ಟರ್​ ಕಾಪಿ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಅದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ನಿರ್ದೇಶಕ ಪವನ್​ ಕುಮಾರ್​ ಅವರು ಹಲವು ವಿಚಾರಗಳನ್ನು ವಿವರಿಸಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

‘ದ್ವಿತ್ವ’ ಪೋಸ್ಟರ್​ ಹಿಂದಿನ ಸತ್ಯ ತೆರೆದಿಟ್ಟು, ಫ್ಯಾನ್ಸ್​ ಬಳಿ ಕ್ಷಮೆ ಕೇಳಿದ ಪವನ್​ ಕುಮಾರ್​
ಪವನ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 04, 2021 | 7:58 AM

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಮತ್ತು ಪವನ್​ ಕುಮಾರ್​ ಕಾಂಬಿನೇಷನ್​ನಲ್ಲಿ ತಯಾರಾಗಲಿರುವ ‘ದ್ವಿತ್ವ’ ಚಿತ್ರದ ಪೋಸ್ಟರ್​ ಈಗ ಭಾರೀ ಚರ್ಚೆ ಹುಟ್ಟುಹಾಕಿದೆ. ಇದು ಕಾಪಿ ಮಾಡಿರುವ ಪೋಸ್ಟರ್​ ಎಂಬ ಅಭಿಪ್ರಾಯ ಹಲವರಿಂದ ಕೇಳಿಬಂದಿದೆ. ಆ ಮಾತನ್ನು ಸಾಬೀತುಪಡಿಸುವಂತಹ ಮೂಲ ಪೋಸ್ಟರ್​ ಕೂಡ ಲಭ್ಯವಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪವನ್​ ಕುಮಾರ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಪೋಸ್ಟರ್​ ಮೇಲೆ ಕಳಂಕ ಬರಲು ಕಾರಣ ಏನು? ಇದರ ಹಿಂದಿರುವ ಸತ್ಯ ಏನು ಎಂದು ಅವರು ವಿವರಿಸಿದ್ದಾರೆ.

‘ಪೋಸ್ಟರ್ ಡಿಸೈನರ್​ ಆದರ್ಶ್​ ಅವರು ದ್ವಿತ್ವ ಪೋಸ್ಟರ್​ ವಿನ್ಯಾಸ ಮಾಡಿ ತೋರಿಸಿದಾಗ ನಾನು ಮೂಲ ಪೋಸ್ಟರ್​ ನೋಡಿರಲಿಲ್ಲ. ಲೈಸೆನ್ಸ್​ ಇರುವ ಒಂದು ಇಮೇಜ್​ ಬಳಸಿಕೊಂಡು ಆದರ್ಶ್​ ಅವರು ಈ ಪೋಸ್ಟರ್​ ವಿನ್ಯಾಸ ಮಾಡಿದ್ದರು. ಅದು ನನಗೆ ಆಗಲೇ ಗೊತ್ತಾಗಿದ್ದರೆ ನಾನು ಈ ಡಿಸೈನ್​ ಬಳಸುತ್ತಿರಲಿಲ್ಲ. ಮೂಲ ಇಮೇಜ್​ ಅನ್ನು ಕಾನೂನಿನ ಪ್ರಕಾರವೇ ಅದರ್ಶ್​ ಅವರು ಬಳಕೆ ಮಾಡಿದ್ದರೂ ಕೂಡ, ಈ ರೀತಿ ಆಗಿದ್ದು ದುರದೃಷ್ಟಕರ’ ಎಂದು ಪವನ್​ ಹೇಳಿದ್ದಾರೆ.

‘ಕದ್ದು ಪೋಸ್ಟರ್​ ಮಾಡಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ನನ್ನ ಮತ್ತು ಪೋಸ್ಟರ್​ ಡಿಸೈನರ್​ ಆದರ್ಶ್​ ನಡುವೆ ಆದ ಸಣ್ಣ ಕಮ್ಯುನಿಕೇಷನ್​ ಗ್ಯಾಪ್​ನ ಕಾರಣದಿಂದಾಗಿ ಈ ರೀತಿ ಆಯಿತು’ ಎಂದು ಪವನ್​ ಕುಮಾರ್​ ಕಾರಣ ನೀಡಿದ್ದಾರೆ.

‘ನಾನು ಪ್ರೇಕ್ಷಕರ ಜಾಗದಲ್ಲಿ ಇದ್ದಿದ್ದರೆ ನನಗೂ ಕೂಡ ಪೋಸ್ಟರ್​ ಬಗ್ಗೆ ಕಾಪಿ ಎಂಬ ಅಭಿಪ್ರಾಯ ಮೂಡುವುದು ಸಹಜ. ಇಂದಿಗೂ ನಮ್ಮ ಸ್ಕ್ರಿಪ್ಟ್​ ಮೇಲೆ ನಮಗೆ ನಂಬಿಕೆ ಇದೆ. ಪೋಸ್ಟರ್​ ಬಿಡುಗಡೆ ಆದ ನಂತರ ಕಾಪಿ ಎಂಬುದನ್ನೇ ಇಟ್ಟುಕೊಂಡು ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆ ಮಾಡಿದರು. ನೆಗೆಟಿವಿಟಿ ಯಾಕೆ ಹೆಚ್ಚು ಹರಡುತ್ತದೆ ಎಂಬುದು ನನಗೆ ಅರ್ಥ ಆಗುತ್ತಿಲ್ಲ’ ಎಂದಿದ್ದಾರೆ ಪವನ್​.

‘ಇನ್ಮುಂದೆ ಪೋಸ್ಟರ್​ ವಿನ್ಯಾಸಕರು ಈ ರೀತಿ ಲೈಸೆನ್ಸ್​ ಇರುವ ಸ್ಟಾಕ್​ ಇಮೇಜ್​ಗಳನ್ನು ಬಳಸಿಕೊಂಡಿದ್ದರೆ ದಯವಿಟ್ಟು ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಮೊದಲೇ ತಿಳಿಸಿ. ಆಗ ಇಂಥ ದುರದೃಷ್ಟಕರ ಸಂಗತಿಯನ್ನು ತಪ್ಪಿಸಬಹುದು. ಇದು ಈಗ ನಾನು ಕಲಿತ ಪಾಠ. ನಾನೇ ಕಾಪಿ ಮಾಡಿಸಿದ್ದೇನೆ ಅಂತ ತುಂಬ ಜನರು ಅಂದುಕೊಂಡಿದ್ದಾರೆ. ಆದರೆ ಅದು ಸತ್ಯವಲ್ಲ. ಆದರ್ಶ್​ ಮೇಲೆ ನಮಗೆ ನಂಬಿಕೆ ಇದೆ. ಶೂಟಿಂಗ್​ ಶುರು ಮಾಡುವುದರೊಳಗೆ ಅವರು ಇನ್ನೂ ಒಳ್ಳೆಯ ಪೋಸ್ಟರ್​ ವಿನ್ಯಾಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಯಾರಿಗಾದರೂ ಬೇಜಾರು ಆಗಿದ್ದರೆ ಕ್ಷಮಿಸಿ’ ಎಂದು ಪವನ್​ ಅವರು ವಿಡಿಯೋ ಮೂಲಕ ಹೇಳಿದ್ದಾರೆ.

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಲ್ಲಿ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ದ್ವಿತ್ವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರೀತಾ ಜಯರಾಮನ್​ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:

‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​

ಪುನೀತ್​ ರಾಜ್​ಕುಮಾರ್​ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ