ಲಾಕ್​ಡೌನ್​ ಎಫೆಕ್ಟ್​; ಕರ್ನಾಟಕದಲ್ಲಿ ಬಾಗಿಲು ಮುಚ್ಚಲಿವೆ 150 ಚಿತ್ರಮಂದಿರಗಳು

ಕೊರೊನಾ ಒಂದನೇ ಅಲೆ ಕಡಿಮೆ ಆದ ನಂತರದಲ್ಲಿ ಚಿತ್ರಮಂದಿರಗಳನ್ನು ತೆರೆಯೋಕೆ ಅವಕಾಶ ಸಿಕ್ಕಿತ್ತು. ನಿಧಾನವಾಗಿ ಸ್ಟಾರ್​ ನಟರ ಚಿತ್ರಗಳು ತೆರೆಕಂಡ ಹಿನ್ನೆಲೆಯಲ್ಲಿ ಜನರು ಚಿತ್ರಮಂದಿರದತ್ತ ಮುಖ ಮಾಡಿದ್ದರು. ಎಲ್ಲವೂ ಸರಿ ಆಯಿತು ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿತ್ತು

ಲಾಕ್​ಡೌನ್​ ಎಫೆಕ್ಟ್​; ಕರ್ನಾಟಕದಲ್ಲಿ ಬಾಗಿಲು ಮುಚ್ಚಲಿವೆ 150 ಚಿತ್ರಮಂದಿರಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಮದನ್​ ಕುಮಾರ್​

Updated on: Jul 04, 2021 | 4:11 PM

ಕೊವಿಡ್​ ಮೊದಲನೇ ಅಲೆಯಿಂದ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿದ್ದವು. ಇದಾದ ಬೆನ್ನಲ್ಲೇ ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡಿತು. ಇದರಿಂದ ಚಿತ್ರರಂಗ ಸಾಕಷ್ಟು ಏಟು ತಿಂದಿದೆ. ಕೊರೊನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಬರೋಬ್ಬರಿ 150 ಚಿತ್ರಮಂದಿರಗಳು ಮುಚ್ಚುವ ಹಂತ ತಲುಪಿವೆ.

ಕೊರೊನಾ ಒಂದನೇ ಅಲೆ ಕಡಿಮೆ ಆದ ನಂತರದಲ್ಲಿ ಚಿತ್ರಮಂದಿರಗಳನ್ನು ತೆರೆಯೋಕೆ ಅವಕಾಶ ಸಿಕ್ಕಿತ್ತು. ನಿಧಾನವಾಗಿ ಸ್ಟಾರ್​ ನಟರ ಚಿತ್ರಗಳು ತೆರೆಕಂಡ ಹಿನ್ನೆಲೆಯಲ್ಲಿ ಜನರು ಚಿತ್ರಮಂದಿರದತ್ತ ಮುಖ ಮಾಡಿದ್ದರು. ಎಲ್ಲವೂ ಸರಿ ಆಯಿತು ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿತ್ತು. ಹೀಗಾಗಿ, ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು 3.O ಅನ್‌ಲಾಕ್‌ ನಿಯಮಗಳನ್ನು ಶನಿವಾರ (ಜುಲೈ 3) ಘೋಷಣೆ ಮಾಡಿದ್ದಾರೆ. ಈ ವೇಳೆ ಚಿತ್ರಮಂದಿರಗಳನ್ನು ತೆರೆಯೋಕೆ ಅವಕಾಶ ನೀಡಿಲ್ಲ. ಇದು ಸಿನಿಪ್ರಿಯರಿಗೆ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ನಿರಾಸೆ ಉಂಟು ಮಾಡಿದೆ. ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯದಲ್ಲಿ 150 ಚಿತ್ರಮಂದಿರಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ.

‘ಅನ್​ಲಾಕ್​ ಮೂರನೇ ಹಂತದ ಪ್ರಕ್ರಿಯೆಯಲ್ಲಿ ಥಿಯೇಟರ್​ ಓಪನ್​ಗೆ ಅವಕಾಶ ಸಿಕ್ಕಿಲ್ಲ. ರಾಜ್ಯಾದ್ಯಂತ 150 ಚಿತ್ರ ಮಂದಿರಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ. ಇನ್ನು, 20ಕ್ಕೂ ಹೆಚ್ಚು ಚಿತ್ರಮಂದಿರಗಳನ್ನ ಒಡೆದು ಹಾಕುವ ಚಿಂತನೆ ನಡೆಸಲಾಗಿದೆ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಗೆ ಶೇ.50ರಷ್ಟು ಅವಕಾಶ ನೀಡಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಪ್ರದರ್ಶಕರ ವಲಯದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಚಿತ್ರರಂಗದಲ್ಲಿ ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ತಯಾರಾಗಿ ನಿಂತಿದೆ. ಪ್ರಮುಖ 5 ಬಿಗ್‌ಬಜೆಟ್ ಚಿತ್ರಗಳು ಕೂಡ ಥಿಯೇಟರ್ ಓಪನ್​​ ಆಗುವುದನ್ನೇ ಎದುರು ನೋಡುತ್ತಿವೆ. ಆದರೆ, ಆ ಎಲ್ಲಾ ಕನಸುಗಳಿಗೂ ಮತ್ತೆ ತಣ್ಣೀರು ಎರಚಿದಂತಾಗಿದೆ. ಬಿಡುಗಡೆಯ ತಯಾರಿಯಲ್ಲಿದ್ದ ಚಿತ್ರತಂಡಗಳಿಗೆ ಭಾರೀ ನಿರಾಸೆ ಉಂಟಾಗಿದೆ.

ಇದನ್ನೂ ಓದಿ: Karnataka Unlock 3.0: ಬಾರ್​ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ; ಸಿನಿಮಾ ಹಾಲ್ ಓಪನ್ ಸದ್ಯಕ್ಕಿಲ್ಲ

ಅಮೆರಿಕದಲ್ಲಿ ಸಂಚಾರಿ ವಿಜಯ್​ಗೆ ಗೌರವ; ಪ್ರತಿಷ್ಠಿತ ಫ್ರಾಂಕ್ಲಿನ್​ ಥಿಯೇಟರ್​ನಿಂದ ನಮನ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ