Karnataka Unlock 3.0: ಬಾರ್ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ; ಸಿನಿಮಾ ಹಾಲ್ ಓಪನ್ ಸದ್ಯಕ್ಕಿಲ್ಲ
ಇನ್ನು ನೈಟ್ ಕರ್ಫ್ಯೂ ಅವಧಿಯನ್ನು ಬದಲಿಸಲಾಗಿದೆ. ಈ ಮೊದಲು, ಸಂಜೆ 7 ಗಂಟೆಯ ಬಳಿಕ ನೈಟ್ ಕರ್ಫ್ಯೂ ಇತ್ತು. ಆದರೆ, ಸೋಮವಾರದ ಬಳಿಕ ನೈಟ್ ಕರ್ಫ್ಯೂ ಅವಧಿ ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ. ಅದರಂತೆ, ರಾತ್ರಿ 9 ಗಂಟೆಯವರೆಗೂ ಬಾರ್ನಲ್ಲಿ ಕುಳಿತು ಮದ್ಯ ಸೇವಿಸಬಹುದಾಗಿದೆ. ವೀಕೆಂಡ್ ಕರ್ಫ್ಯೂ ಕೂಡ ರದ್ದುಗೊಳಿಸಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನ್ಲಾಕ್ 3.0 ಮಾರ್ಗಸೂಚಿಯನ್ನು ಇಂದು (ಜುಲೈ 3) ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ಬಾರಿಯ ಅನ್ಲಾಕ್ ಮಾರ್ಗಸೂಚಿಯಿಂದ ಕೂಡ ಚಿತ್ರರಂಗಕ್ಕೆ ಸಂತಸದ ಸುದ್ದಿ ಸಿಕ್ಕಿಲ್ಲ. ಕನ್ನಡ ಚಿತ್ರರಂಗಕ್ಕೆ ಅನ್ ಲಾಕ್ 3.0 ನಿರಾಸೆ ಮೂಡಿಸಿದೆ. ಚಿತ್ರಮಂದಿರಗಳ ತೆರೆಯುವಿಕೆಗೆ ರಾಜ್ಯಸರ್ಕಾರ ಮನಸ್ಸು ಮಾಡಿಲ್ಲ. ಥಿಯೆಟರ್ ಬಾಗಿಲು ತೆಗೆಸದ ಹೊಸ ಮಾರ್ಗಸೂಚಿ ಸಿನಿಪ್ರಿಯರಿಗೂ ಬೇಸರ ಕೊಟ್ಟಿದೆ. ಶೂಟಿಂಗ್ ಕೆಲಸಗಳು ಯಥಾಪ್ರಕಾರ ಮುಂದುವರೆಯುತ್ತದೆ. ಆದರೆ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳ ತೆರೆಯುವಿಕೆಗೆ ಅನ್ಲಾಕ್ 3.0ನಲ್ಲೂ ಅವಕಾಶ ಮಾಡಿಕೊಟ್ಟಿಲ್ಲ.
ಈಗಾಗಲೇ ಚಿತ್ರರಂಗದಲ್ಲಿ ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ತಯಾರಾಗಿ ನಿಂತಿದೆ. ಪ್ರಮುಖ 5 ಬಿಗ್‌ಬಜೆಟ್ ಚಿತ್ರಗಳು ಕೂಡ ಥಿಯೇಟರ್ ಬಿಡುಗಡೆಯನ್ನು ಎದುರು ನೋಡುತ್ತಿದೆ. ಆದರೆ, ಆ ಎಲ್ಲಾ ಕನಸುಗಳಿಗೂ ಮತ್ತೆ ತಣ್ಣೀರೆರೆದಂತಾಗಿದೆ. ಬಿಡುಗಡೆಯ ತಯಾರಿಯಲ್ಲಿದ್ದ ಚಿತ್ರತಂಡಗಳಿಗೆ ಭಾರೀ ನಿರಾಸೆ ಉಂಟಾಗಿದೆ. ಈ ನಡುವೆ ಸಿನಿಮಾ ಚಿತ್ರೀಕರಣಕ್ಕೆ ಈ ಹಿಂದೆ ನೀಡಿದ್ದ ಮಾರ್ಗಸೂಚಿಯ ಅನ್ವಯ ಅವಕಾಶ ಇದೆ. ಷರತ್ತು ಬದ್ಧ ಅನುಮತಿ ಮುಂದುವರಿಯಲಿದೆ.
ಬಾರ್ ಓಪನ್ಗೆ ಅನುಮತಿ ಮತ್ತೊಂದೆಡೆ ಮದ್ಯ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಅನ್ಲಾಕ್ 3.0ನಲ್ಲಿ ಮದ್ಯ ಪ್ರಿಯರಿಗೆ ಹೊಸ ಅವಕಾಶ ಮಾಡಿಕೊಡಲಾಗಿದೆ. ಅದರಂತೆ, ಬಾರ್ನಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ. ಈ ಮೊದಲು, ಮದ್ಯ ಪಾರ್ಸೆಲ್ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿ, ಬಾರ್ನಲ್ಲೇ ಕುಳಿತು ಕುಡಿಯಲು ಅವಕಾಶ ಕೊಡಲಾಗಿದೆ. ಆದರೆ, ಬಾರ್ ಸಪ್ಲೈಯರ್ಸ್ ಅಥವಾ ರೆಸ್ಟೋರೆಂಟ್ ಸಪ್ಲೈಯರ್ಸ್ ಹಾಗೂ ಕೆಲಸಗಾರರು ಲಸಿಕೆ ಹಾಕಿಕೊಂಡಿರುವುದು ಕಡ್ಡಾಯವಾಗಿದೆ.
ಇನ್ನು ನೈಟ್ ಕರ್ಫ್ಯೂ ಅವಧಿಯನ್ನು ಬದಲಿಸಲಾಗಿದೆ. ಈ ಮೊದಲು, ಸಂಜೆ 7 ಗಂಟೆಯ ಬಳಿಕ ನೈಟ್ ಕರ್ಫ್ಯೂ ಇತ್ತು. ಆದರೆ, ಸೋಮವಾರದ ಬಳಿಕ ನೈಟ್ ಕರ್ಫ್ಯೂ ಅವಧಿ ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ. ಅದರಂತೆ, ರಾತ್ರಿ 9 ಗಂಟೆಯವರೆಗೂ ಬಾರ್ನಲ್ಲಿ ಕುಳಿತು ಮದ್ಯ ಸೇವಿಸಬಹುದಾಗಿದೆ. ವೀಕೆಂಡ್ ಕರ್ಫ್ಯೂ ಕೂಡ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: Karnataka Unlock 3.0: ಹೊಸ ಅನ್ಲಾಕ್ ಮಾರ್ಗಸೂಚಿ ಪ್ರಕಟ; ಏನೆಲ್ಲಾ ಬದಲಾವಣೆ? ಯಾವುದಕ್ಕೆಲ್ಲಾ ಅವಕಾಶ?
Karnataka Unlock 3.0: ಬಹುತೇಕ ನಿರ್ಬಂಧಗಳ ಸಡಿಲಿಕೆ; ಅನ್ಲಾಕ್ ಹೊಸ ಮಾರ್ಗಸೂಚಿ ಘೋಷಿಸಿದ ಬಿ ಎಸ್ ಯಡಿಯೂರಪ್ಪ
Published On - 8:01 pm, Sat, 3 July 21