ಬೆಂಗಳೂರಿನಲ್ಲಿ ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರ
ಮೃತಪಟ್ಟ ಯುವಕ ತಮಿಳುನಾಡು ಮೂಲದವನು ಎಂಬ ಮಾಹಿತಿ ದೊರೆತಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಹೇಳಲಾಗಿದೆ.
ಬೆಂಗಳೂರು: ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರಗೊಂಡ ದುರ್ಘಟನೆಯೊಂದು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ. ಲ್ಯಾಂಗ್ಫೋರ್ಡ್ ಹೌಸ್ ಅಪಾರ್ಟ್ಮೆಂಟ್ನಲ್ಲಿ ಹುಟ್ಟುಹಬ್ಬ ಆಚರಣೆಗೆ ಬಲೂನ್ ಪೂರೈಕೆಗೆ ಬಂದಿದ್ದ ಯುವಕನೇ ದುರ್ಘಟನೆಯಲ್ಲಿ ಮೃತಪಟ್ಟ ಯುವಕ. ಅಪಾರ್ಟ್‌ಮೆಂಟ್ ಹೊರಗೆ ಬಲೂನ್ಗೆ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಯುವಕ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟ ಯುವಕ ತಮಿಳುನಾಡು ಮೂಲದವನು ಎಂಬ ಮಾಹಿತಿ ದೊರೆತಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಹೇಳಲಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಬಲೂನ್ ಗ್ಯಾಸ್ ಸಹಿತ ಬೈಕ್ನಲ್ಲಿ ತನ್ನ ಜತೆಗಾರನೊಂದಿಗೆ ವ್ಯಕ್ತಿ ಬಂದಿದ್ದ ಎಂದು ಹೇಳಲಾಗಿದೆ. ಅಪಾರ್ಟ್‌ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ನಡೆಸುತ್ತಿದ್ದ. ಈ ವೇಳೆ ಜತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ ಎನ್ನಲಾಗಿದೆ. ಈ ವೇಳೆ ಒಬ್ಬನೇ ಬಲೂನ್ ಫಿಲ್ ಮಾಡುವ ವೇಳೆ ದುರ್ಘಟನೆ ನಡೆದಿದೆ. ಮನೆಯ ಹೊರಗಡೆ ಬಲೂನ್ ಗ್ಯಾಸ್ ಸಿಡಿದು ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
Karnataka Unlock 3.0 Guidelines: ಮಾಸ್ಕ್ ಧರಿಸದಿದ್ದರೆ ನಗರಗಳಲ್ಲಿ 250 ರೂ, ಗ್ರಾಮೀಣ ಭಾಗಗಳಲ್ಲಿ 100 ರೂ.ದಂಡ
(Youth died in Balloon gas cylinder burst in Bengaluru)
Published On - 9:13 pm, Sat, 3 July 21