AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: ಕುಟುಂಬ ಕಲಹದಿಂದ ಮಕ್ಕಳಿಗೆ ಇಲಿ ಪಾಷಾಣ ನೀಡಿದ ತಂದೆ, 5 ವರ್ಷದ ಮಗು ಸಾವು

Mumbai Crime News: ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ಕುಟುಂಬ ಕಲಹದ ಕಾರಣದಿಂದಾಗಿ ತಂದೆ ತನ್ನ ಮೂವರು ಮಕ್ಕಳಿಗೆ ಇಲಿ ಪಾಷಾಣವನ್ನು ನೀಡಿದ್ದು, ಐದು ವರ್ಷದ ಮಗುವೊಂದು ಸಾವನ್ನಪ್ಪಿದೆ ಎಂದು ಮುಂಬೈ ಪೋಲೀಸರು ತಿಳಿಸಿದ್ದಾರೆ.

ಮುಂಬೈ: ಕುಟುಂಬ ಕಲಹದಿಂದ ಮಕ್ಕಳಿಗೆ ಇಲಿ ಪಾಷಾಣ ನೀಡಿದ ತಂದೆ, 5 ವರ್ಷದ ಮಗು ಸಾವು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 03, 2021 | 1:50 PM

Share

ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ಕುಟುಂಬ ಕಲಹದಿಂದಾಗಿ ಏನೂ ಅರಿಯದ ಮಗುವೊಂದು ಬಲಿಯಾಗಿದೆ. ಕುಟುಂಬದಲ್ಲಿನ ವಿರಸದ ಕಾರಣದಿಂದ ತಂದೆ ತನ್ನ ಮೂವರು ಮಕ್ಕಳಿಗೆ ಇಲಿ ಪಾಷಾಣವನ್ನು ನೀಡಿದ್ದು, ಐದು ವರ್ಷದ ಮಗುವೊಂದು ಸಾವನ್ನಪ್ಪಿದೆ. ಉಳಿದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಂದು ಮುಂಬೈ ಪೋಲೀಸರು ತಿಳಿಸಿದ್ದಾರೆ. ತಂದೆ ಮಹಮ್ಮದ್ ಅಲಿ ನೌಷಾದ್ ಅನ್ಸಾರಿಯು(27) ಐಸ್​ಕ್ರೀಮ್​ನಲ್ಲಿ ಇಲಿ ಪಾಷಾಣವನ್ನು ಬೆರೆಸಿ ಮಕ್ಕಳಿಗೆ ನೀಡಿದ್ದ. ಅದನ್ನು ಅರಿಯದೆ ತಿಂದ ಮಕ್ಕಳಲ್ಲಿ 5 ವರ್ಷದ ಅಲಿಶಾನ್ ಮಹಮ್ಮದ್ ಅಲಿ ಅನ್ಸಾರ್ ಎಂಬ ಮಗು ಮರಣವನ್ನಪ್ಪಿದೆ. 7 ವರ್ಷದ ಅಲೀನಾ ಹಾಗೂ 2 ವರ್ಷದ ಅರ್ಮಾನ್​ಗೆ ಚಿಕಿತ್ಸೆ ನೀಡುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಮಕ್ಕಳ ತಾಯಿ ನಾಜಿಯಾ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302 ಹಾಗೂ 307ರ ಅಡಿಯಲ್ಲಿ ಮಂಖುರ್ಡ್ ಠಾಣೆಯ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ತಂದೆಯು ಪರಾರಿಯಾಗಿದ್ದು ಅವನ ಪತ್ತೆಗೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಜೂನ್ 25ರಂದು ದಂಪತಿಯ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದೆ. ನಂತರ ನಾಜಿಯಾ ತನ್ನ ಸಹೋದರಿಯ ಮನೆಗೆ ತೆರಳಿದ್ದಾಳೆ. ಆಕೆ ಹೋದ ಗಂಟೆಯೊಳಗೆ ಮಕ್ಕಳಿಗೆ ಬಲವಂತವಾಗಿ ಐಸ್​ಕ್ರೀಮ್ ಎಂದು ಇಲಿ ಪಾಷಾಣವನ್ನು ತಂದೆ ತಿನ್ನಿಸಿದ್ದಾನೆ. ಮಕ್ಕಳಿಗೆ ಅಸ್ವಸ್ಥತೆ ಉಂಟಾದಾಗ ನಾಜಿಯಾ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಮೊದಲಿಗೆ ಆಸ್ಪತ್ರೆಯವರಲ್ಲಿ ಮಕ್ಕಳು ಅರಿವಿಲ್ಲದೇ ಪಾಷಾಣ ತಿಂದಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾಳೆ. ಆದರೆ ಮಗು ತೀರಿಕೊಂಡಾಗ ನಿಜವನ್ನು ತಿಳಿಸಿದ್ದಾಳೆ. ಆಸ್ಪತ್ರೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೋಲೀಸರು ಉಳಿದ ಮಕ್ಕಳ ಹೇಳಿಕೆಗಳನ್ನೂ ಪಡೆದುಕೊಂಡಿದ್ದು ಆರೋಪಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬಚ್ಚಲಲ್ಲೇ ಹೆತ್ತು, ಮಗುವನ್ನು ನೇಣಿಗೆ ಹಾಕಿದ ತಾಯಿ; ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಕಿಟಕಿಯಲ್ಲಿ ನವಜಾತ ಶಿಶು ಪತ್ತೆ

(5 year old dead after father forcibly feeds rat poison)

Published On - 1:49 pm, Sat, 3 July 21