ಅಮೆರಿಕಾದಿಂದ ಅಂತರಿಕ್ಷಕ್ಕೆ ಹೊರಟ ಗುಂಟೂರು ಯುವತಿ; ಕಲ್ಪನಾ ಚಾವ್ಲಾ ನಂತರ ಸಾಧನೆಯತ್ತ ಮತ್ತೋರ್ವ ಭಾರತೀಯ ನಾರಿ

ಸದರಿ ಯೋಜನೆಯ ಬಗ್ಗೆ ಸ್ಪೇಸ್​.ಕಾಂ ಜತೆ ಮಾತನಾಡಿರುವ ಸಿರಿಶಾ ಬಾಂಡ್ಲಾ, ವರ್ಜಿನ್​ ಗೆಲಾಕ್ಟಿಕ್​ ನೌಕೆಯು ಅಂತರಿಕ್ಷದಲ್ಲಿ ಸುಮಾರು 60ರಿಂದ 75 ನಿಮಿಷಗಳ ಕಾಲ ಇರಲಿದೆ. ನಂತರ ನ್ಯೂ ಮೆಕ್ಸಿಕೋದಲ್ಲಿ ನಿಗದಿಪಡಿಸಿದ ಪ್ರದೇಶಕ್ಕೆ ಬಂದಿಳಿಯಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕಾದಿಂದ ಅಂತರಿಕ್ಷಕ್ಕೆ ಹೊರಟ ಗುಂಟೂರು ಯುವತಿ; ಕಲ್ಪನಾ ಚಾವ್ಲಾ ನಂತರ ಸಾಧನೆಯತ್ತ ಮತ್ತೋರ್ವ ಭಾರತೀಯ ನಾರಿ
ಸಹ ಪ್ರಯಾಣಿಕರೊಂದಿಗೆ ರಿಚರ್ಡ್​ ಬ್ರಾನ್​ಸನ್
Follow us
| Updated By: Skanda

Updated on: Jul 03, 2021 | 12:44 PM

ವಾಷಿಂಗ್ಟನ್: ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಭಾರತ ಮೂಲದ ಅಮೆರಿಕಾ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಜಿಗಿಯಲು ಸಿದ್ಧರಾಗಿದ್ದಾರೆ. ಕಲ್ಪನಾ ಚಾವ್ಲಾ ನಂತರ ಅಂತರಿಕ್ಷಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಇವರಾಗಿದ್ದು, ಒಟ್ಟಾರೆಯಾಗಿ ಈ ಸಾಧನೆ ಮಾಡುತ್ತಿರುವ ನಾಲ್ಕನೇ ಭಾರತೀಯ ವ್ಯಕ್ತಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಜುಲೈ 11ರಂದು ನ್ಯೂ ಮೆಕ್ಸಿಕೋದಿಂದ ವಿಎಸ್​ಎಸ್​ ಯುನಿಟಿ ಆಫ್ ವರ್ಜಿನ್ ಗೆಲಾಕ್ಟಿಕ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆ ಪ್ರಯಾಣ ಕೈಗೊಳ್ಳುತ್ತಿದ್ದು, ಒಟ್ಟು ಆರು ಮಂದಿಯನ್ನೊಳಗೊಂಡ ಈ ನೌಕೆಯಲ್ಲಿ ಸಿರಿಶಾ ಅವರೊಂದಿಗೆ ಇನ್ನೋರ್ವ ಮಹಿಳೆ ಬೆತ್​ ಮೊಸೆಸ್ ಇರಲಿದ್ದಾರೆ.

ಈ ಬಗ್ಗೆ ಮಾತನಾಡಿರುವ 34 ವರ್ಷದ ಭಾರತ ಮೂಲದ ಸಿರಿಶಾ ಬಾಂಡ್ಲಾ, ನನಗೆ ಈ ಯೋಜನೆಯ ಭಾಗವಾಗಿರುವುದು ಬಹಳ ಸಂತಸದಾಯಕವಾಗಿದೆ. ಯನಿಟಿ22 ಪಯಣದಲ್ಲಿ ಆರು ಜನರೊಟ್ಟಿಗೆ ನಾನೂ ಒಬ್ಬಳಾಗಿರುತ್ತೇನೆ. ಎಲ್ಲ ಜನರಿಗೂ ಬಾಹ್ಯಾಕಾಶ ಕೈಗೆಟಕುವಂತಾಗಬೇಕು ಎನ್ನುವುದೇ ಈ ಯೋಜನೆಯ ಉದ್ದೇಶ ಎಂದು ಸಿರಿಶಾ ಟ್ವೀಟ್​ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಸದರಿ ಯೋಜನೆಯ ಬಗ್ಗೆ ಸ್ಪೇಸ್​.ಕಾಂ ಜತೆ ಮಾತನಾಡಿರುವ ಸಿರಿಶಾ ಬಾಂಡ್ಲಾ, ವರ್ಜಿನ್​ ಗೆಲಾಕ್ಟಿಕ್​ ನೌಕೆಯು ಅಂತರಿಕ್ಷದಲ್ಲಿ ಸುಮಾರು 60ರಿಂದ 75 ನಿಮಿಷಗಳ ಕಾಲ ಇರಲಿದೆ. ನಂತರ ನ್ಯೂ ಮೆಕ್ಸಿಕೋದಲ್ಲಿ ನಿಗದಿಪಡಿಸಿದ ಪ್ರದೇಶಕ್ಕೆ ಬಂದಿಳಿಯಲಿದೆ ಎಂದು ತಿಳಿಸಿದ್ದಾರೆ.

ಸಿರಿಶಾ ಬಾಂಡ್ಲಾ ಮೂಲತಃ ಆಂಧ್ರಪ್ರದೇಶ ರಾಜ್ಯದ ಗುಂಟೂರಿನವರಾಗಿದ್ದು, ಟೆಕ್ಸಾಸ್​ನಲ್ಲಿ ತಮ್ಮ ಬಾಲ್ಯ ಕಳೆದಿದ್ದಾರೆ. ಸಿರಿಶಾಳ ತಂದೆ ಡಾ.ಮುರಳೀಧರ ಬಾಂಡ್ಲಾ ವಿಜ್ಞಾನಿಯಾಗಿದ್ದು ಅಮೆರಿಕಾದಲ್ಲಿ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಾತ ಬಾಂಡ್ಲಾ ರಾಘಯ್ಯಾ ಕೃಷಿ ವಿಜ್ಞಾನಿಯಾಗಿದ್ದು, ಗುಂಟೂರು ಜಿಲ್ಲೆಯ ಜನಪ್ದು ಹಳ್ಳಿಯಲ್ಲಿ ವಾಸವಿದ್ದಾರೆ. ಮೊಮ್ಮಗಳ ಈ ಸಾಧನೆಯನ್ನು ನೋಡಿದ ಅವರು ಅದರ ಬಗ್ಗೆ ಬಹಳ ಹೆಮ್ಮೆ ವ್ಯಕ್ತಪಡಿಸಿದ್ದು, ಸಿರಿಶಾ ಮೊದಲಿನಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಳು ಈಗ ಅವಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: ಸೂರ್ಯನ ಅತಿಸನಿಹದ ಚಿತ್ರ ತೆಗೆದ ಬಾಹ್ಯಾಕಾಶ ನೌಕೆ: ಸೂರ್ಯನ ಅಧ್ಯಯನಕ್ಕೆ ಸಿಕ್ಕಿದೆ ಹೊಸ ವೇಗ