ಬೆಂಗಳೂರಲ್ಲಿ ಮಳೆಯಿಂದ ಆಗುತ್ತಿರುವ ಅನಾಹುತಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ: ತನ್ವೀರ್ ಸೇಟ್
ಅಧಿಕಾರ ಹಂಚಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ತನ್ವೀರ್ ಸೇಟ್ ವೇದಾಂತಿಯಂತೆ ಉತ್ತರ ನೀಡಿದರು. ರಾಜಕಾರಣದಲ್ಲಿ ಅಧಿಕಾರ ಶಾಶ್ವತ ಅಲ್ಲ, ಮನುಷ್ಯನ ಬದುಕು ಕೂಡ ಶಾಶ್ವತವಲ್ಲ, ಹಾಗಾಗಿ ಬದುಕಲ್ಲಿ ಬಂದಿದ್ದನ್ನು ಸ್ವೀಕರಿಸಬೇಕಾಗುತ್ತದೆ, ಪ್ರಸ್ತುತವಾಗಿ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಮತ್ತು ಮುಂದೆ ಬರೋರು ಕೂಡ ನಮ್ಮ ಮುಖ್ಯಮಂತ್ರಿಯೇ ಅಗಿರುತ್ತಾರೆ ಎಂದು ಸೇಟ್ ಹೇಳಿದರು.
ವಿಜಯನಗರ, ಮೇ 20: ಬೆಂಗಳೂರಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಅನಾಹುತಗಳ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಂದ (Congress leaders) ಕೆಸರೆರಚಾಟ ಶುರುವಾಗಿದೆ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಹೊಸಪೇಟೆಯಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ತನ್ವೀರ್ ಸೇಟ್, ಮಳೆ ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರವನ್ನು ದೂರಿದರು. ಅವರು ಆಡಳಿತದಲ್ಲಿದ್ದಾಗ ಕ್ರಮಗಳನ್ನು ಜರುಗಿಸಿ ಒತ್ತುವರಿಗಳನ್ನು ತೆರವುಗೊಳಿಸಿದ್ದರೆ ಇವತ್ತು ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ತನ್ವೀರ್ ಹೇಳಿದರು. ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಹೆಸರನ್ನು ಕೈಗೆತ್ತಿಕೊಂಡು ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ, ಎಲ್ಲರ ಸಹಕಾರ ಇಲ್ಲದೆ ಹೋದರೆ ಅವರು ಕನಸು ಪೂರ್ತಿಗೊಳ್ಳುವುದಿಲ್ಲ ಎಂದು ಶಾಸಕ ಹೇಳಿದರು.
ಇದನ್ನೂ ಓದಿ: ರಾತ್ರಿ ಸುರಿದ ಭಾರಿ ಮಳೆಗೆ ನಡುಗಿದ ಬೆಂಗಳೂರು: ಸಾಯಿಲೇಔಟ್ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಅವಾಂತರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

