ಹೆಂಡತಿಯ ಕಿರುಕುಳ ತಾಳಲಾರದೆ ಅಳುತ್ತಾ ಪೊಲೀಸ್ ಕಮೀಶನರ್ ಬಳಿ ಓಡಿಬಂದ ಹುಬ್ಬಳ್ಳಿಯ ಯುವಕ
ಸಾದಿಖ್ ನಂಥ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಪತ್ನಿಯ ಕಾಟ ತಾಳಲಾರದೆ ಸಾವಿಗೆ ಶರಣಾದ ಜನರ ಬಗ್ಗೆಯೂ ನಾವು ವರದಿ ಮಾಡಿದ್ದೇವೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿ ಬಂಧನಕ್ಕೊಳಗಾಗಿರವುದು ಎಲ್ಲರಿಗೂ ಗೊತ್ತಿದೆ. ಸಾದಿಖ್ ಹೇಳೋದೆಲ್ಲ ಸತ್ಯ ಅಂತಲೂ ನಮ್ಮ ವಾದವಲ್ಲ, ಪೊಲೀಸರು ತನಿಖೆ ನಡೆಸಿ ನಿಜಾಂಶ ಬಯಲು ಮಾಡಬೇಕು.
ಹುಬ್ಬಳ್ಳಿ, ಮೇ 20: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಜೊತೆ ಕಣ್ಣೀರಲ್ಲಿ ನೀರು ಹಾಕುತ್ತಾ ಮಾತಾಡುತ್ತಿರುವ ಇವರ ಹೆಸರು ಮೊಹಮ್ಮದ್ ಸಾದಿಖ್ (Mohammad Sadiq). ಹುಬ್ಬಳ್ಳಿಯ ಈಶ್ವರ್ ನಗರನಲ್ಲಿ ವಾಸವಾಗಿದ್ದಾರೆ. ಇವರ ಸಮಸ್ಯೆಯೇನೆಂದರೆ 5 ವರ್ಷದ ಹಿಂದೆ ಮದುವೆಯಾಗಿರುವ ಪತ್ನಿ ತನ್ನ ಅಣ್ಣಂದಿರು ಮತ್ತು ತಂದೆ ತಾಯಿ ಜೊತೆ ಸೇರಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರಂತೆ. ಹುಬ್ಬಳ್ಳಿಯ ಶೋ ರೂಮೊಂದರಲ್ಲಿ ಕೆಲಸ ಮಾಡುವ ಸಾದಿಖ್, ಪತ್ನಿ ಮತ್ತು ಆಕೆಯ ಮನೆಯವರ ಟಾರ್ಚರ್ ತಾಳಲಾರದೆ ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಸಾದಿಖ್ ಹೇಳಿದ್ದನ್ನು ಕೇಳಿಸಿಕೊಂಡ ಶಶಿಕುಮಾರ್ ದೂರು ದಾಖಲಿಸುವಂತೆ ಹೇಳಿದ್ದಾರೆ.
ಇದನ್ನೂ ಓದಿ: ಫೈನಾನ್ಸ್ ಕಿರುಕುಳದಿಂದ ಸಾವಿಗೆ ಶರಣಾದ ವ್ಯಕ್ತಿಯ ತಾಯಿಯನ್ನು ಭೇಟಿಯಾದ ಪೊಲೀಸ್ ಕಮೀಶನರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

