ಪಿಎಸ್ಐ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಗರಾಜ್ ಮೇಲೆ ಸಾಲು ಸಾಲು ಆರೋಪ
ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ಪತ್ನಿ ಶಾಲಿನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪಿಎಸ್ಐ ನಾಗರಾಜ್ ವಿರುದ್ಧ ಪತ್ನಿ ತಂದೆ ತಾಯಿ ಸಾಲು ಸಾಲು ಆರೋಪ ಮಾಡಿದ್ದಾರೆ. ಮಗಳನ್ನು ಅಳಿಯ ನಾಗರಾಜನೇ ಕೊಲೆ ಮಾಡಿದ್ದಾರೆ. ಮದುವೆ ನಂತರ 2 ತಿಂಗಳು ಮಾತ್ರ ಅಳಿಯ, ಮಗಳು ಚೆನ್ನಾಗಿದ್ರು. ಗಂಡ ನಾಗರಾಜ್ ಹಲ್ಲೆ ಮಾಡ್ತಾನೆಂದು ಮಗಳು ಹೇಳಿಕೊಂಡಿದ್ದಳು. ಅವನಿಗೆ ನನ್ನ ಮಗಳ ಹಣ ಬೇಕಿತ್ತು, ಅವಳ ಜತೆ ಜೀವನ ಬೇಕಿರಲಿಲ್ಲ/ ಡೈಮಂಡ್ ರಿಂಗ್ ಕೊಡಿಸುವಂತೆ ಪುತ್ರಿ ಬಳಿ ಡಿಮ್ಯಾಂಡ್ ಮಾಡ್ತಿದ್ದ. ಇವರು ರಕ್ಷಕರಾ ಭಕ್ಷಕರಾ ಎಂದು ಶಾಲಿನಿ ತಾಯಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು, (ಮೇ 20): ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ಪತ್ನಿ ಶಾಲಿನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪಿಎಸ್ಐ ನಾಗರಾಜ್ ವಿರುದ್ಧ ಪತ್ನಿ ತಂದೆ ತಾಯಿ ಸಾಲು ಸಾಲು ಆರೋಪ ಮಾಡಿದ್ದಾರೆ. ಮಗಳನ್ನು ಅಳಿಯ ನಾಗರಾಜನೇ ಕೊಲೆ ಮಾಡಿದ್ದಾರೆ. ಮದುವೆ ನಂತರ 2 ತಿಂಗಳು ಮಾತ್ರ ಅಳಿಯ, ಮಗಳು ಚೆನ್ನಾಗಿದ್ರು. ಗಂಡ ನಾಗರಾಜ್ ಹಲ್ಲೆ ಮಾಡ್ತಾನೆಂದು ಮಗಳು ಹೇಳಿಕೊಂಡಿದ್ದಳು. ಅವನಿಗೆ ನನ್ನ ಮಗಳ ಹಣ ಬೇಕಿತ್ತು, ಅವಳ ಜತೆ ಜೀವನ ಬೇಕಿರಲಿಲ್ಲ/ ಡೈಮಂಡ್ ರಿಂಗ್ ಕೊಡಿಸುವಂತೆ ಪುತ್ರಿ ಬಳಿ ಡಿಮ್ಯಾಂಡ್ ಮಾಡ್ತಿದ್ದ. ಇವರು ರಕ್ಷಕರಾ ಭಕ್ಷಕರಾ ಎಂದು ಶಾಲಿನಿ ತಾಯಿ ಆಕ್ರೋಶ ಹೊರಹಾಕಿದ್ದಾರೆ.
ಪತಿ ಮನೆ ಬಿಟ್ಟು ಹೋಗಿದ್ದಾರೆಂದು ದೂರು ಕೊಡಲು ಹೋಗಿದ್ದಳು. ಶಿವಾಜಿನಗರ ಮಹಿಳಾ ಠಾಣೆಗೆ ಮಗಳನ್ನು ಕೌನ್ಸೆಲಿಂಗ್ಗೆ ಕರೆದಿದ್ರಂತೆ. ಠಾಣೆಗೆ ನನ್ನ ಮಗಳು ಶಾಲಿನಿ ಹೋದಾಗ ಸಿಬ್ಬಂದಿ ಬೈದು ಕಳಿಸಿದ್ದಾರೆ. ನಿನಗೆ ಬುದ್ಧಿ ಇರಲಿಲ್ವಾ ಎಂದು ಪೊಲೀಸರೇ ಬೈದಿದ್ದಾರೆ. ಮಗಳ ಶವ ನೋಡಿದ್ರೆ ಅದು ಕೊಲೆ ಮಾಡಿರುವ ರೀತಿಯಲ್ಲಿ ಇದೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತ ಶಾಲಿನಿ ತಂದೆ ಶಿವಲಿಂಗಪ್ಪ, ತಾಯಿ ಭಾರತಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: PSI ಪತ್ನಿ ಆತ್ಮಹತ್ಯೆ: ಹೈಸ್ಕೂಲ್ ಗೆಳೆಯನಿಗಾಗಿ ಮೊದಲ ಪತಿಗೆ ಡಿವೋರ್ಸ್ ನೀಡಿ ಬಂದಿದ್ದ ಮಹಿಳೆ ದುರಂತ ಅಂತ್ಯ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

