PSI ಪತ್ನಿ ಆತ್ಮಹತ್ಯೆ: ಹೈಸ್ಕೂಲ್ ಗೆಳೆಯನಿಗಾಗಿ ಮೊದಲ ಪತಿಗೆ ಡಿವೋರ್ಸ್ ನೀಡಿ ಬಂದಿದ್ದ ಮಹಿಳೆ ದುರಂತ ಅಂತ್ಯ
ಸಬ್ ಇನ್ಸ್‌ಪೆಕ್ಟರ್ ಪತ್ನಿ ಶಾಲಿನಿ ಎನ್ನುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಶಾಲಿನಿಗೆ ಒಂದು ಮದುವೆಯಾಗಿತ್ತು. ಆದರೂ ಸಹ ಹೈಸ್ಕೂಲ್ ನಲ್ಲಿ ಟ್ಯೂಷನ್ ಮೆಟ್ಸ್ ಆಗಿದ್ದ ಪಿಎಸ್ಐನನ್ನು ಮದುವೆಯಾಗಲು ಶಾಲಿನಿ, ತನ್ನ ಮೊದಲ ಗಂಡನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಪಿಎಸ್ಐನನ್ನು 2ನೇ ಮದುವೆಯಾಗಿದ್ದಳಿ. ಆದ್ರೆ, ಮೊದಲ ಗಂಡನನ್ನು ಬಿಟ್ಟು ಬಂದು ಹೈಸ್ಕೂಲ್ ಗೆಳೆಯನನ್ನ ಮದುವೆಯಾಗಿದ್ದ ಶಾಲಿನಿ ಇದೀಗ ದುರಂತ ಅಂತ್ಯಕಂಡಿದ್ದಾಳೆ

ಬೆಂಗಳೂರು, (ಮೇ 20): ಸಬ್ ಇನ್ಸ್‌ಪೆಕ್ಟರ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಹೆಚ್‌ಬಿಆರ್ ಬಡಾವಣೆಯಲ್ಲಿ (HBR Layout) ನಡೆದಿದೆ. ಕೆ.ಜಿ.ಹಳ್ಳಿ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ (KG halli PSI Nagaraj )ಪತ್ನಿ ಶಾಲಿನಿ (Shalini) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೋಮವಾರ ರಾತ್ರಿ ಹೆಚ್‌ಬಿಆರ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ಶಾಲಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗರಾಜ್ ಅವರನ್ನು ಮದುವೆಯಾಗಲು ಶಾಲಿನಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದಳು. ಹೈಸ್ಕೂಲ್ ನಲ್ಲಿ ಟ್ಯೂಷನ್ ಮೆಟ್ಸ್ನನ್ನು ಬಯಸಿ 2ನೇ ಮದುವೆಯಾಗಿದ್ದರೂ ಸಹ ಇದೀಗ ಶಾಲಿನ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಮೃತ ಶಾಲಿನಿ ಮತ್ತು ಪಿಎಸ್ಐ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಹೈಸ್ಕೂಲ್‌ನಲ್ಲಿ ಟ್ಯೂಷನ್‌ಮೆಟ್ಸ್ ಆಗಿದ್ದರು. ನಂತರ ಶಾಲಿನಿ MSc ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ನಾಗರಾಜ್ ಬೆಂಗಳೂರಿನಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದೇ ವೇಳೆ ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್‌ಗೆ ಪಿಎಸ್‌ಐ ಪರೀಕ್ಷೆ ತಯಾರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಹೀಗೆ ಮುಂದುವರಿಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಾಗರಾಜ್ ಪರಿಚಯ ಆದಮೇಲೆ ಮೊದಲ ಪತಿಗೆ ಶಾಲಿನಿ ಡಿವೋರ್ಸ್ ನೀಡಿ ನಾಗರಾಜ್ನನ್ನು 2ನೇ ಮದುವೆಯಾಗಿದ್ದು. ಸದ್ಯ ಮೃತ ಶಾಲಿನಿಗೆ 7 ವರ್ಷದ ಮಗು ಇದೆ.
ಇದನ್ನೂ ಕೇಳಿ: ಪಿಎಸ್ಐ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಗರಾಜ್ ಮೇಲೆ ಸಾಲು ಸಾಲು ಆರೋಪ
2020ರಲ್ಲಿ ಪಿಎಸ್‌ಐ ಎಕ್ಸಾಂ ಪಾಸ್ ಮಾಡಿದ್ದ ನಾಗರಾಜ್, ಶಾಲಿನಿಯನ್ನ ಅವಾಯ್ಡ್ ಮಾಡಲು ಶುರು ಮಾಡಿದ್ದನಂತೆ. ಮದುವೆ ಆಗದೆ ಮೋಸ ಮಾಡುತ್ತಿದ್ದಾನೆಂದು ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ಮೇಲೆ ಶಾಲಿನಿ ದೂರು ನೀಡಿದ್ದರು. ಆಗ ಹಿರಿಯ ಅಧಿಕಾರಿಗಳು ಬಗೆಹರಿಸಿದ್ದರು. ಬಳಿಕ ಶಾಲಿನಿ ಕುಟುಂಬಸ್ಥರ ವಿರೋಧದ ನಡುವೆಯೇ 2024ರ ಆಗಸ್ಟ್ ನಲ್ಲಿ ನಾಗರಾಜ್ ಮದುವೆಯಾಗಿದ್ದು, ಇಬ್ಬರು HBR ಲೇಔಟ್ ನಲ್ಲಿ ವಾಸವಾಗಿದ್ದರು.
ಆದರೆ ಕಳೆದೆರಡು ತಿಂಗಳಿನಿಂದ ಶಾಲಿನಿ ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ. ಇತ್ತ ಪತಿ ಮನೆಗೆ ಬರುತ್ತಿಲ್ಲವೆಂದು ಕೋಪಗೊಂಡ ಶಾಲಿನಿ ನಿನ್ನೆ ರಾತ್ರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾಯುತ್ತೇನೆಂದು ಹೇಳಿ ಮನೆಯಿಂದ ಹೊರಟ್ಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ದರು. ಆದ್ರೆ, ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪಿ.ಎಸ್.ಐ ನಾಗರಾಜ್ ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Tue, 20 May 25








