AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಸಾವಿಗೆ ಪ್ರತೀಕಾರ: ತನ್ನ ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಹತ್ಯೆಗೈದ

ಮಂಡ್ಯ ಜಿಲ್ಲೆಯ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿ ದಿಪೀಕಾ ಹತ್ಯೆಗೆ ಆಕೆಯ ತಂದೆ ಪ್ರತೀಕಾರ ತೀಸಿಕೊಂಡಿದ್ದಾನೆ. ನಿತೀಶ್ ಎನ್ನುವಾತ 28-ವರ್ಷ ವಯಸ್ಸಿನ ದೀಪಿಕಾಳನ್ನ ಕೊಲೆ ಮಾಡಿ ಬಳಿಕ ಮೇಲುಕೋಟೆ ಬೆಟ್ಟದ ಬಳಿ ಹೂತಿಟ್ಟಿದ್ದ. ಇದೀಗ ಒಂದು ವರ್ಷದ ಬಳಿಕ ನಿತೀಶ್ ತಂದೆಯನ್ನೇ ದೀಪಿಕಾಳ ತಂದೆ ಬರ್ಬರವಾಗಿ ಕೊಲೆ ಮಾಡಿ ಮಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದ್ದಾನೆ.

ಮಗಳ ಸಾವಿಗೆ ಪ್ರತೀಕಾರ: ತನ್ನ ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಹತ್ಯೆಗೈದ
Mandya Deepika Murder Case
ದಿಲೀಪ್​, ಚೌಡಹಳ್ಳಿ
| Edited By: |

Updated on: May 06, 2025 | 4:24 PM

Share

ಮಂಡ್ಯ, (ಮೇ 06): ಮಗಳ ಸಾವಿಗೆ ಪ್ರತೀಕಾರಕ್ಕೆ ಹತ್ಯೆ ಆರೋಪಿಯ ತಂದೆಯನ್ನೇ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ. ಮಾಣಿಕ್ಯನಹಳ್ಳಿ (Manikyanahalli) ಗ್ರಾಮದ ನರಸಿಂಹೇಗೌಡ ಕೊಲೆ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿ. ಮಾಣಿಕ್ಯಹಳ್ಳಿ ಗ್ರಾಮದ ದೀಪಿಕಾಳನ್ನು ((Deepika)) ಅದೇ ಗ್ರಾಮದ ನಿತೀಶ್ ಎಂಬಾತ 2024ರ ಜನವರಿ 22 ರಂದು ಬರ್ಬರವಾಗಿ ಕೊಲೆ ಮಾಡಿದ್ದ. ಇದೇ ಪ್ರತೀಕಾರವಾಗಿ ದೀಪಳ ತಂದೆ ವೆಂಕಟೇಶ್, ತನ್ನ ಮಗಳ ಹಂತಕನ ತಂದೆ ನರಸಿಂಹೇಗೌಡ ಹತ್ಯೆ ಮಾಡಿದ್ದಾನೆ. ನನ್ನ ಮಗಳನ್ನ ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದಿಯಾ ಎಂದು ಬರ್ಬರವಾಗಿ ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ.

ಘಟನೆ ಹಿನ್ನೆಲೆ

ದೀಪಿಕಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22 ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನಯ ಕೊಲೆ ಮಾಡಿದ್ದಾನೆ. 2024 ಜನವರಿ 19 ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು. ಬಳಿಕ ಆಕೆ ಜನವರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೊಲೆ‌ ಮಾಡಿದ್ದು ಬೇರೆ ಯಾರು ಅಲ್ಲ ನಿತೀಶ್ ಎಂದು ತಿಳಿದಿತ್ತು.

ಇದನ್ನೂ ಓದಿ: ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು

ಟೀಚರ್ ದೀಪಿಕಾ ಮತ್ತು ನಿತೀಶ್ ನಡುವೆ ಕೊಲೆಗಿಂತ ಎರಡು ವರ್ಷ ಮುಂಚಿನಿಂದಲು ಸಲುಗೆ ಇತ್ತಂತೆ. ಇಬ್ಬರ ಸಲುಗೆ ನೋಡಿ ನಿತೀಶ್‌ಗೆ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ವಾರ್ನಿಂಗ್ ಕೂಡ ಕೊಟ್ಟಿದ್ದರು. ನಿತೀಶ್ ಜೊತೆಗಿನ ಸಲುಗೆ ಬಗ್ಗೆ ಪ್ರಶ್ನಿಸಿದ್ದಾಗ ಆತ ತಮ್ಮ ಇದ್ದಂತೆ ಎಂದು ದೀಪಿಕಾ ಹೇಳಿಕೊಂಡಿದ್ದಳು. ಕುಟುಂಬಸ್ಥರ ವಾರ್ನಿಂಗ್ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು .ಇದರಿಂದ ದೀಪಿಕಾಳ ಜೊತೆಗಿನ ಒಡನಾಟವಿಲ್ಲದೇ ನಿತೀಶ್ ಘಾಸಿಗೊಂಡಿದ್ದ. ನಂತರ 2024 ಜನವರಿ 19 ರಂದು ತನ್ನ ಬರ್ತ್ ಡೇ ನೆಪದಲ್ಲಿ ಬೆಟ್ಟದ ತಪ್ಪಲಿಗೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದ. ಈ ಶರ್ಟ್ ಕೂಡ ಗಿಫ್ಟ್ ಕೊಡಲು ದೀಪಿಕಾ ಹೋಗಿದ್ದಳು. ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ನಿತೀಶ್‌ನ್ನು ಅವೈಡ್ ಮಾಡುತ್ತಿದ್ದಕ್ಕೆ ದೀಪಿಕಾ ಮೇಲೆ ಸಾಕಷ್ಟು ಆಕ್ರೋಶ ಕೂಡ ಇತ್ತು. ಇದೇ ಕಾರಣಕ್ಕೆ ದೀಪಿಕಾಳನ್ನು ಹತ್ಯೆ ಮಾಡಿದ್ದ.

ಇದನ್ನೂ ಓದಿ
Image
ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ
Image
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!
Image
ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿಯ ಶವ ಪತ್ತೆ, ಕೊಲೆ ಶಂಕೆ
Image
ಕಾಣೆಯಾಗಿದ್ದ ಮೇಲುಕೋಟೆಯ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾಳ ಶವ ಪತ್ತೆ

ಇದಾದ ಬಳಿಕ ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಸ್ಕೆಚ್ಚು ಹಾಕಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ಸಹ ಇತ್ತು. ಇಂದು ನಿತೀಶ್ ತಂದೆ ನರಸಿಂಹೇಗೌಡ ಮನೆಯಿಂದ ಹೋರಹೋಗಿದ್ದಾರೆ. ಈ ವೇಳೆ ಫಾಲೋ ಮಾಡಿಕೊಂಡು ಹೋದ ವೆಂಕಟೇಶ್, ಊರ ಹೊರಗೆ ಇದ್ದ ಟೀ ಅಂಗಡಿಯಲ್ಲಿ ಬಳಿ ಕುಳಿತಿದ್ದ ನರಸಿಂಹೇಗೌಡಗೆ ವೆಂಕಟೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.‌ ಕೊಲೆ ಮಾಡುವ ವೇಳೆ ನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡುತ್ತಿದ್ದೀಯಾ ಎಂದು ಹೇಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಒಟ್ಟಾರೆ ಒಂದು ವರ್ಷದ ಬಳಿಕ ಕೊಲೆ‌ ಕೇಸ್‌ನಲ್ಲಿ ಜೈಲು ಸೇರಿದ್ದ ಮಗ ಮನೆಗೆ ಬಂದ, ಜೊತೆಗೆ ಮಗಳ‌ ಮದುವೆ ನಡೆಯುತ್ತಿದೆ ಎಂಬ ಖುಷಿಯಲ್ಲಿ ಇದ್ದ ನರಸಿಂಹೇಗೌಡ‌ನನ್ನು ಮಗಳ ಕೊಲೆಯ ಪ್ರತೀಕಾರಕ್ಕಾಗಿ ವೆಂಕಟೇಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ.

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More