AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯಪ್ರಿಯರಿಗೆ ಬಿಗ್ ಶಾಕ್: ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ ಬ್ಯಾನ್

ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ (FSSAI) ಓಲ್ಡ್ ಮಾಂಕ್ ಸೇರಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಮತ್ತು ಬಣ್ಣಗಳನ್ನು ಪತ್ತೆ ಹಚ್ಚಿದೆ. 'ಏಜ್ಡ್' ಮದ್ಯ ಎಂದು ತಪ್ಪು ಮಾಹಿತಿ ನೀಡಿ ಗ್ರಾಹಕರನ್ನು ವಂಚಿಸುತ್ತಿರುವುದು ಪ್ರಯೋಗಾಲಯ ತಪಾಸಣೆಯಲ್ಲಿ ದೃಢಪಟ್ಟಿದೆ. FSSAI ಈ ಬ್ರ್ಯಾಂಡ್‌ಗಳನ್ನು ನಿರ್ಬಂಧಿಸಿದ್ದು, ಮದ್ಯ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮದ್ಯಪ್ರಿಯರಿಗೆ ಬಿಗ್ ಶಾಕ್: ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ ಬ್ಯಾನ್
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on:Aug 05, 2026 | 6:59 PM

Share

ಬೆಂಗಳೂರು ಆ. 5: ಓಲ್ಡ್ ಮಾಂಕ್ ರಮ್ ಹಾಗೂ ಹಲವು ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳ ಪ್ರಿಯರಿಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಭಾರಿ ಆಘಾತ ನೀಡಿದೆ. ಜನಪ್ರಿಯ ಮದ್ಯದ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಹಾಗೂ ಬಣ್ಣಗಳನ್ನು ಬೆರೆಸಿ ಗ್ರಾಹಕರಿಗೆ ದಾರಿತಪ್ಪಿಸುವ ಮಾಹಿತಿ ನೀಡಿ ಮೋಸ ಮಾಡುತ್ತಿರುವುದು ಎಫ್‌ಎಸ್‌ಎಸ್‌ಎಐ (FSSAI) ನಡೆಸಿದ ಪ್ರಯೋಗಾಲಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಪ್ರಮುಖ ಬ್ರ್ಯಾಂಡ್‌ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ.

ಭಾರತದ ಅತ್ಯಂತ ಹಳೆಯ ರಮ್ ಬ್ರ್ಯಾಂಡ್‌ ಆದ ಓಲ್ಡ್ ಮಾಂಕ್ (Old Monk), ಹಾಗೂ ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳಾದ ಆ್ಯಂಟಿಕ್ವಿಟಿ (Antiquity), ರಾಯಲ್ ಚಾಲೆಂಜ್ (Royal Challenge), ಮತ್ತು ಬ್ಯಾಗ್‌ಪೈಪರ್ ಡಿಲಕ್ಸ್ (Bagpiper Deluxe) ಸೇರಿದಂತೆ ಹಲವು ಪ್ರಸಿದ್ಧ ಮದ್ಯಗಳಲ್ಲಿ ಕೃತಕ ಫ್ಲೇವರ್ ಬೆರೆಸಿರುವುದು ಸಾಬೀತಾಗಿದೆ.

ಸಾಮಾನ್ಯವಾಗಿ ರಮ್ ಮತ್ತು ವಿಸ್ಕಿಯನ್ನು ಬೆಲ್ಲದ ರಸ, ಮಾಲ್ಟ್ ಅಥವಾ ದ್ರಾಕ್ಷಿ ಬಳಸಿ ನೈಸರ್ಗಿಕವಾಗಿ ಫರ್ಮಂಟೇಶನ್ ಹಾಗೂ ಮ್ಯಾಚ್ಯುರೇಶನ್ ಮಾಡಿ ಸುವಾಸನೆ ತರಲಾಗುತ್ತದೆ. ಆದರೆ ಈ ಕಂಪನಿಗಳು ನ್ಯೂಟ್ರಲ್ ಆಲ್ಕೋಹಾಲ್‌ಗೆ ಕೃತಕ ರಮ್ ಹಾಗೂ ವಿಸ್ಕಿ ಫ್ಲೇವರ್‌ಗಳನ್ನು ಬೆರೆಸಿ ಮಾರಾಟ ಮಾಡುತ್ತಿದ್ದವು. 7 ವರ್ಷ ಹಾಗೂ 12 ವರ್ಷ ಹಳೆಯ ‘ಏಜ್ಡ್ ಮದ್ಯ’ ಎಂದು ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ ಮದ್ಯಗಳು, ಪ್ರಯೋಗಾಲಯ ತಪಾಸಣೆಯಲ್ಲಿ ಕನಿಷ್ಠ 1 ವರ್ಷವೂ ಬ್ಲೆಂಡ್ ಆಗಿಲ್ಲ ಎಂಬ ಭೀಕರ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಾಲೇತರ ಪನೀರ್ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, 1 ಲಕ್ಷ ರೂ. ದಂಡ

ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡಿ, ದಾರಿತಪ್ಪಿಸುವ ಜಾಹೀರಾತು ಹಾಗೂ ಲೇಬಲ್ ನೀಡುತ್ತಿದ್ದ ಈ ಬ್ರ್ಯಾಂಡ್‌ಗಳನ್ನು FSSAI ನಿರ್ಬಂಧಿಸಿದ್ದು, ಕೇಂದ್ರ ಆಹಾರ ಇಲಾಖೆ ಮದ್ಯ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೆ ಮುಂದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Wed, 5 August 26

Follow Us
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ