AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಹಾಲೇತರ ಪನೀರ್ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, 1 ಲಕ್ಷ ರೂ. ದಂಡ

ನಕಲಿ ಮತ್ತು ಕಲಬೆರಕೆ ಡೈರಿ ಉತ್ಪನ್ನಗಳ ಮಾರಾಟಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಅನಲಾಗ್ ಪನೀರ್ ಅಥವಾ ಹಾಲೇತರ ಪನೀರ್ ತಯಾರಿಕೆ ಮತ್ತು ಮಾರಾಟವನ್ನು ರಾಜ್ಯದಾದ್ಯಂತ ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಛತ್ತೀಸ್‌ಗಢದ ನಂತರ ಇಂತಹ ಕಠಿಣ ನಿಷೇಧವನ್ನು ಜಾರಿಗೆ ತಂದ ದೇಶದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಮಹಾರಾಷ್ಟ್ರದಲ್ಲಿ ಹಾಲೇತರ ಪನೀರ್ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, 1 ಲಕ್ಷ ರೂ. ದಂಡ
Analogue PaneerImage Credit source: Getty Image
ಸುಷ್ಮಾ ಚಕ್ರೆ
|

Updated on:Aug 05, 2026 | 3:29 PM

Share

ಮುಂಬೈ, ಆಗಸ್ಟ್ 5: ನಾವು ಸೇವಿಸುವ ಆಹಾರ ಎಷ್ಟು ಕಲಬೆರಕೆ ಆಗುತ್ತಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದೀಗ ಹಾಲೇತರ ಪನೀರ್ (Paneer) ಅಥವಾ ಅನಲಾಗ್ ಪನೀರ್ (Analogue paneer) ಬಳಕೆಯ ಮೇಲೆ ನಿಷೇಧ ಹೇರಿದೆ. ನೋಡಲು ಹಾಲಿನ ಪನೀರ್ ರೀತಿಯೇ ಇರುವ ಅನಲಾಗ್ ಪನೀರ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಛತ್ತೀಸ್‌ಗಢದ ನಂತರ ಇಂತಹ ನಿಷೇಧವನ್ನು ಹೇರಿದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಮಹಾರಾಷ್ಟ್ರ ರಾಜ್ಯದಾದ್ಯಂತ ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿಕ್ಷೆಯ ಪ್ರಮಾಣ:

ನಿಷೇಧ ಹೇರಿದರೂ ಅನಲಾಗ್ ಪನೀರ್ ಬಳಸುವವರಿಗೆ ಆಹಾರ ಭದ್ರತೆ ಮತ್ತು ಮಾನದಂಡಗಳ ಕಾಯ್ದೆ 2006ರ (FSSAI) ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ, 2 ಲಕ್ಷ ಮನೆಗಳಿಗೆ ವಿದ್ಯುತ್ ಸ್ಥಗಿತ

ಸಾಮಾನ್ಯ ಉಲ್ಲಂಘನೆ: 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ.

ಅಸುರಕ್ಷಿತ ಆಹಾರದಿಂದ ಸಾವು ಸಂಭವಿಸಿದರೆ: ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗ್ರಾಹಕರಿಗೆ ವಂಚನೆ: ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ನಂಬಿಸಿ ಮಾರಾಟ ಮಾಡುವುದು ಗ್ರಾಹಕರನ್ನು ಹಾದಿತಪ್ಪಿಸುವ ಮತ್ತು ಕಾನೂನುಬಾಹಿರ ವ್ಯಾಪಾರ ಜಾಲಕ್ಕೆ ಸೇರುತ್ತದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ.

ಏನಿದು ‘ಅನಲಾಗ್’ ಪನೀರ್?:

ಅನಲಾಗ್ ಪನೀರ್ ಎಂಬುದು ಸಾಂಪ್ರದಾಯಿಕ ಹಾಲಿನ ಕೊಬ್ಬಿನ (ಮಲೈ) ಬದಲಿಗೆ ಸಸ್ಯಜನ್ಯ ಎಣ್ಣೆ (ಪಾಮ್ ಆಯಿಲ್), ಸ್ಟಾರ್ಚ್ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸುವ ಹಾಲೇತರ ಪನೀರ್ ಉತ್ಪನ್ನವಾಗಿದೆ. ಆಹಾರ ಭದ್ರತಾ ಪ್ರಾಧಿಕಾರದ (FSSAI) ನಿಯಮಾವಳಿಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದ ಮಾತ್ರ ತಯಾರಿಸಬೇಕು. ಅದರಲ್ಲಿ ಯಾವುದೇ ಪಿಷ್ಟ (ಸ್ಟಾರ್ಚ್) ಅಥವಾ ಹಾಲೇತರ ಕೊಬ್ಬನ್ನು ಸೇರಿಸುವಂತಿಲ್ಲ. FSSAI ಅನಲಾಗ್ ಪನ್ನೀರ್ ಮಾರಾಟಕ್ಕೆ ಅವಕಾಶ ನೀಡುತ್ತದೆಯಾದರೂ, ಅದನ್ನು ‘ಅನಲಾಗ್’ ಎಂದೇ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ, ಹೆಚ್ಚಿನ ಹೋಟೆಲ್ ಹಾಗೂ ವ್ಯಾಪಾರಿಗಳು ಇದನ್ನು ಅಸಲಿ ಪನೀರ್ ಎಂದೇ ಮಾರಿ ವಂಚಿಸುತ್ತಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಪೇಪರ್ ಲೀಕ್ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ

ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಅನಲಾಗ್ ಪನೀರ್ ನಿಷೇಧಿಸುವಂತೆ ಶಾಸಕರು ಒತ್ತಾಯಿಸಿದ್ದರು. ಪ್ರಸ್ತುತ ಜುಲೈ 30ರ ಆದೇಶದ ಮೂಲಕ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಮೇ ತಿಂಗಳಿನಿಂದ ಮಹಾರಾಷ್ಟ್ರದಾದ್ಯಂತ ನಕಲಿ ಹಾಲು ಮತ್ತು ಪನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ (FDA) ಭಾರಿ ದಾಳಿಗಳನ್ನು ನಡೆಸುತ್ತಿದೆ. ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸುಮಾರು 1,400 ಕೆಜಿ ನಕಲಿ ಪನೀರ್ ಅನ್ನು ವಶಪಡಿಸಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:28 pm, Wed, 5 August 26

Follow Us
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ