AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಟೆರೇಸ್‌ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು

ಸುಮ್ಮನೆ ಜಾಗ ಏಕೆ ಖಾಲಿ ಬಿಡೋದು ಅಂದು ಅನೇಕರು ತಮ್ಮ ಮನೆಯ ಟೆರೇಸ್‌ ಮೇಲೆ ಸೊಪ್ಪು, ತರಕಾರಿ, ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ತರಕಾರಿ ಮಾತ್ರವಲ್ಲದೆ ಡ್ರ್ಯಾಗನ್‌ ಹಣ್ಣನ್ನು ಸಹ ಈಸಿಯಾಗಿ ಟೆರೇಸ್‌ ಮೇಲೆ ಬೆಳೆಸಬಹುದು. ಹೌದು ಈ ಕೆಲವೊಂದು ನಿಯಮಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಬಾಲ್ಕನಿ ಮತ್ತು ಟೆರೇಸ್‌ ಮೇಲೆ ಡ್ರ್ಯಾಗನ್‌ ಫ್ರೂಟ್‌ ಬೆಳೆಯಬಹುದು.

ಮನೆ ಟೆರೇಸ್‌ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 05, 2026 | 7:21 PM

Share

ಡ್ರ್ಯಾಗನ್‌ ಹಣ್ಣಿನಲ್ಲಿ (dragon fruit) ಕ್ಯಾಲೋರಿ ಕಡಿಮೆ ಆದರೆ ಕಬ್ಬಿಣ, ಸತು, ಪ್ರೋಟೀನ್‌, ರಂಜಕ, ಮೆಗ್ನೇಸಿಯಂನಂತಹ  ಅಗತ್ಯ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಹಣ್ಣು ತೂಕ ಇಳಿಕೆಗೆ, ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಚರ್ಮದ ಆರೋಗ್ಯಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾನೇ ಸಹಕಾರಿ.  ಹೀಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್‌ ಹಣ್ಣು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಜೊತೆಗೆ ಈ ಹಣ್ಣಿನ ಬೆಲೆಯೂ ಜಾಸ್ತಿ. ಆದ್ದರಿಂದ ಈ ಹಣ್ಣನ್ನು ಮನೆಯಲ್ಲಿ ಬೆಳೆಯುವುದು ತುಂಬಾನೇ ಕಷ್ಟಕರವೆಂದು ಅನೇಕರು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ, ಈ ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ಡ್ರ್ಯಾಗನ್‌ ಫ್ರೂಟ್‌ ಅನ್ನು ಮನೆ ಟೆರೇಸ್‌ ಮೇಲೆ ಅಥವಾ ಬಾಲ್ಕನಿಯಲ್ಲಿಯೇ ಈಸಿಯಾಗಿ ಬೆಳೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮನೆಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಈ ಸಲಹೆ ಅನುಸರಿಸಿ:

ಟಬ್‌ ಅಥವಾ ಮಡಕೆಯ ಆಯ್ಕೆ: ಡ್ರ್ಯಾಗನ್ ಫ್ರೂಟ್ ಕ್ಯಾಕ್ಟಸ್‌ ಅಥವಾ ಕಳ್ಳಿ ತರಹದ ಸಸ್ಯವಾಗಿದ್ದರೂ, ಅದರ ಬೇರುಗಳು ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತವೆ ಮತ್ತು ಸಸ್ಯ ಸಾಕಷ್ಟು ಭಾರವಾಗಿರುತ್ತದೆ. ಆದ್ದರಿಂದ, ಅದಕ್ಕೆ ಸ್ವಲ್ಪ ದೊಡ್ಡದಾದ ಡ್ರ್ಯಾಗನ್ ಟಬ್, ಮಣ್ಣಿನ ಮಡಕೆ ಬೇಕಾಗುತ್ತದೆ. ಕನಿಷ್ಠ 16 ರಿಂದ 20 ಇಂಚಿನ ಟಬ್‌ ಇದ್ರೆ ಒಳ್ಳೆಯದು. ಇಲ್ಲವೇ ಅರ್ಧ ಕಟ್‌ ಮಾಡಿರುವ ಡ್ರಮ್‌ ಕೂಡ ನೀವು ಬಳಸಬಹುದು. ಮಡಕೆ ಒಳಗೆ ನೀರು ನಿಲ್ಲದಂತೆ ನೋಡಿಕೊಳ್ಳಲು ಅದರ ಅಡಿಯಲ್ಲಿ ಸಣ್ಣ ರಂಧ್ರಗಳನ್ನು ಕೊರೆಯಿರಿ.

ಸಸಿಯ ಆಯ್ಕೆ: ಬೀಜಗಳಿಂದ ಸಸಿ ಬೆಳೆಸುವ ಬದಲು ನರ್ಸರಿಗಳಿಂದ ಉತ್ತಮ ಸಸಿಗಳನ್ನು ಖರೀದಿಸುವುದು ಉತ್ತಮ. ಏಕೆಂದರೆ ಬೀಜದಿಂದ ಬೆಳೆದ ಗಿಡ ಹಣ್ಣುಗಳನ್ನು ನೀಡಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ, ಅದೇ ಕತ್ತರಿಸಿದ ಸಸಿಗಳು ವರ್ಷದೊಳಗೆ ಫಸಲು ನೀಡುತ್ತವೆ.  ನೀವು  ಕೆಂಪು ಅಥವಾ ಗುಲಾಬಿ ಬಣ್ಣದ ಪ್ರಭೇದದ ಡ್ರ್ಯಾಗನ್‌ ಸಸಿಗಳನ್ನು ಖರೀದಿಸಿ. ನೀವು ನೆಡುವ ಡ್ರ್ಯಾಗನ್‌ ಸಸಿ 12 ರಿಂದ 18 ಇಂಚು ಎತ್ತರ ಇದ್ದರೆ ತುಂಬಾ ಒಳ್ಳೆಯದು.

ಮಣ್ಣಿನ ಆಯ್ಕೆ: ಡ್ರಾಗನ್ ಗಿಡಗಳನ್ನು ಬೆಳೆಯಲು  ಮರಳು ಮಿಶ್ರಿತ ಮಣ್ಣು ಸೂಕ್ತ, ಏಕೆಂದರೆ ಅದರಲ್ಲಿ ನೀರು ನಿಲ್ಲುವುದಿಲ್ಲ. ನೀರು ಅತಿಯಾದರೆ ಸಸ್ಯದ ಬೇರುಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಮಣ್ಣು ಮತ್ತು ಗೊಬ್ಬರದ ಆಯ್ಕೆ ಹೇಗಿರಬೇಕೆಂದರೆ ತೋಟದ ಮಣ್ಣು 40%, ಸಾವಯವ ಗೊಬ್ಬರ ಅಥವಾ ಹಸುವಿನ ಗೊಬ್ಬರ ಅಥವಾ ಎರೆಹುಳು ಗೊಬ್ಬರ: 40%, ಬಿಳಿ ಮರಳು 10%, 10% ಕೊಕೊಪೀಟ್‌ ಮತ್ತು ಬೋನ್‌ ಮೀಲ್. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಟಬ್‌ಗೆ ಹಾಕಿ ಗಿಡಗಳನ್ನು ನೆಡಿ. ಮತ್ತು ಬುಡಕ್ಕೆ ಸ್ವಲ್ಪ ನೀರು ಹಾಕಿ. ಈ ಗಿಡ ಬಳ್ಳಿಯಂತೆ ಬೆಳೆಯುವುದರಿಂದ, ಗಿಡ ನೆಟ್ಟ ಬಳಿಕ ಅದರ ಪಕ್ಕದಲ್ಲಿ ಮರದ ಕೋಲು ಅಥವಾ ಕಬ್ಬಿಣದ ಕಂಬವನ್ನು ಆಧಾರವಾಗಿ ಇಡಬೇಕು.

ಇದನ್ನೂ ಓದಿ: ಸಕಾರಾತ್ಮಕತೆಯನ್ನು ಹರಡುವ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು

ಸಾಕಷ್ಟು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಗಿಡವನ್ನಿಡಿ: ಡ್ರ್ಯಾಗನ್‌ ಫ್ರೂಟ್‌ ಗಿಡ ಬಹಳಷ್ಟು ಸೂರ್ಯನ ಬೆಳಕನ್ನು ಇಷ್ಟಪಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೇರ, ಬಲವಾದ ಸೂರ್ಯನ ಬೆಳಕನ್ನು ಪಡೆಯುವ ಡ್ರ್ಯಾಗನ್‌ ಫ್ರೂಟ್‌ ಗಿಡ ನೆಟ್ಟ ಟಬ್‌ ಇಡುವುದು ಉತ್ತಮ. ಹೆಚ್ಚು ಸೂರ್ಯನ ಬೆಳಕನ್ನು ಪಡೆದಷ್ಟೂ, ಹಣ್ಣಿನ ಸಿಹಿ ಮತ್ತು ಗಾತ್ರವು ಉತ್ತಮವಾಗಿರುತ್ತದೆ.

ಈ ವಿಷಯಗಳನ್ನು ನೆನಪಿಸಿ:

  • ಈ ಗಿಡಕ್ಕೆ ಅತಿಯಾಗಿ ನೀರು ಹಾಕಬಾರದು. ಕುಂಡದಲ್ಲಿರುವ ಮಣ್ಣು ಒಣಗಿದಾಗ ಅಥವಾ ವಾರಕ್ಕೆ ಎರಡು ಬಾರಿ ನೀರು ಹಾಕಿದರೆ ಸಾಕು.
  • ಗಿಡದ ಮುಖ್ಯ ಕೊಂಬೆಯು ಗಿಡಕ್ಕೆ ಆಧಾರವಾಗಿರುವ ಕಂಬವನ್ನು ತಲುಪಿದ ನಂತರ ಸುತ್ತಲೂ ಹೊಸ ಕೊಂಬೆಗಳು ಬೆಳೆಯುವಂತೆ ತುದಿಯನ್ನು ಕತ್ತರಿಸಿ. ಇದರಿಂದ ಹೆಚ್ಚಿನ ಹಣ್ಣುಗಳನ್ನು ಪಡೆಯಬಹುದು.
  • ವರ್ಷಕ್ಕೆ ಕನಿಷ್ಠ ಮೂರು ಬಾರಿ ಮಣ್ಣನ್ನು ಸ್ವಲ್ಪ ಅಗೆದು ಹಸುವಿನ ಸಗಣಿ, ಬೋನ್‌ ಮೀಲ್‌ ಮತ್ತು ಒಂದು ಚಮಚ ಪೊಟ್ಯಾಶ್ ಗೊಬ್ಬರವನ್ನುಗಿಡದ ಬುಡಕ್ಕೆ ಸೇರಿಸಿ. ಸಸ್ಯವು ಸಾಮಾನ್ಯವಾಗಿ ನೆಟ್ಟ 12 ರಿಂದ 18 ತಿಂಗಳೊಳಗೆ ಹೂಬಿಡಲು ಪ್ರಾರಂಭಿಸುತ್ತದೆ. ಹೂವು ಬಿಟ್ಟ ಕೇವಲ 30 ರಿಂದ 35 ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ