AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯಿಂದ ಡಿಲೀಟ್ ಆಗಲಿವೆ ಸ್ಟಾರ್ ನಟಿಯರ ಎರಡು ಸಿನಿಮಾಗಳು

Movies on OTT: ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಿನಿಮಾ ಒಂದು ವಾರ ಅಥವಾ ಒಂದು ತಿಂಗಳು ಓಡಬಹುದು. ಆದರೆ ಒಟಿಟಿಗೆ ಬರುವ ಸಿನಿಮಾಗಳು ವರ್ಷಗಳ ಕಾಲವಾದರೂ ಅಲ್ಲೇ ಇರುತ್ತವೆ. ಎಷ್ಟೋ ವರ್ಷ ಹಳೆಯ ಸಿನಿಮಾಗಳು ಒಟಿಟಿಯಲ್ಲಿ ಈಗ ನೋಡಲು ಲಭ್ಯ. ಆದರೆ ಆಗಾಗ್ಗೆ ಕೆಲವು ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿರುತ್ತವೆ. ಇದೀಗ ಎರಡು ದಕ್ಷಿಣ ಭಾರತೀಯ ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿವೆ

ಒಟಿಟಿಯಿಂದ ಡಿಲೀಟ್ ಆಗಲಿವೆ ಸ್ಟಾರ್ ನಟಿಯರ ಎರಡು ಸಿನಿಮಾಗಳು
Taapsee Pannu Samantha
ಮಂಜುನಾಥ ಸಿ.
|

Updated on:Aug 05, 2026 | 7:28 PM

Share

ಮುಖ್ಯಾಂಶಗಳು

  • ಒಟಿಟಿಯಿಂದ ಡಿಲೀಟ್ ಆಗುತ್ತಿವೆ ಎರಡು ಸಿನಿಮಾಗಳು.
  • ಇಬ್ಬರು ಸ್ಟಾರ್ ನಟಿಯರ ಎರಡು ಹಿಟ್ ಸಿನಿಮಾ ಡಿಲೀಟ್ ಆಗುತ್ತಿವೆ.
  • ಸಮಂತಾ ಮತ್ತು ತಾಪ್ಸಿ ಪನ್ನು ಅವರ ಸಿನಿಮಾಗಳು ಡಿಲೀಟ್ ಆಗಲಿವೆ.

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಿನಿಮಾ (Cinema) ಒಂದು ವಾರಕ್ಕೆ ಎತ್ತಂಗಡಿ ಆಗುತ್ತವೆ, ತುಂಬಾ ಚೆನ್ನಾಗಿದ್ದರೆ ಮೂರು ಹೆಚ್ಚೆಂದರೆ ನಾಲ್ಕು ವಾರ ಓಡಬಹುದು. ಆದರೆ ಒಟಿಟಿಗೆ ಬರುವ ಸಿನಿಮಾಗಳು ವರ್ಷಗಳ ಕಾಲವಾದರೂ ಅಲ್ಲೇ ಇರುತ್ತವೆ. ಎಷ್ಟೋ ವರ್ಷ ಹಳೆಯ ಸಿನಿಮಾಗಳು ಒಟಿಟಿಯಲ್ಲಿ ಈಗ ನೋಡಲು ಲಭ್ಯ. ಇಂದು ಬಿಡುಗಡೆ ಆಗುವ ಸಿನಿಮಾಗಳನ್ನು ಎಷ್ಟೋ ವರ್ಷಗಳ ಬಳಿಕವೂ ನೋಡಬಹುದು. ಆದರೆ ಆಗಾಗ್ಗೆ ಕೆಲವು ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿರುತ್ತವೆ. ಇದೀಗ ಎರಡು ದಕ್ಷಿಣ ಭಾರತೀಯ ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿವೆ.

ಸಾಮಾನ್ಯವಾಗಿ ಒಟಿಟಿ ಸಂಸ್ಥೆಗಳು 5 ರಿಂದ 7 ವರ್ಷಗಳ ಕಾಲಮಿತಿಯೊಂದಿಗೆ ಪ್ರೊಡಕ್ಷನ್ ಹೌಸ್‌ಗಳಿಂದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಪರವಾನಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಆ ಒಪ್ಪಂದದ ಅವಧಿ ಮುಗಿದ ನಂತರ ಒಪ್ಪಂದವನ್ನು ಮರುನವೀಕರಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಈ ಚಲನಚಿತ್ರಗಳು ಆಯಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಿಂದ ಡಿಲೀಟ್ ಆಗುತ್ತವೆ. ಇದು ಸಾಮಾನ್ಯ ಪ್ರಕ್ರಿಯೆ ಆಗಿರುತ್ತದೆ. ಎಲ್ಲ ಒಟಿಟಿ ಫ್ಲ್ಯಾಟ್​​ಫಾರ್ಮ್​​ಗಳಲ್ಲಿ ಇದೇ ಮಾದರಿ ನಡೆಯುತ್ತದೆ. ಇದೀಗ ಒಟಿಟಿಯಿಂದ ಇಬ್ಬರು ಸ್ಟಾರ್ ನಟಿಯರ ತಲಾ ಒಂದೊಂದು ಸಿನಿಮಾ ಡಿಲೀಟ್ ಆಗುತ್ತಿದೆ.

2019ರಲ್ಲಿ ಕೇವಲ ಒಂದು ತಿಂಗಳ ಅಂತರದಲ್ಲಿ ಥಿಯೇಟರ್‌ಗಳಿಗೆ ಬಂದ ಈ ಎರಡೂ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು. ಸ್ಟಾರ್ ನಟರು ಇಲ್ಲದಿದ್ದರೂ ಕೇವಲ ಕಂಟೆಂಟ್ ಮೂಲಕವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದವು. ನಂತರ ಒಟಿಟಿಯಲ್ಲೂ ಭಾರಿ ವೀಕ್ಷಕರ ಸಂಖ್ಯೆಯನ್ನು (Viewership) ಪಡೆದುಕೊಂಡಿದ್ದವು. ಆದರೆ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಒಪ್ಪಂದ ಮುಕ್ತಾಯಗೊಂಡಿರುವುದರಿಂದ ಈಗ ಈ ಸಿನಿಮಾಗಳು ಒಟಿಟಿಯಿಂದ ಮಾಯವಾಗಲಿವೆ.

ಇದನ್ನೂ ಓದಿ:‘ಸ್ಪೈಡರ್​ಮ್ಯಾನ್’ ನಟ ಟಾಮ್ ಹಾಲೆಂಡ್​​ಗೆ ದಕ್ಷಿಣದ ಈ ಸಿನಿಮಾ ಇಷ್ಟ

ಇದರಲ್ಲಿ ಮೊದಲನೆಯದಾಗಿ ತಾಪ್ಸಿ ಪನ್ನು ಅಭಿನಯದ ಸೈಕಲಾಜಿಕಲ್ ಥ್ರಿల్లರ್ ಸಿನಿಮಾ ‘ಗೇಮ್ ಓವರ್’ ಆಗಸ್ಟ್ 12, 2026 ರಂದು ನೆಟ್‌ಫ್ಲಿಕ್ಸ್‌ನಿಂದ ಹೊರಬೀಳಲಿದೆ. ಆ ಬಳಿಕ ಸೆಪ್ಟೆಂಬರ್ 2, 2026 ರ ಹೊತ್ತಿಗೆ ಸಮಂತಾ ಅವರ ಸೂಪರ್‌ಹಿಟ್ ಸಿನಿಮಾ ‘ಓಹ್ ಬೇಬಿ’ ನೆಟ್‌ಫ್ಲಿಕ್ಸ್ ಲೈಬ್ರರಿಯಿಂದ ಕಣ್ಮರೆಯಾಗಲಿದೆ. ಕೇವಲ ತೆಲುಗು, ತಮಿಳು ಒರಿಜಿನಲ್ ಆವೃತ್ತಿಗಳು ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಲಭ್ಯವಿರುವ ಡಬ್ಬಿಂಗ್ ಆವೃತ್ತಿಗಳು ಕೂಡ ಒಟಿಟಿಯಿಂದ ಸಂಪೂರ್ಣವಾಗಿ ಡಿಲೀಟ್ ಆಗಲಿವೆ.

‘ಗೇಮ್ ಓವರ್’ ಸಿನಿಮಾವನ್ನು ಅಶ್ವಿನ್ ಶರವಣನ್ ನಿರ್ದೇಶನ ಮಾಡಿದ್ದಾರೆ. ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನಿಂದ (PTSD) ಬಳಲುತ್ತಾ ವೀಲ್‌ಚೇರ್‌ಗೆ ಸೀಮಿತವಾಗಿರುವ ಯುವತಿಯಾಗಿ ತಾಪ್ಸಿ ನಟಿಸಿದ್ದರು. ಸಿನಿಮಾ, ವಿಮರ್ಶಕರ ಮನ ಗೆದ್ದಿತ್ತು. ಇನ್ನು ‘ಓಹ್ ಬೇಬಿ’ ಸಮಂತಾ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. 70 ವರ್ಷದ ವೃದ್ಧೆಯೊಬ್ಬಳು 24 ವರ್ಷದ ಯುವತಿಯಾಗುವ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಸಮಂತಾ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ದೊಡ್ಡ ಹಿಟ್ ಆಗಿತ್ತು. ಅವರೊಂದಿಗೆ ನಟ ನಾಗಶೌರ್ಯ, ತೇಜ್ ಸಜ್ಜಾ, ಹಿರಿಯ ನಟಿ ಲಕ್ಷ್ಮಿ, ರಾಜೇಂದ್ರ ಪ್ರಸಾದ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆದ ಸಮಂತಾರ ‘ಮಾ ಇಂಟಿ ಬಂಗಾರಂ’ ಅನ್ನು ಸಹ ನಂದಿನಿ ರೆಡ್ಡಿಯೇ ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Wed, 5 August 26

Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ