AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಗರದಲ್ಲಿ ನೆರವೇರಿತು ‘ದೈವಜ್ಞರು’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ

ಅಜಯಕುಮಾರ್ ದೈವಜ್ಞ ಅವರು ‘ದೈವಜ್ಞರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಅವರೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಯಿತು. ಸಾಗರದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಸಿನಿಮಾದ ಕಥಾಹಂದರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತು.

ಸಾಗರದಲ್ಲಿ ನೆರವೇರಿತು ‘ದೈವಜ್ಞರು’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ
Daivajnaru Movie Title Launch
ಮದನ್​ ಕುಮಾರ್​
|

Updated on: Aug 25, 2026 | 6:01 PM

Share

ದೈವಜ್ಞ (Daivajna) ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು’ (Daivajnaru) ಸಿನಿಮಾದ ಶೀರ್ಷಿಕೆ ಮತ್ತು ಹಾಡುಗಳು ಬಿಡುಗಡೆ ಆಗಿದೆ. ಕರ್ಕಿ ಶ್ರೀ ಜ್ಞಾನೇಶ್ವರೀ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಟೈಟಲ್ ಮತ್ತು ಆಡಿಯೋ ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ವೈಭವದಿಂದ ಜರುಗುತ್ತಿರುವ ಶ್ರೀಗಳವರ 41ನೇ ಚಾತುರ್ಮಾಸ್ಯ ವ್ರತಾಚರಣೆಯ ಧಾರ್ಮಿಕ ಮಹೋತ್ಸವದ ಶುಭ ಸಂದರ್ಭದಲ್ಲಿ ‘ದೈವಜ್ಞರು’ ಸಿನಿಮಾದ ಶೀರ್ಷಿಕೆ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದು ದೈವಜ್ಞ ಸಮಾಜದ ಕಲೆ-ಸಂಸ್ಕೃತಿ ಬಿಂಬಿಸುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.

ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿದರು. ‘ದೈವಜ್ಞ ಬ್ರಾಹ್ಮಣ ಸಮಾಜವು ಕಲೆ, ಕರಕುಶಲತೆ ಹಾಗೂ ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಇಂತಹ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಬೇರುಗಳನ್ನು ಇಂದಿನ ಯುವ ಪೀಳಿಗೆಗೆ ಸಿನಿಮಾದಂತಹ ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ಅವರು ಶುಭ ಹಾರೈಸಿದರು.

ಇದನ್ನೂ ಓದಿ: ಶಿವನ ಭಕ್ತರಿಗೆ ಶುಭ ಸುದ್ದಿ ನೀಡಿದ ಸದ್ಗುರು; ಶೀಘ್ರದಲ್ಲೇ ತೆರೆಕಾಣಲಿದೆ ‘ಶಿವ -ದಿ ಆದಿಯೋಗಿ’ ಅನಿಮೇಷನ್ ಸಿನಿಮಾ

ಈ ಸಿನಿಮಾದ ನಾಯಕ ನಟ ಹಾಗೂ ನಿರ್ದೇಶಕರಾದ ಅಜಯಕುಮಾರ್ ದೈವಜ್ಞ ಅವರು ಚಿತ್ರದ ಕಥಾಹಂದರ ಹಾಗೂ ಉದ್ದೇಶವನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಕಾರವಾರ ಕ್ಷೇತ್ರದ ಮಾಜಿ ಶಾಸಕ ಗಂಗಾಧರ್ ಭಟ್, ಸಮಾಜದ ಪ್ರಮುಖರಾದ ಅರುಣ್ ಕುಮಾರ್, ಮಂಜುನಾಥ್ ಪರಮೇಶ್ವರ್ ಶೇಟ್ (ಹೊನ್ನಾವರ), ಮೋಹನ್ ಶೇಟ್, ರವಿ ಗಾಂವ್ಕರ್, ಅಶೋಕ್ ರೇವಣಕರ್, ಸಿಎ ಶಶಿಕಾಂತ್ ಆರ್.ಎಸ್., ಉಲ್ಲಾಸ್, ಅಶೋಕ್ ಶೇಟ್ ಸೇರಿದಂತೆ ಹಲವು ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಎಲ್ಲರೂ ಚಿತ್ರತಂಡಕ್ಕೆ ಶುಭ ಕೋರಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ