AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವನ ಭಕ್ತರಿಗೆ ಶುಭ ಸುದ್ದಿ ನೀಡಿದ ಸದ್ಗುರು; ಶೀಘ್ರದಲ್ಲೇ ತೆರೆಕಾಣಲಿದೆ ‘ಶಿವ -ದಿ ಆದಿಯೋಗಿ’ ಅನಿಮೇಷನ್ ಸಿನಿಮಾ

ಶ್ರಾವಣ ಮಾಸದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಶಿವ ಭಕ್ತರಿಗೆ ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ. ಯೋಗದ ಸ್ಥಾಪಕ ಎಂದು ಎಲ್ಲರೂ ಪರಿಗಣಿಸುವ ಆದಿಯೋಗಿಯ ಇತಿಹಾಸವನ್ನು ಶೀಘ್ರದಲ್ಲೇ ಅನಿಮೇಟೆಡ್ ಚಲನಚಿತ್ರವಾಗಿ ಪ್ರೇಕ್ಷಕರಿಗೆ ತರಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ಸಿನಿಮಾದ ನಿರ್ಮಾಣಕ್ಕಾಗಿ ಈಗಾಗಲೇ ಗ್ರಾಫಿಕ್ ಇಂಡಿಯಾ ಸ್ಟುಡಿಯೋಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಶಿವನ ಭಕ್ತರಿಗೆ ಶುಭ ಸುದ್ದಿ ನೀಡಿದ ಸದ್ಗುರು; ಶೀಘ್ರದಲ್ಲೇ ತೆರೆಕಾಣಲಿದೆ 'ಶಿವ -ದಿ ಆದಿಯೋಗಿ' ಅನಿಮೇಷನ್ ಸಿನಿಮಾ
Sadhguru And ShivaImage Credit source: TV9
ಸುಷ್ಮಾ ಚಕ್ರೆ
|

Updated on: Aug 24, 2026 | 7:11 PM

Share

ಚೆನ್ನೈ, ಆಗಸ್ಟ್ 24: ಶ್ರಾವಣ ಮಾಸದ ಪವಿತ್ರ ಮಾಸದಲ್ಲಿ ಇಶಾ ಫೌಂಡೇಶನ್‌ನ (Isha Foundation) ಸಂಸ್ಥಾಪಕರಾದ ಸದ್ಗುರು (Sadhguru) ಜಗ್ಗಿ ವಾಸುದೇವ್ ಯೋಗ ಸಂಪ್ರದಾಯದಲ್ಲಿ ಮೊದಲ ಯೋಗಿ ಮತ್ತು ಯೋಗದ ಸ್ಥಾಪಕ ಎಂದು ಪರಿಗಣಿಸಲಾದ ಆದಿಯೋಗಿ ಶಿವನ ಇತಿಹಾಸವನ್ನು ಹೊಸ ಅನಿಮೇಟೆಡ್ ಚಲನಚಿತ್ರದ ಮೂಲಕ ಪ್ರೇಕ್ಷಕರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಅನಿಮೇಟೆಡ್ ಸಿನಿಮಾಗೆ ‘ಶಿವ – ದಿ ಆದಿಯೋಗಿ’ (Shiva – The Adiyogi)ಎಂಬ ಹೆಸರನ್ನು ಇಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಿನಿಮಾ 2027ರಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಿನಿಮಾದ ಬಗ್ಗೆ ಮೊದಲ ಹೆಜ್ಜೆ ಇಡಲಾಗಿದೆ ಎಂದು ಅವರು ಹೇಳಿದರು. ‘ದಿ ಲೆಜೆಂಡ್ ಆಫ್ ಹನುಮಾನ್’ ಸರಣಿಯಿಂದ ಅಪಾರ ಜನಪ್ರಿಯತೆ ಗಳಿಸಿರುವ ಹೆಸರಾಂತ ಸ್ಟುಡಿಯೋ ಗ್ರಾಫಿಕ್ ಇಂಡಿಯಾದ ಸಹಯೋಗದೊಂದಿಗೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಗ್ರಾಫಿಕ್ ಇಂಡಿಯಾದ ಸಹ-ಸಂಸ್ಥಾಪಕ ಶರದ್ ದೇವರಾಜನ್ ಈ ಚಿತ್ರದ ಸಹ-ಬರಹ ಮತ್ತು ನಿರ್ಮಾಣವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಈ ಹಿಂದೆ ‘ಬಾಹುಬಲಿ-ದಿ ಲಾಸ್ಟ್ ಲೆಜೆಂಡ್ಸ್’ ಮತ್ತು ‘ಬಾಹುಬಲಿ-ಕ್ರೌನ್ ಆಫ್ ಬ್ಲಡ್’​ನಂತಹ ಅನಿಮೇಟೆಡ್ ಚಲನಚಿತ್ರಗಳು ಹಾಗೂ ಮಾರ್ವೆಲ್‌ನ ‘ಇಂಡಿಯನ್ ಸ್ಪೈಡರ್ ಮ್ಯಾನ್’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಸದ್ಗುರು ‘ಕಾವೇರಿ ಕೂಗು’ ಆಂದೋಲನದ ಭಾಗವಾಗಿ ಬೃಹತ್ ಸಮಾವೇಶ, 6 ಸಾವಿರಕ್ಕೂ ಹೆಚ್ಚು ರೈತರ ದಂಡು

ಯೋಗ ಹೇಗೆ ಹುಟ್ಟಿಕೊಂಡಿತು? ಆದಿಯೋಗಿಯಾಗಿ ಶಿವನು ಮಾನವೀಯತೆಗೆ ನೀಡಿದ ಆಧ್ಯಾತ್ಮಿಕ ಮಾರ್ಗ ಯಾವುದು? ಎಂಬಿತ್ಯಾದಿ ವಿವರಗಳ ಜೊತೆ ಸಿನಿಮಾವನ್ನು ಭಾವನಾತ್ಮಕ ದೃಶ್ಯ ರೂಪದಲ್ಲಿ ಪ್ರಸ್ತುತಪಡಿಸಲಾಗುವುದು. ಪ್ರಸ್ತುತ, ಈ ಸಿನಿಮಾದ ಪೂರ್ವ-ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಇದನ್ನು ವಿಶ್ವಾದ್ಯಂತ ಬಿಡುಗಡೆ ಮಾಡುವ ಗುರಿಯನ್ನು ಹೊಂದಿವೆ.

ಇದನ್ನೂ ಓದಿ: ಇಶಾ ಫೌಂಡೇಷನ್, ಸದ್ಗುರು ಕುರಿತ ವಿವಾದಾತ್ಮಕ ವಿಷಯ ಡಿಲೀಟ್ ಮಾಡಿ; ನಕ್ಕೀರನ್ ಮ್ಯಾಗಜಿನ್​​ಗೆ ಕೋರ್ಟ್ ಆದೇಶ

ಈ ಸಿನಿಮಾದಲ್ಲಿ ಶಿವನನ್ನು ಸಾಂಪ್ರದಾಯಿಕ ಪೌರಾಣಿಕ ಚೌಕಟ್ಟಿನಲ್ಲಿ ತೋರಿಸುವ ಬದಲಿಗೆ, ಯೋಗ ಪರಂಪರೆಯ ಕೋನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಯೋಗ ಸಂಸ್ಕೃತಿಯಲ್ಲಿ ಶಿವ ಕೇವಲ ದೇವರಲ್ಲ. ಶಿವ ಆದಿಯೋಗಿ, ಆದಿಗುರು. ಪ್ರಕೃತಿಯ ನಿಯಮಗಳಿಗೆ ಒಳಪಟ್ಟಿರುವುದು ಶಾಶ್ವತವಲ್ಲ. ಆದರೆ, ಅಭ್ಯಾಸದ ಮೂಲಕ ಆ ಮಿತಿಗಳನ್ನು ಮೀರಿ ಮುಕ್ತಿಯನ್ನು ಪಡೆಯಬಹುದು ಎಂದು ಮಾನವಕುಲಕ್ಕೆ ತಿಳಿಸಿದ ಮೊದಲ ವ್ಯಕ್ತಿ ಶಿವ. ಭಾರತದ ಆಧ್ಯಾತ್ಮಿಕ ವೈಭವ ಮತ್ತು ಯೋಗದ ಪರಂಪರೆಯನ್ನು ಮುಂಬರುವ ಪೀಳಿಗೆಗೆ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಹೊಸ ದೃಶ್ಯ ರೂಪದಲ್ಲಿ ತರುವುದು ಈ ಸಿನಿಮಾವನ್ನು ನಿರ್ಮಿಸುವ ಉದ್ದೇಶವಾಗಿದೆ ಎಂದು ಸದ್ಗುರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!