ಭಾರತದ ಘನತೆ ಹೆಚ್ಚಿಸಿದ ಮುತ್ಸದ್ದಿ: ಮೋದಿಯವರ 25 ವರ್ಷಗಳ ಆಡಳಿತ ಮೈಲಿಗಲ್ಲು ಕೊಂಡಾಡಿದ ಜಾಗತಿಕ ಗಣ್ಯರು
ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಭಾರತದ ಪ್ರಧಾನಿ ಪಟ್ಟದವರೆಗೆ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲಿಗೆ ಜಗತ್ತಿನಾದ್ಯಂತದ ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ. ಜಪಾನ್, ಬೆಲ್ಜಿಯಂ, ಡೊಮಿನಿಕಾ, ನೈಜೀರಿಯಾ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಮೋದಿಯವರ ಅಭಿವೃದ್ಧಿ ಮಾದರಿ, ಜಾಗತಿಕ ನಾಯಕತ್ವ ಹಾಗೂ ಭಾರತದ ಘನತೆಯನ್ನು ಹೆಚ್ಚಿಸಿದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 07: ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಬಳಿಕ 2014ರಿಂದ ಸತತವಾಗಿ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಮೋದಿಯವರ 25 ವರ್ಷಗಳ ಸುದೀರ್ಘ ನಾಯಕತ್ವವನ್ನು ಜಗತ್ತಿನ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.
ಯಾವ ನಾಯಕರು ಏನಂದರು? ಪ್ರಮುಖ ಸಂದೇಶಗಳ ವಿವರ
ಅಸಾಧಾರಣ ರಾಜಕೀಯ ನಾಯಕತ್ವ: ಜಪಾನ್ ಪ್ರಧಾನಿ ಸನೇ ತಕೈಚಿ
2001ರಿಂದ ಆರಂಭವಾದ ಮೋದಿಯವರ ಸುದೀರ್ಘ ಅಧಿಕಾರಾವಧಿಯು ಭಾರತದ ಸಮಗ್ರ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ರಂಗದಲ್ಲಿ ದೇಶದ ಪ್ರತಿಷ್ಠೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಒಬ್ಬ ಸಹ ರಾಜಕಾರಣಿಯಾಗಿ ಅವರ ಈ ಸಾಧನೆಗೆ ನನ್ನ ಅಭಿನಂದನೆ ಎಂದಿದ್ದಾರೆ.
本日、モディ首相(@narendramodi)の首長在職25周年に際し、心からお祝い申し上げます。
インドの社会と国家の発展に長年尽力され、2001年以降は首長として長きにわたり卓越した政治的リーダーシップを発揮されてきたこと、インドの発展と国際社会における地位向上を成し遂げられていることに、深い敬意を表します。
また、本年7月の私のインド訪問の際には、大変温かいおもてなしをいただき、改めて感謝申し上げます。
インドの食文化や音楽に触れながら、日印の「特別戦略的グローバル・パートナーシップ」を新たな段階へと導くための施策について、モディ首相と具体的な意見交換を行うことができ、実り多き滞在となりました。
来年は「日印国交樹立75周年」を迎えます。
「自由で開かれたインド太平洋(FOIP)」の実現のため、戦略的方向性を共有する日印で、パートナーシップを更に前に進めるべく、モディ首相と一層連携していきます。
प्रधानमंत्री श्री नरेंद्र मोदी जी के सरकार के प्रमुख के तौर पर 25 वर्ष की अवधि पूरे होने पर मैं अपनी शुभकामनाएँ व्यक्त करना चाहती हूँ।
भारत के समाज और राष्ट्र के विकास को साकार करने के लिए वे वर्षों से प्रयास करते आए हैं और सन् 2001 से अपने उत्कृष्ट राजनीतिक नेतृत्व से सरकार के प्रमुख के पद संभालते आए हैं। उन्होंने भारत के विकास को गति देने के साथ ही अंतरराष्ट्रीय स्तर पर भी भारत की प्रतिष्ठा को नई ऊंचाइयों तक पहुंचाया। इन सारी उपलब्धियों के लिए, मैं एक साथी राजनीतिज्ञ के रूप में सम्मान भावना व्यक्त करती हूँ।
मैं फिर से प्रधानमंत्री श्री नरेंद्र मोदी जी का आभार व्यक्त करना चाहती हूँ कि इस जुलाई में मेरी भारत यात्रा के दौरान मुझे उनका बेहद गर्मजोशी भरा स्वागत मिला।
भारत की खाद्य संस्कृति और संगीत का अनुभव करते हुए, मुझे जापान-भारत की “विशेष रणनीतिक और वैश्विक साझेदारी” को अगले स्तर तक ले जाने के लिए उनके साथ ठोस कदमों पर विचार-विमर्श करने का शुभ अवसर प्राप्त हुआ। मेरी भारत यात्रा बहुत ही फलदायी रही।
अगले वर्ष जापान-भारत राजनयिक संबंधों की स्थापना की 75वीं वर्षगाँठ है।
मुक्त एवं खुले हिन्द-प्रशांत क्षेत्र (FOIP) को साकार करने हेतु मैं प्रधानमंत्री श्री नरेंद्र मोदी जी के साथ मिलकर काम करना चाहती हूँ ताकि रणनीतिक दिशा को साझा करने वाले जापान तथा भारत मिलकर हमारी साझेदारी को और आगे बढ़ाया जा सके।
— 高市早苗 (@takaichi_sanae) October 7, 2026
ದ್ವಿಪಕ್ಷೀಯ ಬಾಂಧವ್ಯ
ಕಳೆದ ಜುಲೈನಲ್ಲಿ ತಮಗೆ ನೀಡಲಾದ ಆತ್ಮೀಯ ಆತಿಥ್ಯ, ಭಾರತೀಯ ಆಹಾರ ಮತ್ತು ಸಂಗೀತ ಸಂಸ್ಕೃತಿಯ ಸವಿಯನ್ನು ಸ್ಮರಿಸಿದ ಅವರು, ಮುಂದಿನ ವರ್ಷ ಜಪಾನ್-ಭಾರತ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷಗಳು ತುಂಬಲಿವೆ. ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಗುರಿ ಸಾಧನೆಗೆ ಮೋದಿಯವರ ಜೊತೆಗೂಡಿ ಕೆಲಸ ಮುಂದುವರಿಸುತ್ತೇವೆ ಎಂದರು.
ಗುಜರಾತ್‌ನಿಂದ ನವದೆಹಲಿಯವರೆಗೆ ನಿರಂತರ ಸೇವೆ:ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್
ಗುಜರಾತ್‌ನಿಂದ ನವದೆಹಲಿಯವರೆಗೆ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಕಾಲ ನಿರಂತರ ನಾಯಕತ್ವ ನೀಡಿದ ಪ್ರಧಾನಿ ಮೋದಿಯವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇತ್ತೀಚಿನ ಭಾರತ ಭೇಟಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಈ ಪಾಲುದಾರಿಕೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ.
I warmly congratulate Prime Minister @narendramodi on 25 years of continuous leadership in government, from Gujarat to New Delhi. Following my productive visit to India last month, I look forward to further deepening the strong partnership between our two countries. https://t.co/ymMBQ1Ew1m
— Bart De Wever (@Bart_DeWever) October 7, 2026
ಡೊಮಿನಿಕಾ ಕಾಮನ್‌ವೆಲ್ತ್ ಪ್ರಧಾನಿ:ರೂಸ್ವೆಲ್ಟ್ ಸ್ಕೆರಿಟ್ ಉದಾರತೆ ಮತ್ತು ಸ್ನೇಹಕ್ಕೆ ಕೃತಜ್ಞತೆ:
ಪ್ರಧಾನಿ ಮೋದಿಯವರನ್ನು ‘ನನ್ನ ಆಪ್ತ ಸ್ನೇಹಿತ’ ಎಂದು ಬಣ್ಣಿಸಿದ ಡೊಮಿನಿಕಾ ಪ್ರಧಾನಿ, “ಗುಜರಾತ್‌ನಲ್ಲಿ ಆರಂಭವಾಗಿ ಇಂದು ಇಡೀ ಭಾರತವನ್ನು ಮುನ್ನಡೆಸುತ್ತಿರುವ ನಿಮ್ಮ 25 ವರ್ಷಗಳ ಸುದೀರ್ಘ ಜನಸೇವೆಯ ಪಯಣ ಶ್ಲಾಘನೀಯ. ಡೊಮಿನಿಕಾ ದೇಶದ ಮೇಲೆ ನೀವು ತೋರಿದ ಪ್ರೀತಿ, ಸ್ನೇಹ ಮತ್ತು ನೀಡಿದ ನೆರವಿಗೆ ಧನ್ಯವಾದಗಳು. ನಿಮ್ಮ ಆರೋಗ್ಯ, ಶಕ್ತಿ ಮತ್ತು ಯಶಸ್ಸು ನಿರಂತರವಾಗಿರಲಿ” ಎಂದು ಹಾರೈಸಿದರು.
ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಗ್ಲೋಬಲ್ ಸೌತ್ ಧ್ವನಿ:
ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ಅಧಿಕೃತ ಸಂದೇಶ ರವಾನಿಸಿದ್ದು, ಗುಜರಾತ್ ಹಾಗೂ ಭಾರತ ಗಣರಾಜ್ಯದ ಮುಖ್ಯಸ್ಥರಾಗಿ ಮೋದಿ ತೋರಿದ ಸುಸ್ಥಿರ ನಾಯಕತ್ವ, ಆರ್ಥಿಕ ಸುಧಾರಣೆಗಳು ಹಾಗೂ ಜಾಗತಿಕ ವೇದಿಕೆಗಳಲ್ಲಿ ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳು) ಹಿತಾಸಕ್ತಿ ಪರವಾಗಿ ನಿಂತಿದ್ದನ್ನು ಶ್ಲಾಘಿಸಿದರು.
Message from His Excellency, Bola Ahmed Tinubu, GCFR, President of the Federal Republic of Nigeria, on the 25th Anniversary of Prime Minister Narendra Modi as Head of Government in Gujarat and the Republic of India.
@officialABAT | @narendramodi https://t.co/7AsH0ba97m
— Presidency Nigeria (@NGRPresident) October 6, 2026
ಮೋದಿಯವರ 25 ವರ್ಷಗಳ ಮೈಲಿಗಲ್ಲಿನ ಹಿನ್ನೆಲೆ ಗುಜರಾತ್ ಸಿಎಂ (2001 – 2014): 2001ರ ಭುಜ್ ಭೂಕಂಪದ ಬಿಕ್ಕಟ್ಟಿನ ಸಮಯದಲ್ಲಿ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೋದಿ, ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ ‘ಗುಜರಾತ್ ಅಭಿವೃದ್ಧಿ ಮಾದರಿ’ಯನ್ನು ದೇಶಕ್ಕೆ ಪರಿಚಯಿಸಿದರು. ಭಾರತದ ಪ್ರಧಾನಿ (2014 ರಿಂದ ಇಂದಿನವರೆಗೆ): 2014, 2019 ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲಿ ಮುನ್ನಡೆಸಿ ಸತತ ಮೂರು ಬಾರಿ ಪ್ರಧಾನಿಯಾದ ದಾಖಲೆ ಬರೆದಿದ್ದಾರೆ.
ಮತ್ತಷ್ಟು ಓದಿ: ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಜಾಗತಿಕ ನಾಯಕತ್ವ: ಜಿ-20 ಅಧ್ಯಕ್ಷತೆ, ಕ್ವಾಡ್ (QUAD) ಒಕ್ಕೂಟ, ಹಾಗೂ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ (ISA) ಮೂಲಕ ಭಾರತವನ್ನು ಜಾಗತಿಕ ರಾಜತಾಂತ್ರಿಕತೆಯ ಕೇಂದ್ರಬಿಂದುವಾಗಿಸಿದ ಹೆಗ್ಗಳಿಕೆ ಇವರ ನಾಯಕತ್ವಕ್ಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




