AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಣ್ಮರೆಯಾಗುತ್ತಿರುವ ಮುಖಗಳು’; ಹಿಮಾಲಯದ ಜನರ ಕುರಿತ ಸದ್ಗುರು ಫೋಟೋ ಪುಸ್ತಕ ಬಿಡುಗಡೆ

ಸದ್ಗುರು ಅವರ ‘ಡಿಸಪಿಯರಿಂಗ್ ಫೇಸಸ್’ ಎಂಬ ನೂತನ ಫೋಟೋ ಪ್ರಬಂಧ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಹಿಮಾಲಯನ್ ಜನರ ಅಪರೂಪದ ಛಾಯಾಚಿತ್ರಗಳ ಅನಾವರಣಗೊಳಿಸಲಾಗಿದೆ. ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ‘ಡಿಸಪಿಯರಿಂಗ್ ಫೇಸಸ್’ (Disappearing Faces) ಎಂಬ ತಮ್ಮ ನೂತನ ಫೋಟೋ ಪ್ರಬಂಧ ಪುಸ್ತಕವನ್ನು ಅನಾವರಣಗೊಳಿಸಿದ್ದಾರೆ. ಹಿಮಾಲಯದ ಪ್ರದೇಶದ ಸುದೀರ್ಘ ಪ್ರಯಾಣದ ವೇಳೆ ಅವರೇ ಕ್ಯಾಮೆರಾದಲ್ಲಿ ಸೆರೆಹಿಡಿದ ಅಲ್ಲಿನ ಮೂಲ ನಿವಾಸಿಗಳು, ಸಂಸ್ಕೃತಿ ಮತ್ತು ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಜೀವನಶೈಲಿಯ ಅಪರೂಪದ ಛಾಯಾಚಿತ್ರಗಳು ಈ ಪುಸ್ತಕದಲ್ಲಿವೆ.

'ಕಣ್ಮರೆಯಾಗುತ್ತಿರುವ ಮುಖಗಳು'; ಹಿಮಾಲಯದ ಜನರ ಕುರಿತ ಸದ್ಗುರು ಫೋಟೋ ಪುಸ್ತಕ ಬಿಡುಗಡೆ
Sadhguru Book ReleaseImage Credit source: TV9
ಸುಷ್ಮಾ ಚಕ್ರೆ
|

Updated on:Aug 11, 2026 | 7:57 PM

Share

ನವದೆಹಲಿ, ಆಗಸ್ಟ್ 11: ನೇಪಾಳ ಮತ್ತು ಟಿಬೆಟ್‌ನ ಹಿಮಾಲಯ ಪರ್ವತ ಶ್ರೇಣಿಗಳ ಪ್ರವಾಸದ ವೇಳೆ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭೇಟಿಯಾದ ಜನರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ನೂತನ ಛಾಯಾಚಿತ್ರ ಪುಸ್ತಕ ‘ಡಿಸಪಿಯರಿಂಗ್ ಫೇಸಸ್ – ಎ ಫೋಟೋ ಪ್ರಬಂಧ’ (Disappearing Faces – A Photo Essay) ಅನ್ನು ನವದೆಹಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್​ನಲ್ಲಿ ಬಿಡುಗಡೆ ಮಾಡಲಾಯಿತು.

‘ಪೆಂಗ್ವಿನ್ ಇಂಡಿಯಾ’ ಪ್ರಕಟಿಸಿರುವ ಈ ಪುಸ್ತಕವು, ಹಿಮಾಲಯದ ಅತಿ ಎತ್ತರದ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ವಾಸಿಸುವ ಜನರ ಜೀವನಶೈಲಿಯನ್ನು ಪ್ರಸ್ತುತಪಡಿಸುತ್ತದೆ. ಪ್ರಕೃತಿಯ ಮಡಿಲಲ್ಲಿ, ಆಧುನಿಕ ಜೀವನಶೈಲಿಯಿಂದ ದೂರವಾಗಿ ಬದುಕುತ್ತಿರುವ ಜನರ ಮುಖಭಾವನೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸದ್ಗುರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಕಾಯಿಲೆಗಳೇ ಬರಬಾರದು ಅಂದ್ರೆ ಸದ್ಗುರು ತಿಳಿಸಿರುವ ಈ 4 ಬಗೆಯ ಆಹಾರಗಳಿಂದ ದೂರವಿರಿ

ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆಯಾಯಿತು. ನಂತರ ನಡೆದ ಸಂವಾದದಲ್ಲಿ ಸದ್ಗುರು ಹಾಗೂ ಲೇಖಕ ಆನಂದ್ ರಂಗನಾಥನ್ ಅವರು ಈ ಛಾಯಾಚಿತ್ರಗಳ ಹಿಂದಿನ ಕಥೆಗಳು ಮತ್ತು ಅನುಭವಗಳನ್ನು ಹಂಚಿಕೊಂಡರು.

ಈ ಪುಸ್ತಕದ ಕುರಿತು ಮಾತನಾಡಿದ ಸದ್ಗುರು, “ಈ ಮುಖಗಳು ಶೀಘ್ರದಲ್ಲೇ ಕಣ್ಮರೆಯಾಗಲಿರುವ ಒಂದು ಯುಗವನ್ನು ಪ್ರತಿನಿಧಿಸುತ್ತವೆ. ಬೆಳಕು ಮತ್ತು ಕತ್ತಲೆ, ಬಿಸಿಲು ಮತ್ತು ಚಳಿ, ವಸಂತ ಮತ್ತು ಚಳಿಗಾಲದಂತಹ ಪ್ರಕೃತಿಯ ಅನುಭವಗಳಿಂದಷ್ಟೇ ರೂಪುಗೊಂಡ ಮುಖಗಳಿವು. ಇವು ಆಧುನಿಕ ಮಾಹಿತಿಯಿಂದ ಕಲುಷಿತಗೊಳ್ಳದ ಶುದ್ಧ ಜೀವಗಳನ್ನು ಬಿಂಬಿಸುತ್ತವೆ. ಮೇಲ್ನೋಟಕ್ಕೆ ತೀರಾ ಸರಳವಾಗಿ ಕಂಡರೂ, ಮಣ್ಣು, ಗಾಳಿ, ನೀರು ಮತ್ತು ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಶ್ರೀಮಂತ ಅನುಭವಗಳನ್ನು ಈ ಮುಖಗಳು ಹೊಂದಿವೆ. ಕಳೆದ 5 ದಶಕಗಳಿಂದ, ಪರ್ವತಗಳ ಸೌಂದರ್ಯಕ್ಕಿಂತ ಹೆಚ್ಚಾಗಿ ಈ ಮುಖಗಳೇ ನನ್ನನ್ನು ಹಿಮಾಲಯದತ್ತ ಸೆಳೆದಿವೆ” ಎಂದು ಹೇಳಿದರು.

ಇದನ್ನೂ ಓದಿ: ದೇಶದಲ್ಲೇ ಮೊದಲು: AI ಬಳಸಿ ಅನುವಾದಗೊಂಡ ಕನ್ನಡ ಪುಸ್ತಕ ಮೈಸೂರಿನಲ್ಲಿ ಬಿಡುಗಡೆ!

ಈ ಪುಸ್ತಕದ ವಿಶೇಷತೆಗಳು:

  • ಹಿಮಾಲಯದ ಕಠಿಣ ಪರಿಸರದಲ್ಲಿ ವಾಸಿಸುವ ಜನರ ಭಾವನೆಗಳು, ಶ್ರಮ ಮತ್ತು ಅವರ ವಿಶಿಷ್ಟ ಸಂಸ್ಕೃತಿಯನ್ನು ಎಂದೂ ಕಾಣದ ರೀತಿಯಲ್ಲಿ ಸದ್ಗುರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
  • ಆಧುನಿಕತೆಯ ಪ್ರಭಾವದಿಂದ ಕಾಲಕ್ರಮೇಣ ಮರೆಯಾಗುತ್ತಿರುವ ಹಿಮಾಲಯನ್ ಸಮುದಾಯಗಳ ಜೀವನಶೈಲಿಗೆ ಸಾಕ್ಷಿಯಾಗಿ ಈ ಪುಸ್ತಕ ಮೂಡಿಬಂದಿದೆ.
  • ಕೇವಲ ಪ್ರಕೃತಿ ಸೌಂದರ್ಯವಷ್ಟೇ ಅಲ್ಲದೆ, ಹಿಮಾಲಯವನ್ನು ಜೀವಂತವಾಗಿಟ್ಟಿರುವ ಅಲ್ಲಿನ ಜನರ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಇದು ಜಗತ್ತಿಗೆ ತಲುಪಿಸಲಿದೆ.

ಸದ್ಗುರು 2006ರಲ್ಲಿ ಮೊದಲ ಬಾರಿಗೆ ಮಾನಸ ಸರೋವರ ಮತ್ತು ಕೈಲಾಸ ಪರ್ವತಕ್ಕೆ ಯಾತ್ರೆ ಕೈಗೊಂಡಿದ್ದರು. ಅಂದಿನಿಂದ ಅವರು ನಿರಂತರವಾಗಿ ಹಿಮಾಲಯದ ಯಾತ್ರೆಗಳ ನೇತೃತ್ವ ವಹಿಸುತ್ತಿದ್ದಾರೆ. 2025ರಲ್ಲಿ ಕೈಲಾಸಕ್ಕೆ ತಮ್ಮ ಮೊದಲ ಮೋಟಾರ್ ಸೈಕಲ್ ಯಾತ್ರೆ ನಡೆಸಿದ್ದ ಅವರು, ಈ ವರ್ಷವೂ ಸಹ ಮೋಟಾರ್ ಸೈಕಲ್ ಮೂಲಕ ಪವಿತ್ರ ಹಿಮಾಲಯ ಯಾತ್ರೆಯನ್ನು ಮುಂದುವರಿಸಲಿದ್ದಾರೆ.

‘ಡಿಸಪಿಯರಿಂಗ್ ಫೇಸಸ್’ ಪುಸ್ತಕವು ಹಾರ್ಡ್‌ಬ್ಯಾಕ್ ಮತ್ತು ಪೇಪರ್‌ಬ್ಯಾಕ್ ಆವೃತ್ತಿಗಳಲ್ಲಿ ಅಮೆಜಾನ್, ಕ್ರಾಸ್‌ವರ್ಡ್, ಸಪ್ನಾ ಆನ್‌ಲೈನ್ ಮತ್ತು ಅಟ್ಲಾಂಟಿಕ್ ಜಾಲತಾಣಗಳಲ್ಲಿ penguin.co.in/book/disappearing-faces/ ಲಭ್ಯವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Tue, 11 August 26

Follow Us