AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ: ರಾಜಪರಂಪರೆ ದಸರೆಯ ಇಂಚಿಂಚೂ ಮಾಹಿತಿ; ವಿಡಿಯೋ ನೋಡಿ

ಮೈಸೂರು ದಸರಾ: ರಾಜಪರಂಪರೆ ದಸರೆಯ ಇಂಚಿಂಚೂ ಮಾಹಿತಿ; ವಿಡಿಯೋ ನೋಡಿ

ರಾಮ್​, ಮೈಸೂರು
| Edited By: |

Updated on: Sep 23, 2026 | 9:29 PM

Share

ಮೈಸೂರು ಅರಮನೆಯಲ್ಲಿ ಖಾಸಗಿ ದಸರಾ ಸಿದ್ಧತೆಗಳು ಭರದಿಂದ ಸಾಗಿವೆ. ಅಕ್ಟೋಬರ್ 5ರಿಂದಲೇ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ನವಗ್ರಹ ಹೋಮ, ರತ್ನಖಚಿತ ಸಿಂಹಾಸನ ಜೋಡಣೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆ ಮತ್ತು ಖಾಸಗಿ ದರ್ಬಾರ್‌ಗೆ ಚಾಲನೆ ದೊರೆಯಲಿದೆ. ಈ ವಿಡಿಯೋ ನೋಡಿ.

ಮೈಸೂರು, ಸೆಪ್ಟೆಂಬರ್​ 23: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಒಂದು ಕಡೆ ರಾಜ್ಯ ಸರ್ಕಾರವು ನಡೆಸುವ ನಾಡಹಬ್ಬ ದಸರಾಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಮತ್ತೊಂದು ಕಡೆ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ದಸರಾ ಆಚರಣೆಗಳಿಗೂ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 5 ರಂದು ಪ್ರಮೋದಾದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ನವಗ್ರಹ ಹೋಮದೊಂದಿಗೆ ಖಾಸಗಿ ದಸರಾ ಆಚರಣೆಗಳು ಆರಂಭಗೊಳ್ಳಲಿವೆ. ಇದೇ ದಿನ ರತ್ನಖಚಿತ ಸಿಂಹಾಸನವನ್ನು ಜೋಡಣೆ ಮಾಡಲಾಗುತ್ತದೆ. ಅಕ್ಟೋಬರ್ 11 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣಧಾರಣೆ ಮಾಡಲಿದ್ದು, ನಂತರ ಸಿಂಹಾಸನಾರೋಹಣಗೊಂಡು ಖಾಸಗಿ ದರ್ಬಾರ್ ನಡೆಸುತ್ತಾರೆ. ಅಕ್ಟೋಬರ್ 20ರಂದು ಮಹಾನವಮಿಯಂದು ಆಯುಧ ಪೂಜೆ ನಡೆಯಲಿದೆ. ಕೊನೆಯ ದಿನ ಅಕ್ಟೋಬರ್ 21ರ ವಿಜಯದಶಮಿಯಂದು ಅರಮನೆಯಿಂದ ಹೊರಡುವ ಮೆರವಣಿಗೆ ಭುವನೇಶ್ವರಿ ದೇವಾಲಯದಲ್ಲಿ ಶಮಿ ಪೂಜೆ ಸಲ್ಲಿಸಿ, ಕಂಕಣ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More