AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ಈ ವರ್ಷದ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಹೆನ್ರಿ ಕಗನ್ ಮತ್ತು ಕೆನ್ಸೊ ಸೊವಾಯಿ ಅವರಿಗೆ ಜಂಟಿಯಾಗಿ ಘೋಷಿಸಲಾಗಿದೆ. ‘ಅಸಮ್ಮಿತ ಜೈವಿಕ ಸಂಶ್ಲೇಷಣೆಯಲ್ಲಿ ರೇಖಾತ್ಮಕರಹಿತ ಪರಿಣಾಮಗಳು ಮತ್ತು ಸ್ವಯಂಚಾಲಿತ ಪ್ರೇರಣೆ (ಆಟೋಕ್ಯಾಟಲಿಸಿಸ್) ಕುರಿತ ಆವಿಷ್ಕಾರಕ್ಕಾಗಿ’ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಗೌರವವನ್ನು ಪ್ರಕಟಿಸಿದೆ. ಫ್ರಾನ್ಸ್‌ನ ಓರ್ಸೇನಲ್ಲಿರುವ ಯುನಿವರ್ಸಿಟಿ ಪ್ಯಾರಿಸ್-ಸುಡ್‌ಗೆ ಸಂಯೋಜಿತವಾಗಿರುವ ಕಗನ್ ಹಾಗೂ ಟೋಕಿಯೋ ಯುನಿವರ್ಸಿಟಿ ಆಫ್ ಸೈನ್ಸ್ ಸಂಸ್ಥೆಗೆ ಸಂಯೋಜಿತವಾಗಿರುವ 95 ವರ್ಷದ ಕೆನ್ಸೊ ಸೊವಾಯಿ ಈ ಬಾರಿಯ ನೊಬೆಲ್ ಗೌರವಕ್ಕೆ ಭಾಜನರಾಗಿದ್ದಾರೆ.

ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ
ಹೆನ್ರಿ ಬಿ. ಕಗನ್ ಮತ್ತು ಕೆನ್ಸೊ ಸೊವಾಯಿImage Credit source: X
ಸುಷ್ಮಾ ಚಕ್ರೆ
|

Updated on: Oct 07, 2026 | 4:02 PM

Share

ಸ್ಟಾಕ್‌ಹೋಮ್, ಅಕ್ಟೋಬರ್ 7: 2026ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಪ್ರಸಿದ್ಧ ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್ ಮತ್ತು ಕೆನ್ಸೊ ಸೊವಾಯಿ ಇಬ್ಬರಿಗೂ ಘೋಷಿಸಲಾಗಿದೆ. ಅಸಮ್ಮಿತ ಜೈವಿಕ ಸಂಶ್ಲೇಷಣೆಯಲ್ಲಿ ರೇಖಾತ್ಮಕರಹಿತ ಪರಿಣಾಮಗಳು ಮತ್ತು ಸ್ವಯಂಚಾಲಿತ ಪ್ರೇರಣೆ ಕುರಿತ ಕ್ರಾಂತಿಕಾರಿ ಆವಿಷ್ಕಾರಕ್ಕಾಗಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ‘ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್’ ಈ ಗೌರವವನ್ನು ಪ್ರಕಟಿಸಿದೆ.

ನೊಬೆಲ್ ವಾರದ ಮೂರನೇ ಪ್ರಶಸ್ತಿಯಾಗಿ ರಸಾಯನಶಾಸ್ತ್ರ ನೊಬೆಲ್ ಪ್ರಕಟಗೊಂಡಿದ್ದು, ಇದಕ್ಕೂ ಮುನ್ನ ಸೋಮವಾರ ವೈದ್ಯಕೀಯ ಹಾಗೂ ಮಂಗಳವಾರ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ನೊಬೆಲ್ ರಸಾಯನಶಾಸ್ತ್ರ ಸಮಿತಿಯ ಅಧ್ಯಕ್ಷ ಹೈನರ್ ಲಿಂಕೆ ಮಾತನಾಡಿ, “ಈ ವರ್ಷದ ಪ್ರಶಸ್ತಿಯು ಮೂಲಭೂತ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದೆ. ಪ್ರಕೃತಿಯಲ್ಲಿ ಹಲವು ಅಣುಗಳು ನಮ್ಮ ಎರಡು ಕೈಗಳಂತೆ ಪರಸ್ಪರ ಮಿರರ್ ಇಮೇಜ್ ರೂಪದಲ್ಲಿ ಇರುತ್ತವೆ. ಅವು ನೋಡಲು ಒಂದೇ ರೀತಿ ಕಂಡರೂ ಸಂಪೂರ್ಣವಾಗಿ ಒಂದೇ ಆಗಿರುವುದಿಲ್ಲ. ಇಂತಹ ಅಣುಗಳನ್ನು ಗ್ರೀಕ್ ಭಾಷೆಯ ‘ಕೈರಾಲ್’ ಎಂದು ಕರೆಯಲಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: 2026ರ ಮೆಡಿಸಿನ್ ನೊಬೆಲ್: ಮೆದುಳಿನ ನರಕೋಶಗಳನ್ನು ಬೆಳಕಿನಿಂದ ನಿಯಂತ್ರಿಸುವ ತಂತ್ರಕ್ಕೆ ಗೌರವ

ಕಗನ್ ಮತ್ತು ಸೊವಾಯಿ ಅವರ ಸಂಶೋಧನೆಯು ಅಸಮ್ಮಿತ ಜೈವಿಕ ಸಂಶ್ಲೇಷಣೆಯಲ್ಲಿ ಇಂತಹ ಅಣುಗಳನ್ನು ನಿಯಂತ್ರಿಸುವ ಮತ್ತು ಅಪೇಕ್ಷಿತ ರಾಸಾಯನಿಕ ರೂಪಗಳನ್ನು ಉತ್ಪಾದಿಸುವ ಕ್ರಾಂತಿಕಾರಿ ವಿಧಾನವನ್ನು ಕಂಡುಹಿಡಿದಿದೆ. 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 1.2 ಮಿಲಿಯನ್ ಡಾಲರ್) ನಗದು ಮೊತ್ತ ಮತ್ತು ಪ್ರಶಸ್ತಿ ಪದಕವನ್ನು ಜಂಟಿಯಾಗಿ ಹಂಚಿಕೊಳ್ಳಲಿದ್ದಾರೆ.

ಹೆನ್ರಿ ಬಿ. ಕಗನ್: ಫ್ರಾನ್ಸ್‌ನ ಓರ್ಸೇನಲ್ಲಿರುವ ಯುನಿವರ್ಸಿಟಿ ಪ್ಯಾರಿಸ್-ಸುಡ್‌ಗೆ ಸಂಯೋಜಿತರಾಗಿದ್ದಾರೆ.

ಕೆನ್ಸೊ ಸೊವಾಯಿ: 95 ವರ್ಷದ ಹಿರಿಯ ವಿಜ್ಞಾನಿ ಕೆನ್ಸೊ ಸೊವಾಯಿ ಅವರು ಜಪಾನ್‌ನ ಟೋಕಿಯೋ ಯುನಿವರ್ಸಿಟಿ ಆಫ್ ಸೈನ್ಸ್‌ಗೆ ಸಂಯೋಜಿತರಾಗಿದ್ದಾರೆ.

ಸ್ವೀಡನ್‌ನ ರಾಜ 16ನೇ ಕಾರ್ಲ್ ಗುಸ್ಟಾಫ್ ಅವರು ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯಾದ ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸ್ವೀಡಿಷ್ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ 1901ರಿಂದ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಖಗೋಳಶಾಸ್ತ್ರದ ನ್ಯೂಟ್ರಿನೊಗಳ ಆವಿಷ್ಕಾರಕ್ಕೆ ಫ್ರಾನ್ಸಿಸ್ ಹಾಲ್ಜನ್‌ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ಕಳೆದ ವರ್ಷ ಅಪಾರ ಪ್ರಮಾಣದ ಅನಿಲವನ್ನು ತಮ್ಮೊಳಗೆ ಹಿಡಿದಿಟ್ಟುಕೊಳ್ಳಬಲ್ಲ ನೂತನ ಅಣುರಚನೆಗಳನ್ನು ಅಭಿವೃದ್ಧಿಪಡಿಸಿದ್ದ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ತಂತ್ರಜ್ಞಾನವು ವಾತಾವರಣದಿಂದ ಹಸಿರುಮನೆ ಅನಿಲಗಳನ್ನು ಹೀರಿಕೊಳ್ಳಲು ಮತ್ತು ಮರುಭೂಮಿ ವಾತಾವರಣದಲ್ಲಿ ತೇವಾಂಶವನ್ನು ಸಂಗ್ರಹಿಸಲು ತಳಹದಿ ಹಾಕಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್
ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ 215 ಕೋಟಿ ರೂ: ಸಿಎಂ ಘೋಷಣೆ
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ 215 ಕೋಟಿ ರೂ: ಸಿಎಂ ಘೋಷಣೆ
ದೆಹಲಿಯ ಯಮುನಾ ನದಿಯಲ್ಲಿ ತೇಲಿದ ವಿಷಕಾರಿ ನೊರೆ
ದೆಹಲಿಯ ಯಮುನಾ ನದಿಯಲ್ಲಿ ತೇಲಿದ ವಿಷಕಾರಿ ನೊರೆ
‘ಬರೀ ಟಾಸ್ಕ್ ಆಡಿದರೆ ಸಾಲದು’: ಧನುಷ್ ಆಟದ ಬಗ್ಗೆ ಲಕ್ಷ್ಮಿ ನೇರ ಮಾತು
‘ಬರೀ ಟಾಸ್ಕ್ ಆಡಿದರೆ ಸಾಲದು’: ಧನುಷ್ ಆಟದ ಬಗ್ಗೆ ಲಕ್ಷ್ಮಿ ನೇರ ಮಾತು
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ