AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೀತಿ ಕಳೆದುಕೊಳ್ಳಬೇಡಿ: ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ರಿಲೀಸ್

City Lights Kannada movie: ದುನಿಯಾ ವಿಜಿ ನಿರ್ದೇಶಿಸಿ, ವಿನಯ್ ರಾಜ್​​ಕುಮಾರ್, ಮೊನಿಷಾ ನಟಿಸಿರುವ ‘ಸಿಟಿ ಲೈಟ್ಸ್’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಸಿನಿಮಾದ ಹೊಸ ಹಾಡೊಂದು ಇದೀಗ ರಿಲೀಸ್ ಆಗಿದೆ. ಹಾಡಿನ ಬಗ್ಗೆ ಮಾತನಾಡಿದ ದುನಿಯಾ ವಿಜಿ, ಈ ಹಾಡು ಸಿನಿಮಾನಲ್ಲಿ ಇರುವುದಿಲ್ಲ ಎಂದರು.

‘ಪ್ರೀತಿ ಕಳೆದುಕೊಳ್ಳಬೇಡಿ: ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ರಿಲೀಸ್
City Lights
ಮಂಜುನಾಥ ಸಿ.
|

Updated on:Aug 25, 2026 | 6:54 PM

Share

ದುನಿಯಾ ವಿಜಯ್ (Duniya Vijay) ನಿರ್ದೇಶನದ ಮೂರನೇ ಸಿನಿಮಾ ‘ಸಿಟಿ ಲೈಟ್ಸ್’ ಚಿತ್ರೀಕರಣ ಮುಗಿಸಿದ್ದು, ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ತಮ್ಮ ನಿರ್ದೇಶನದ ಈ ಹಿಂದಿನ ಎರಡು ಸಿನಿಮಾಗಳಾದ ‘ಭೀಮ’ ಮತ್ತು ‘ಸಲಗ’ಗಳಲ್ಲಿ ಖುದ್ದು ತಾವೇ ನಾಯಕನಾಗಿ ನಟಿಸಿದ್ದರು. ಎರಡೂ ಸಿನಿಮಾಗಳು ಹಿಟ್ ಆದವು. ಇದೀಗ ತಮ್ಮ ನಿರ್ದೇಶನದ ಮೂರನೇ ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ದುನಿಯಾ ವಿಜಿ ಅವರ ಪುತ್ರಿ ಮೊನಿಷಾ ನಟಿಸಿದ್ದಾರೆ. ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ.

ದುನಿಯಾ ವಿಜಿ ನಿರ್ದೇಶನದ ಈ ಹಿಂದಿನ ಎರಡು ಸಿನಿಮಾಗಳು ಅಪ್ಪಟ ಆಕ್ಷನ್ ಸಿನಿಮಾಗಳಾಗಿದ್ದವು. ಆದರೆ ‘ಸಿಟಿ ಲೈಟ್ಸ್’ ಆಕ್ಷನ್ ಜೊತೆಗೆ ಪ್ರೇಮಕತೆಯನ್ನೂ ಸಹ ಒಳಗೊಂಡಿದೆ. ಈಗಾಗಲೇ ಸಿನಿಮಾದ ಕೆಲ ಹಾಡುಗಳು ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿವೆ. ಇದೀಗ ಸಿನಿಮಾದ ಯುಗಳ ಗೀತೆಯೊಂದು ಬಿಡುಗಡೆ ಆಗಿದೆ. ಚಿತ್ರದ 4ನೇ ಹಾಡು ಬಿಡುಗಡೆಯಾಗಿದ್ದು ಪ್ರೀತಿಯ ಕುರಿತ ಹಾಡು ಗಮನ ಸೆಳೆಯುತ್ತಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜೋಡಿಗಳ ಮೇಲೆ ಹಾಡು ಚಿತ್ರಿತವಾಗಿದೆ.

‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ’ ಎಂದು ಆರಂಭವಾಗುವ ಈ ಹಾಡನ್ನು ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ, ಸುಧಾಕರ್ ಗೌಡ ಬಿಡುಗಡೆ ಮಾಡಿ ಶುಭ ಹಾರೈಸಿದರು. ದುನಿಯಾ ವಿಜಿ ಅವರು ಉದ್ದೇಶಪೂರ್ವಕವಾಗಿ ಯುವಕಲಾವಿದರಿಂದ ಹಾಡನ್ನು ರಿಲೀಸ್ ಮಾಡಿಸಿದರು. ‘ಸಿಟಿ ಲೈಟ್ಸ್ ’ ಚಿತ್ರದ ಗೀತೆಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಈಗ ಬಿಡುಗಡೆ ಆಗಿರುವ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ, ಈ ಹಾಡನ್ನು ಅಂಥೋಣಿ ದಾಸ್ ಹಾಡಿದ್ದಾರೆ.

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ, ನಟ ದುನಿಯಾ ವಿಜಿ ‘ಯುವ ಕಲಾವಿದರು ಚಿತ್ರರಂಗವನ್ನು ಮುನ್ನೆಡೆಸುವರು. ನಿಮ್ಮ ಜೊತೆ ನಾವು ಬರ್ತಾ ಇದ್ದೇವೆ. ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ. ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅವರು ನಮಗೆ ಸ್ಪೂರ್ತಿ. ತಾಯಿ- ತಂದೆ ಕಣ್ಣಿಗೆ ಕಾಣುವ ದೇವರು. ಹೀಗಾಗಿಯೇ ಅಪ್ಪ- ಅಮ್ಮನ ಪೋಟೋ ಕೂಡ ಹಾಕಿದ್ದೇನೆ’ ಎಂದರು.

ಸಿನಿಮಾ ಮತ್ತು ಸಂಗೀತ ಎಂದೂ ಮೋಸ ಮಾಡಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡ್ತಾ ಇದ್ದೇ‌ನೆ. ಹಾಡಿನಲ್ಲಿ ಬಳಸಿಕೊಂಡ ಜೋಡಿಗಳು ಬದುಕು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಅವರ ಜೀವನದ ಜೋಡಿಗಳನ್ನು ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ಳಲಾಗಿದೆ . ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ. ಯೂ ಟೂಬ್ ನಲ್ಲಿ ಲಭ್ಯವಿರಲಿದೆ ಎಂದರು ದುನಿಯಾ ವಿಜಿ. ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಸಿನಿಮಾ ಸೆಪಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Tue, 25 August 26

Follow Us
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್