AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!

ಚಾಮರಾಜನಗರ: ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 25, 2026 | 1:49 PM

Share

Chamarajanagar news: ಚಾಮರಾಜನಗರ-ಆಸನೂರು ಮಾರ್ಗದಲ್ಲಿ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಹತ್ತಕ್ಕೂ ಹೆಚ್ಚು ಕಾಡಾನೆಗಳು ಅಡ್ಡಗಟ್ಟಿದ ಘಟನೆ ನಡೆದಿದೆ. ರಸ್ತೆ ಮಧ್ಯದಲ್ಲೇ ಲಾರಿಯಲ್ಲಿದ್ದ ಕಬ್ಬನ್ನು ತಿನ್ನಲು ಯತ್ನಿಸಿದ ಆನೆಗಳು ನಂತರ ಅಲ್ಲಿಂದ ತೆರಳಿವೆ. ಈ ರಸ್ತೆಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಲಾರಿ ಚಾಲಕರು ಎಚ್ಚರಿಕೆ ವಹಿಸಬೇಕು.

ಚಾಮರಾಜನಗರ, ಆಗಸ್ಟ್ 25: ಚಾಮರಾಜನಗರ ಜಿಲ್ಲೆಯ ಆಸನೂರು ಮಾರ್ಗದಲ್ಲಿ ಕಬ್ಬಿನ ಲಾರಿಯನ್ನು ಹತ್ತಕ್ಕೂ ಹೆಚ್ಚು ಕಾಡಾನೆಗಳು ಅಡ್ಡಗಟ್ಟಿ, ಲಾರಿಯಲ್ಲಿದ್ದ ಕಬ್ಬನ್ನು ತಿನ್ನಲು ಯತ್ನಿಸಿದ ಘಟನೆ ನಡೆದಿದೆ. ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಈ ಮಾರ್ಗದಲ್ಲಿ ಕಬ್ಬಿನ ಲೋಡ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯನ್ನು ಆನೆಗಳ ಹಿಂಡು ದಿಢೀರನೆ ಅಡ್ಡಗಟ್ಟಿದೆ. ಆನೆಗಳನ್ನು ನೋಡಿ ಲಾರಿ ಚಾಲಕ ಬೆಚ್ಚಿಬಿದ್ದಿದ್ದು, ಅಸಹಾಯಕನಾಗಿ ಲಾರಿಯನ್ನು ನಿಲ್ಲಿಸಿದ್ದಾನೆ. ಆನೆಯ ಹಿಂಡು ಕಬ್ಬನ್ನು ತಿನ್ನಲು ಯತ್ನಿಸಿ ನಂತರವೇ ಸ್ಥಳದಿಂದ ತೆರಳಿದೆ. ಚಾಲಕ ತಾಳ್ಮೆಯಿಂದ ಕಾದು ಕುಳಿತಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಚಾಮರಾಜನಗರದ ಆಸನೂರು ಮಾರ್ಗದಲ್ಲಿ ಕಬ್ಬು ತುಂಬಿದ ಲಾರಿಗಳು ಸಂಚರಿಸುವಾಗ ಕಾಡಾನೆಗಳು ಅಡ್ಡಗಟ್ಟುವುದು ಸಾಮಾನ್ಯ ಘಟನೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us