AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಮುಚ್ಚಿ ಬಿಡುವಷ್ಟರಲ್ಲೇ ಕೊಚ್ವಿ ಕೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ

ಆತ ಮೈಸೂರಿನ ಪಾಪುಲರ್ ಫಿಗರ್. ಹಲವರ ಪಾಲಿನ ಗಾಡ್ ಫಾದರ್. ಮೈಸೂರಿನ ಬಹುತೇಕ ಯುವಕರ ಪಾಲಿನ ಅಣ್ಣ. ಆತ ಬಂದ ಅಂದ್ರೆ ಅಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಅಂತಹ ಪಾಪುಲರ್ ಫಿಗರ್ ಆಗಿದ್ದವನು ತಾನೇ ಬೆಳಸಿದ ಯುವಕರಿಂದ ಬರ್ಬರವಾಗಿ ಕೊಲೆಯಾಗಿದ್ದಾನೆ. ಬೆಳೆಸಿದವನನ್ನೇ ಹತ್ಯೆಗೈದು ಡಾನ್ಸ್​ ಮಾಡಿ ವಿಕೃತಿ ಮರೆದಿದ್ದಾರೆ. ಛೇ ಇವರದೆಂಥಾ ಮನಸ್ಥಿತಿ..

ಕಣ್ಮುಚ್ಚಿ ಬಿಡುವಷ್ಟರಲ್ಲೇ ಕೊಚ್ವಿ ಕೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ
ಕಾರ್ತಿಕ್ (ಕೊಲೆಯಾದ ಯುವಕ)
ರಾಮ್​, ಮೈಸೂರು
| Edited By: |

Updated on: May 05, 2025 | 8:56 PM

Share

ಮೈಸೂರು, ಮೇ 05): ಯುವಕನನ್ನು ಐವರ ತಂಡ ಬರ್ಬರವಾಗಿ ಕೊಲೆಗೈದ (Murder) ಘಟನೆ ಮೈಸೂರು(Mysuru) ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌(33) ಎಂದು ಗುರುತಿಸಲಾಗಿದೆ. ಒಂದು ಕಾಲದಲ್ಲಿ ಕಾರ್ತಿಕ್ ಜೊತೆಗೆ ಇದ್ದ ಆತನ ಕುಚಿಕು ಗೆಳೆಯ ಪ್ರವೀಣ್ ಹಾಗೂ ಗ್ಯಾಂಗ್ ಈ ಕೊಲೆ ಮಾಡಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕಾರ್ತಿಕ್ ಪ್ರವೀಣ್ ನಡುವೆ ಕೆಲ ತಿಂಗಳ ಹಿಂದೆ ನಡೆಸಿದ್ದ ಗಲಾಟೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕಾರ್ತಿಕ್ ಪ್ರವೀಣ್ ಕೊಲೆ ಮಾಡುವ ಧಮ್ಕಿ ಹಾಕಿದ್ದನಂತೆ. ಕಾರ್ತಿಕ್ ತನ್ನನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕನನ್ನೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಕಾರ್ತಿಕ್ ಸ್ನೇಹಿತರು ಹೇಳೋ ಪ್ರಕಾರ, ಕಾರ್ತಿಕ್ ಒಳ್ಳೆ ಮನುಷ್ಯ ಅಂತೆ. ಯಾರಿಗೂ ಕೆಟ್ಟದ್ದು ಬಯಸುತ್ತಿರಲಿಲ್ಲವಂತೆ. ಕಾರ್ತಿಕ್ ಜೊತೆಯಲ್ಲಿ ಇದ್ದೋರೋ ಆತನ ಹೆಸರು ಹೇಳಿ ದುಡ್ಡು ಮಾಡಿಕೊಂಡಿದ್ದರಂತೆ. ಈ ವಿಚಾರ ಗೊತ್ತಾಗಿ ಕಾರ್ತಿಕ್ ಅವರಿಗೆ ಬೈದು ಬುದ್ಧಿ ಹೇಳಿದ್ದನಂತೆ. ಅದೇ ದ್ವೇಷಕ್ಕೆ ನಿನ್ನೆ ಕೊಲೆ ಮಾಡಿದ್ದಾರೆ ಅನ್ನೋದು ಅವರ ಅಭಿಪ್ರಾಯ.

ಇದನ್ನೂ ಓದಿ: ಬೆಂಗಳೂರು: ತಂದೆಯ ಕೊಲೆ ಪ್ರತೀಕಾರಕ್ಕಾಗಿ ಮಾವನನ್ನು ಕೊಂದ ಪುತ್ರ

ಇನ್ನು ಕಾರ್ತಿಕ್ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಜೊತೆಗೆ ಕಾರ್ತಿಕ್ ರೌಡಿಶೀಟರ್ ಆಗಿದ್ದ. ರೌಡಿ ಶೀಟರ್ ಆಗಿರುವುದರಿಂದ ಆತನನ್ನು ಗಡಿಪಾರು ಮಾಡಲಾಗಿತ್ತು. ಹೀಗಾಗಿ ಆತ ತನ್ನ ಮನೆಗೆ ಹೋಗದೆ ವರುಣ ಹತ್ತಿರ ಇರುವ ಹೋಟೆಲ್‌ನಲ್ಲಿದ್ದ.

ಇದನ್ನೂ ಓದಿ
Image
ತನಗಿಂತ 2 ವರ್ಷ ದೊಡ್ಡವಳೊಂದಿಗೆ ಲವ್​: ಯುವತಿ ಹಿಂದೆ ಬಿದ್ದ ಯುವಕನ ಹತ್ಯೆ
Image
ಲವ್ವರ್​ ಜತೆ ಪತ್ನಿ ಚಕ್ಕಂದ; ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
Image
ಪಲ್ಯ‌, ಸಾಂಬಾರ್ ಸರಿ ಮಾಡಲ್ಲ ಎಂದು ಹೆಂಡ್ತಿಯನ್ನೇ ಕೊಂದ ಪತಿ
Image
ಸುಹಾಸ್​ ಶೆಟ್ಟಿ ಕೊಲೆ: ಮಂಗಳೂರು ಸುತ್ತಮುತ್ತ 3 ಮಂದಿಗೆ ಚಾಕು ಇರಿತ

ಕಾರ್ತಿಕ್​ ಹತ್ಯೆ ಹಿಂದೆ ಮಹಿಳೆಯ ಕರಿನೆರಳು

ಕಾರ್ತಿಕ್ ತಾಯಿ ಪ್ರಕಾರ, ಈ‌ ಕೊಲೆಗೆ ಲಕ್ಷ್ಮೀ ಎನ್ನುವ ಮಹಿಳೆ ಕಾರಣವಂತೆ. ಆಕೆಯ ಕಾರಣವಾಗಿ ಈ ಕೊಲೆ ನಡೆದಿದೆಯಂತೆ. ನಿನ್ನೆ ರಾತ್ರಿ ಆಕೆ ಕಾರ್ತಿಕ್​ಗೆ ಕರೆ ಮಾಡಿ ಊಟಕ್ಕೆ ಬಾ ಎಂದು ಕರೆದಿದ್ದರಂತೆ. ಊಟ ಮುಗಿಸಿ ಹೋಗುವಾಗ ಲಕ್ಷ್ಮಿ ಎನ್ನುವ ಹುಡುಗಿ ಕರೆ ಮಾಡಿದ್ದಳಂತೆ. ಆಕೆ ಕರೆ ಬಳಿಕ ಕಾರ್ತಿಕ್ ಮನೆಯಿಂದ ತೆರಳಿದ್ದನಂತೆ. ಅಲ್ಲಿಂದ ನೇರವಾಗಿ ಕಾರ್ತಿಕ್ ಹೋಟೆಲ್ ‌ಗೆ ಹೋಗಿದ್ದಾನೆ . ಅಲ್ಲಿ ಪ್ರವೀಣ್ ಎಂಬಾತ ತನ್ನ ಗ್ಯಾಂಗ್ ಜೊತೆ ಸೇರಿ ಕಾರ್ತಿಕ್‌ಗೆ ಹೊಡೆದಿದ್ದಾನೆ.

ಸತ್ತು ಬಿದ್ದ ಕಾರ್ತಿಕ್​ ಮುಂದೆ ಡಾನ್ಸ್​

ಇನ್ನು ಪ್ರವೀಣ್ ಕಾರ್ತಿಕ್ ಜೊತೆಯೇ ಇದ್ದನಂತೆ. ಇದೇ ಲಕ್ಷ್ಮೀ ವಿಚಾರಕ್ಕೆ ಈ ಹಿಂದೆ ಕಾರ್ತಿಕ್ ಪ್ರವೀಣ್ ನಡುವೆ ಗಲಾಟೆಯಾಗಿತ್ತಂತೆ. ಕಾರ್ತಿಕ್ ಪ್ರವೀಣ್ ಗೆ ಬೈದು ಕಳುಹಿಸಿದ್ದನಂತೆ. ನಂತರ ಒಂದೂವರೆ ವರ್ಷದ ತನಕ ಆತ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲವಂತೆ. ಇದರ‌ ಜೊತೆಗೆ ಕಾರ್ತಿಕ್ ಬಡ್ಡಿ ವ್ಯವಹಾರ ಕೂಡ ನಡೆಸುತ್ತಿದ್ದನಂತೆ. ಹಣಕಾಸಿನ ವೈಷಮ್ಯಕ್ಕೂ ಕಾರ್ತಿಕ್ ಕೊಲೆ ಆಗಿರಬಹುದು ಎಂದು ಶಂಕಿಸಲಾಗ್ತಿದೆ. ಈ ನಡುವೆ ಕೊಲೆ ಮಾಡಿದ ಬಳಿಕ ಶವದ ವಿಡಿಯೋ ಮಾಡಿಕೊಂಡು,‌ ಡ್ಯಾನ್ಸ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

ಈ ಸಂಬಂಧ ವರುಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಕಾರ್ತಿಕ್ ಕೊಲೆಯಿಂದ‌ ಮೈಸೂರು ಬೆಚ್ಚಿ ಬಿದ್ದಿದೆ. ತಣ್ಣಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸೇಡಿನ ಕೊಲೆಗಳು ನಡೆಯುತ್ತಾ ಅನ್ನೋ ಅನುಮಾನ ಮೂಡಿಸಿದೆ. ಇದಕ್ಕೆ ಪೊಲೀಸರು ಯಾವ ರೀತಿ ಕಡಿವಾಣ ಹಾಕ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಈ ಕೊಲೆಗೆ ಬೇರೆ ಬೇರೆ ರೀತಿಯಾದ ಕಾರಣಗಳು ಹುಟ್ಟಿಕೊಂಡಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ