AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಿಸ್ಟೆಂಟ್ ಮ್ಯಾನೇಜರ್ ಇಶಾನ್ ಕಿಶನ್​ಗೆ RBI ನೀಡುವ ಸಂಭಾವನೆ ಎಷ್ಟು ಗೊತ್ತಾ?

Ishan Kishan RBI: ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಶಾನ್ ಕಿಶನ್ RBI ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ಕ್ರೀಡಾ ಕೋಟಾದಡಿ ಈ ಹುದ್ದೆ ಪಡೆದಿರುವ ಕಿಶನ್, ಮಾಸಿಕ 1 ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಾರೆ. ಅನೇಕ ಕ್ರೀಡಾಪಟುಗಳಂತೆ, ಇವರು ತಮ್ಮ ಕ್ರಿಕೆಟ್ ವೃತ್ತಿಜೀವನ ಮತ್ತು ಸರ್ಕಾರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಶಾನ್, ಪಾಟ್ನಾದ RBI ಕಚೇರಿಗೆ ಭೇಟಿ ನೀಡಿ ಗಮನ ಸೆಳೆದರು.

ಪೃಥ್ವಿಶಂಕರ
|

Updated on: Aug 05, 2026 | 5:28 PM

Share
ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಕ್ರಿಕೆಟ್​ನ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕೆಲವರು ಅವರು ಪ್ರತಿನಿಧಿಸುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ಭಾರತೀಯ ಸೇನೆಯಲ್ಲಿ ಗೌರವನ್ವಿತ ಹುದ್ದೆ ಸಿಕ್ಕಿದೆ. ಹಾಗೆಯೇ ಇನ್ನು ಕೆಲವರು ಆರ್​ಬಿಐನಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಒಬ್ಬರು(PC-PTI).

1 / 5
ಪ್ರಸ್ತುತ ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್, ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸವನ್ನು ಮುಗಿಸಿ ಬಂದಿರುವ ಕಿಶನ್​ ಪ್ರಸ್ತುತ ವಿರಾಮದಲ್ಲಿದ್ದಾರೆ. ಏಕೆಂದರೆ ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದೆ. ಆದರೆ ಕಿಶನ್​ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ(PC-PTI).

2 / 5
ಹೀಗಾಗಿ ಕ್ರಿಕೆಟ್​ನ ಹೊರತಾಗಿ ಆರ್​ಬಿಐ ನೌಕರನಾಗಿರುವ ಇಶಾನ್ ಕಿಶನ್​ ಪ್ರಸ್ತುತ ಪಾಟ್ನಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಈ ಹುದ್ದೆಯನ್ನು ನೀಡಲಾಗಿದೆ. ಸರ್ಕಾರಿ ಸಂಸ್ಥೆಗಳಿಂದ ನೇಮಕಗೊಂಡ ಅನೇಕ ಗಣ್ಯ ಕ್ರೀಡಾಪಟುಗಳಂತೆ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಕ್ರಿಕೆಟ್ ವೃತ್ತಿಜೀವನ ಎರಡನ್ನೂ ನಿರ್ವಹಿಸುತ್ತಾರೆ(PC-PTI).

3 / 5
ಅದರಂತೆ ತಮ್ಮ ಆರ್‌ಬಿಐ ಗುರುತಿನ ಚೀಟಿ ಧರಿಸಿ ಇಶಾನ್ ಕಿಶನ್ ಪಾಟ್ನಾ ಕಚೇರಿಗೆ ಆಗಮಿಸಿದರು. ಇಶಾನ್ ಕಿಶನ್ ಬಂದ ತಕ್ಷಣ, ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ನೌಕರರು ಮುಗಿಬಿದ್ದರು. ಕಿಶನ್ ಯಾರನ್ನೂ ನಿರಾಶೆಗೊಳಿಸದೆ ಫೋಟೋಗೆ ಪೋಸ್​ ನೀಡಿದರು.

4 / 5
ಮೇಲೆ ಹೇಳಿದಂತೆ ಇಶಾನ್ ಕಿಶನ್ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಅವರು ಎ ಗ್ರೇಡ್ ಉದ್ಯೋಗಿಯಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಕೆಲಸ ಧಕ್ಕಿಸಿಕೊಂಡಿರುವ ಇಶಾನ್ ಕಿಶನ್​ಗೆ ಮಾಸಿಕವಾಗಿ 1 ಲಕ್ಷದಿಂದ 1.4 ಲಕ್ಷ ರೂ.ಗಳವರೆಗೆ ಸಂಬಳ ಸಿಗಲಿದೆ.

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR

ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ

ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು