ಕಾಂಗ್ರೆಸ್ ಸಾಧನಾ ಸಮಾವೇಶ: ಶಾಶ್ವತ ಹಕ್ಕು ಪತ್ರ ವಿತರಿಸಿದ ಸಂದರ್ಭವನ್ನು ಐತಿಹಾಸಿಕವೆಂದ ಕೃಷ್ಣ ಭೈರೇಗೌಡ
ಅಧಿಕಾರಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸುವ 5 ಪುಸ್ತಕಗಳನ್ನು ಇಂದು ಬಿಡುಗಡೆ ಮಾಡಲಾಯಿತು. ಸರ್ಕಾರವಲ್ಲದೆ, ಕಂದಾಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಸಾಧನೆ ವಿವರಿಸುವ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮಲ್ಲಿಕಾರ್ಜನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ರಂದೀಪ್ ಸುರ್ಜೆವಾಲಾ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ವಿಜಯನಗರ, ಮೇ 20: ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು ಎಂದರೆ ಉತ್ಪ್ರಕ್ಷೆ ಅನಿಸದು. ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ನಿಸ್ಸಂದೇಹವಾಗಿ ಈ ಸಮಾವೇಶದ ಶೋ ಸ್ಟಾಪರ್ ಆಗಿದ್ದರು. ರಾಹುಲ್ ಗಾಂಧಿಯವರು ವೇದಿಕೆಯ ಮೇಲೆ 5 ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರವನ್ನು ವಿತರಿಸಿದ್ದನ್ನು ಕೃಷ್ಣ ಐತಿಹಾಸಿಕ ಕ್ಷಣವೆಂದು ಬಣ್ಣಿಸಿದರು. ರಾಹುಲ್ ನೀಡಿದ ಫೈಲ್ನಲ್ಲಿ ಉಪ ನೋಂದಣಿ ಕಚೇರಿಯ ನೋಂದಣಿ ಪತ್ರ, ಪಂಚಾಯಿತಿ ಖಾತೆ ಮತ್ತು ಉತಾರಾವನ್ನು ಒಳಗೊಂಡಿದೆ ಎಂದು ಹೇಳಿದ ಸಚಿವ, ಇದು ಶಾಶ್ವತವಾದ ದಾಖಲೆ, ಕಳೆದುಹೋಗದು ಎಂದರು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 1,11,111 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗತ್ತಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಸ್ ಬುಕ್: ನಾಳೆ ಉತ್ತರ ಕರ್ನಾಟ ಜಿಲ್ಲೆಗಳಲ್ಲಿ ಸಂಚಾರ ವ್ಯತ್ಯಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ