ಕಾಂಗ್ರೆಸ್ ಸಾಧನಾ ಸಮಾವೇಶ: ರಾಹುಲ್ ಗಾಂಧಿಯ ಗಮನಸೆಳೆಯುವಲ್ಲಿ ವಿಫಲರಾದ ಕೃಷ್ಣ ಭೈರೇಗೌಡ
ವೇದಿಕೆಯ ಪೋಡಿಯಂ ಮುಂದೆ ನಿಂತು ಮಾತಾಡುತ್ತಿದ್ದ ಕೃಷ್ಣ ಭೈರೇಗೌಡ, ದಾಖಲೆಗಳಿಲ್ಲದ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ರಾಹುಲ್ ಗಾಂಧಿ ಕಂಡ ಕನಸಾಗಿತ್ತು, ಹಾಗಾಗಿ ಅವರ ಮೂಲಕವೇ 1,11,111 ಜನರಿಗೆ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎನ್ನುತ್ತಾರೆ. ಅವರು ಇದನ್ನು ಹೇಳುವಾಗ ರಾಹುಲ್ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರಾದರೂ ದೆಹಲಿ ನಾಯಕ ಮಾತ್ರ ಮಾತಿನಲ್ಲಿ ಬ್ಯೂಸಿ.
ವಿಜಯನಗರ, ಮೇ 20: ಸಿದ್ದರಾಮಯ್ಯ ಸರ್ಕಾರ (Siddaramaiah government) ಅಧಿಕಾರದಲ್ಲಿ ಎರಡು ವರ್ಷ ಪೂರೈಸಿರುವ ಹಿನ್ನೆಲೆ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಆಯೋಜಿಸಿದ್ದು ಇದರಲ್ಲಿ ಸರ್ಕಾರದ ಎಲ್ಲ ಮಂತ್ರಿಗಳು ಮತ್ತು ಶಾಸಕರಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ಸಮಾರಂಭದ ಪ್ರಾಸ್ತಾವಿಕ ಭಾಷಣವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಡುತ್ತಿದ್ದರೆ, ವೇದಿಕೆಯ ಮೇಲಿದ್ದ ಗಣ್ಯರು ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಪರಸ್ಪರ ಮಾತಿನಲ್ಲಿ ಮಗ್ನರಾಗಿದ್ದರೆ; ಖರ್ಗೆ, ರಾಹುಲ್ ಗಾಂಧಿ ಮತ್ತು ರಂದೀಪ್ ಸುರ್ಜೆವಾಲಾ ತಮ್ಮ ನಡುವೆ ಮಾತಿನಲ್ಲಿ ತೊಡಗಿದ್ದರು. ನಂತರ ಡಿಕೆ ಶಿವಕುಮಾರ್ ಸಹ ಅವರ ಜೊತೆಗೂಡುತ್ತಾರೆ.
ಇದನ್ನೂ ಓದಿ: ಸಾಧನಾ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು: ಈಶ್ವರ್ ಖಂಡ್ರೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ