ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಸ್ ಬುಕ್: ನಾಳೆ ಉತ್ತರ ಕರ್ನಾಟ ಜಿಲ್ಲೆಗಳಲ್ಲಿ ಸಂಚಾರ ವ್ಯತ್ಯಯ
ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಳೆ ವಿಜಯನಗರದಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ಸರ್ಕಾರಿ ಬಸ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ನಾಳೆ ಒಂದು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ವಿಜಯನಗರ, ಮೇ 19: ಕಾಂಗ್ರೆಸ್ (Congress) ಸರ್ಕಾರ 2 ವರ್ಷಗಳ ಅಧಿಕಾರವಧಿ ಪೂರ್ಣಗೊಳಿಸಿದೆ. ಈ ಹಿನ್ನಲೆ ನಾಳೆ ಜಿಲ್ಲೆಯಲ್ಲಿ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. 3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇನ್ನು ಈ ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆದೊಯ್ಯಲು, ಸರ್ಕಾರಿ ಬಸ್ಗಳನ್ನು (Government bus) ನಿಯೋಜನೆ ಮಾಡಲಾಗಿದೆ. ಹಾಗಾಗಿ ನಾಳೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಪ್ರಯಾಣಿಕರು ನಾಳೆಯ ಪ್ರಯಾಣವನ್ನು ಮುಂದೂಡುವುದು ಉತ್ತಮ ಎನ್ನಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ ಯಶಸ್ವಿಯಾಗಿ ಪೂರೈಸುತ್ತದೆ. ಈ ಹಿನ್ನೆಲೆ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜೊತೆಗೆ ವಿವಿಧ ಸವಲತ್ತುಗಳ ವಿತರಣಾ ಸಮಾವೇಶವೂ ನಡೆಯಲಿದೆ. ಎಲ್ಲಾ ಜಿಲ್ಲೆಗಳಿಂದ ವಿವಿಧ ಯೋಜನೆಗಳ ಫಲಾನುಭವಿಗಳು ವಿಜಯನಗರದತ್ತ ಮುಖ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯಿಂದ 200 ಬಸ್ಗಳು ನಿಗದಿ
ವಿಜಯಪುರ ಜಿಲ್ಲೆಯಿಂದ 200 ಬಸ್ಗಳನ್ನು ನಿಗದಿ ಮಾಡಲಾಗಿದೆ. ವಿಜಯಪುರದಿಂದ ಸಾವಿರಾರು ಜನರು ತೆರಳಿದ್ದಾರೆ. ಫಲಾನುಭವಿಗಳ ಬೆಂಬಲಿಗರು ತೆರಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನಲೆ ನಾಳೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಬಸ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾಗಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ವಿಜಯಪುರ ಜಿಲ್ಲಾ ವಿಭಾಗೀಯ ನಿಯಂತ್ರಾಣಾಧಿಕಾರಿ ನಾರಾಯಣಪ್ಪ ಕುರುಬರ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಳೆ ಸೃಷ್ಟಿಸಿರುವ ಅವಾಂತರಗಳನ್ನು ಬಿಬಿಎಂಪಿ ವಾರ್ರೂಮಲ್ಲಿ ಕೂತು ನೋಡಿದರೆ ಪರಿಹಾರಗಳು ಸಿಗುತ್ತವೆಯೇ?
ಜಿಲ್ಲೆಯಲ್ಲಿ ನಿತ್ಯ 800 ಬಸ್ಗಳು ಜಿಲ್ಲೆ, ಅಂತರ್ ಜಿಲ್ಲೆ ಹಾಗೂ ಅಂತಾರಾಜ್ಯಗಳಲ್ಲಿ ಪ್ರಯಾಣ ಮಾಡುತ್ತವೆ. ನಾಳೆ ವಿಜಯನಗರಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶಕ್ಕೆ ಜಿಲ್ಲೆಯಿಂದ 200 ಬಸ್ಗಳನ್ನು ನೀಡಲಾಗಿದೆ. ಉಳಿದ 600 ಬಸ್ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾದಂತೆ ಸೇವೆ ನೀಡುತ್ತೇವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
200 ಬಸ್ಗಳು ಮೀಸಲು
ಬಾಗಲಕೋಟೆ ಜಿಲ್ಲೆಯ 200 ಬಸ್ಗಳು ಮೀಸಲಿಡಲಾಗಿದೆ. ವಿವಿಧ ಸವಲತ್ತುಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನ ಕರೆದೊಯ್ಯುವ ನೆಪದಲ್ಲಿ ಬಸ್ ಮೀಸಲಿಡಲಾಗಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಯಾದಗಿರಿಯಿಂದ 76 ಕೆಕೆಆರ್ಟಿಸಿ ಬಸ್ ಬಳಕೆ
ಇನ್ನು ಯಾದಗಿರಿಯಿಂದ ಕೂಡ 76 ಕೆಕೆಆರ್ಟಿಸಿ ಬಸ್ ಬಳಕೆ ಮಾಡಲಾಗುತ್ತಿದೆ. ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆದೊಯ್ಯಲು ಬಸ್ಗಳ ಬಳಕೆ ಹಿನ್ನಲೆ ಇತ್ತ ಯಾದಗಿರಿ ಜಿಲ್ಲೆಯ ಶಹಾಪುರ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು, ವೃದ್ಧ ಪ್ರಯಾಣಿಕರು ಪರದಾಡುವಂತಾಗಿದೆ.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: 4 ತಿಂಗಳು ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಬಂದ್
ದೂರದ ಊರುಗಳಿಗೆ ತೆರಳಲು ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದು, ಗಂಟೆಗಟ್ಟಲೆ ಕಾದರೂ ಬಸ್ಗಳು ಬಂದಿಲ್ಲ. ಸಮಾವೇಶಕ್ಕೆ ಸರ್ಕಾರಿ ಬಸ್ ಬದಲು ಖಾಸಗಿ ಬಸ್ ಬಳಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ತಮಗೆ ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:50 pm, Mon, 19 May 25




