AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆ ಇನ್ನೂ ಜಲಾವೃತ, ನೀರು ರಾಜಾಕಾಲುವೆಗೆ ಹರಿಸಲು ಹರಸಾಹಸ

ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆ ಇನ್ನೂ ಜಲಾವೃತ, ನೀರು ರಾಜಾಕಾಲುವೆಗೆ ಹರಿಸಲು ಹರಸಾಹಸ

ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2025 | 1:33 PM

Share

ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆ ಮೇಲೆ ಮೊಣಕಾಲಿಗಿಂತ ಹೆಚ್ಚಿನ ಮಟ್ಟದವರೆಗೆ ನೀರು ನಿಂತಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ನಿನ್ನೆ ಸಂಗ್ರಹವಾಗಿದ್ದ ನೀರನ್ನು ರಾಜಾ ಕಾಲುವೆ ಹರಿಬಿಟ್ಟಿದ್ದರೆ ಇವತ್ತು ಪ್ರಾಯಶಃ ಇಷ್ಟೊಂದು ನೀರು ಇರುತ್ತಿರಲಿಲ್ಲ. ಆದರೆ ಬಿಬಿಎಂಪಿಯ ಅಧಿಕಾರಿಗಳು ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡ ನಂತರವೇ ನೀರಿಗಾಗಿ ಬಾವಿ ಅಗೆಯಲಾರಂಭಿಸುತ್ತಾರೆ.

ಬೆಂಗಳೂರು, ಮೇ 20: ಈ ಜಾಗವನ್ನು ನಿನ್ನೆ ನಿಮಗೆ ತೋರಿಸಲಾಗಿತ್ತು. ಬಿಎಂಟಿಸಿ ಬಸ್ (BMTC bus) ಮಳೆನೀರಲ್ಲಿ ಕೆಟ್ಟು ನಿಂತು ಬಸ್ಸಲ್ಲಿದ್ದ ಗರ್ಭಿಣಿ ಮಹಿಳೆ ಪರದಾಡಿದ ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ಸ್ಥಳವಿದು. ಇಂದು ಬೆಳಗ್ಗೆ ಮತ್ತೇ ಧಾರಾಕಾರವಾಗಿ ಮಳೆ ಸುರಿದ ಕಾರಣ ರಸ್ತೆ ಮೇಲೆ ನಿನ್ನೆಗಿಂತ ಜಾಸ್ತಿ ಸಂಗ್ರಹಗೊಂಡಿದೆ. ನೀರು ಖಾಲಿ ಮಾಡುವ ಕೆಲಸವನನ್ನು ಬಿಬಿಎಂಪಿ ಸಿಬ್ಬಂದಿ ಮತ್ತು ಸಿವಿಲ್ ಡಿಫೆನ್ಸ್ ನವರು ಕೈಗೆತ್ತಿಕೊಂಡಿರುವರಾದರೂ ನೀರು ಇನ್ನೂ ಸಾಕಷ್ಟಿದೆ. ಪಂಪ್​ಸೆಟ್ ಮತ್ತು ಮೋಟಾರುಗಳನ್ನು ಬಳಸಿ ನೀರನ್ನ ಪಕ್ಕದಲ್ಲೇ ಹರಿಯುವ ರಾಜಾ ಕಾಲುವೆಗೆ ಹಾಕಲಾಗುತ್ತಿದೆ. ಈ ರಸ್ತೆಯನ್ನು ಬಂದ್ ಮಾಡಲಾಗಿದ್ದು ಟ್ರಾಫಿಕ್ ಅನ್ನು ಸರ್ಜಾಪುರ ರಸ್ತೆಗೆ ಡೈವರ್ಟ್ ಮಾಡಲಾಗಿದೆ.

ಇದನ್ನೂ ಓದಿ:  ಮಳೆಗೆ ಸಣ್ಣಪುಟ್ಟ ಸಮಸ್ಯೆ ಆಗೇ ಆಗುತ್ತೆ: ಬಿಬಿಎಂಪಿ ಆಯುಕ್ತ ಉಡಾಫೆ ಮಾತು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ