ಕೋರ್ಟ್ ಹಾಲ್ನಲ್ಲಿ ಅಕ್ಕ-ಪಕ್ಕ ನಿಂತ ದರ್ಶನ್,ಪವಿತ್ರಾ; ಹೊರಬರುವಾಗ ಅಪರೂಪದ ಘಟನೆ
ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್ಗೆ ಹಾಜರಿ ಹಾಕಬೇಕು ಎಂಬುದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ದರ್ಶನ್, ಪವಿತ್ರಾ ಕೋರ್ಟ್ಗೆ ಹಾಜರಿ ಹಾಕಿದ್ದಾರೆ. ಕೋರ್ಟ್ನಿಂದ ಹೊರ ಬರುವಾಗ ದರ್ಶನ್ ಕೈನ ಪವಿತ್ರಾ ಹಿಡಿದುಕೊಂಡಿದ್ದರು ಎಂದು ವರದಿ ಆಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ (Pavitra Gowda) ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆರೋಪಿ ಎನಿಸಿಕೊಂಡಿದ್ದಾರೆ. ಇಂದು ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದಿದೆ. ಈ ವೇಳೆ ಒಂದಷ್ಟು ಅಪರೂಪದ ಘಟನೆಗಳು ನಡೆದವು. ಕೋರ್ಟ್ ಹಾಲ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಕೋರ್ಟ್ನಲ್ಲಿ ಅಕ್ಕ-ಪಕ್ಕದಲ್ಲಿ ನಿಂತಿದ್ದರು. ಅಷ್ಟೇ ಅಲ್ಲ, ಕೋರ್ಟ್ನಿಂದ ಹೊರ ಬರುವಾಗ ದರ್ಶನ್ ಕೈನ ಪವಿತ್ರಾ ಹಿಡಿದುಕೊಂಡಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್ಗೆ ಹಾಜರಿ ಹಾಕಬೇಕು ಎಂಬುದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ಪವನ್ ಹೊರತುಪಡಿಸಿ ಮತ್ತೆಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಿ ಹಾಕಿದ್ದಾರೆ.
ಕೋರ್ಟ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಅಕ್ಕ-ಪಕ್ಕ ಇದ್ದರು. ಕೋರ್ಟ್ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದ ಬಗ್ಗೆ ವರದಿ ಆಗಿದೆ. ಇನ್ನು, ಪವಿತ್ರಾ ಹಠ ಮಾಡಿದ್ದಕ್ಕೆ ದರ್ಶನ್ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳು ಹಾಜರಿ ಹಾಕಲು ಕೋರ್ಟ್ ಸೂಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
