ಸಿಲ್ಕ್ ಬೋರ್ಡ್ ಬಳಿ ಮಳೆನೀರಲ್ಲಿ ಕೆಟ್ಟುನಿಂತ ಬಿಎಂಟಿಸಿ ಬಸ್ಸು, ಗರ್ಭಿಣೆ ಮಹಿಳೆ ವಾಹನದೊಳಗೆ ಸಿಲುಕಿ ಪರದಾಟ
ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಬೆಂಗಳೂರನ್ನು ಏನೆಲ್ಲ ಮಾಡುತ್ತೇವೆ ಅಂತ ಹೇಳಿಕೊಳ್ಳುತ್ತವೆ, ಆದರೆ ಅವು ಏನು ಮಾಡೋದು ಬೇಡ, ನಗರದ ರಸ್ತೆಗಳನ್ನು ಸರಿಮಾಡಿದರೆ ಸಾಕು. ಗಮನಿಸಬೇಕಾದ ಸಂಗತಿಯೆಂದರೆ ಮೆಟ್ರೋ ಕಾಮಗಾರಿಗಳು ಶುರುವಾದಾಗಿನಿಂದ ನಗರದ ರಸ್ತೆಗಳು ಹದಗೆಟ್ಟಿವೆ. ತಮ್ಮ ಕೆಲಸ ಮುಗಿದ ಬಳಿಕ ಬಿಎಂಆರ್ಸಿಲ್ ರಸ್ತೆಗಳನ್ನು ಮೊದಲಿನಂತೆ ಮಾಡಿದರೆ ಸಮಸ್ಯೆ ಕೊಂಚ ಕಡಿಮೆಯಾಗಬಹುದು.
ಬೆಂಗಳೂರು, ಮೇ 19: ನಮ್ಮ ಬೆಂಗಳೂರು, ಗ್ರೇಟರ್ ಬೆಂಗಳೂರು (Greater Bengaluru), ಸಿಲಿಕಾನ್ ವ್ಯಾಲಿ-ಅದೂ ಇದೂ ಅಂತ ಹೇಳಿದ್ದೊಂದೇ ಬಂತು ಮಾರಾಯ್ರೇ, ಆದರೆ ಮಳೆಯಾದರೆ ನಗರದಲ್ಲಿ ವಾಸ ಮಾಡುವುದು ಹಾಗಿರಲಿ, ಅದನ್ನು ನೆನಸಿಕೊಳ್ಳಲೂ ವಾಕರಿಗೆ ಬಂದಾಗುತ್ತದೆ. ಬಿಎಂಟಿಸಿ ಬಸ್ಸಲ್ಲಿ ಸಿಲುಕಿಕೊಂಡಿರುವ ನಂದಿನಿ ಹೆಸರಿನ ಮಹಿಳೆಯ ಪಾಡು ನೋಡಿ. ಅವರು ಪಯಣಿಸುತ್ತಿದ್ದ ಬಸ್ಸು ಸಿಲ್ಕ್ ಬೋರ್ಡ್ ಬಸ್ಸು ಕೆಟ್ಟು ನಿಂತಿದೆ. ಬಸ್ಸಲಿದ್ದ ಬೇರೆ ಪ್ರಯಾಣಿಕರು ಕೆಳಗಿಳಿದು ಬೇರೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಸುರಿ ಮಹಿಳೆಗೆ ಕಿಟಕಿ, ಬಸ್ಸಿನ ಕ್ಯಾಬಿನ್ ಅಥವಾ ಡೋರ್ನಿಂದ ಕೆಳಗಿಳಿಯಲಾಗದು. ಬಸ್ಸಿನ ಎಡಭಾಗದಲ್ಲಿ ಮೊಣಕಾಲುಮಟ್ಟ ಮಳೆನೀರು ನಿಂತಿದೆ. ಹೇಗೆ ಇಳಿಯುತ್ತೀರಿ ಅಂದರೆ, ಪತಿ ಸ್ನೇಹಿತರೊಬ್ಬರನ್ನು ಕಳಿಸಿದ್ದಾರೆ ಅವರು ಬಂದು ಏನಾದರೂ ಮಾಡುತ್ತಾರೆ ಎನ್ನುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ಸಾಯಿ ಲೇಔಟ್ನಲ್ಲಿ ಅರ್ಧಭಾಗದಷ್ಟು ಮುಳುಗಿದ ಕಾರುಗಳು, ಟ್ರ್ಯಾಕ್ಟರ್ನಲ್ಲಿ ಬಂದ ಅಧಿಕಾರಿಗಳು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

