ಬೆಂಗಳೂರಿನ ಸಾಯಿ ಲೇಔಟ್ನಲ್ಲಿ ಅರ್ಧಭಾಗದಷ್ಟು ಮುಳುಗಿದ ಕಾರುಗಳು, ಟ್ರ್ಯಾಕ್ಟರ್ನಲ್ಲಿ ಬಂದ ಅಧಿಕಾರಿಗಳು
ಬಿಬಿಎಂಪಿಯ ಅಧಿಕಾರಿಗಳು ಸ್ಥಳ ಬಂದಿರೋದೇನೋ ನಿಜ, ಅದರೆ ಅವರು ಟ್ರ್ಯಾಕ್ಟರ್ನಲ್ಲಿ ಬಂದಿದ್ದಾರೆ. ಒಬ್ಬ ಅಧಿಕಾರಿ ಟ್ರ್ಯಾಕ್ಟರ್ನಲ್ಲಿ ಕುಳಿತು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ಏರಿಯಾದ ಜನ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಆದರೆ ಅದು ಅವರ ಮೇಲೆ ಯಾವುದೇ ಪ್ರಭಾವ ಬೀರದು! ಬೈಸಿಕೊಂಡು, ಉಗಿಸಿಕೊಂಡು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅಭ್ಯಾಸವಾಗಿ ಹೋಗಿದೆ.
ಬೆಂಗಳೂರು, ಮೇ 19: ಬೆಂಗಳೂರು ಮಹಾನಗರದಲ್ಲಿ (Bengaluru city) ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಅಗಿರುವ ಅವಾಂತರಗಳನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ನಗರದ ಕೆಅರ್ ಪುರಂ ಕ್ಷೇತ್ರದಲ್ಲಿರುವ ಸಾಯಿ ಲೇಔಟ್ ಕತೆಯನ್ನು ಮೊನ್ನೆಯಷ್ಟೇ ಹೇಳಿದ್ದೆವು. ಅವತ್ತು ಸುರಿದಿದ್ದು ಅಂಥ ದೊಡ್ಡ ಮಳೆಯೇನಲ್ಲ, ಅದರೆ ನಿನ್ನೆ ರಾತ್ರಿಯಾಗಿದ್ದು ಮಾತ್ರ ಭಯಂಕರ ಮಳೆ. ಹಾಗಾಗೇ ಏರಿಯಾದ ಜನರ ಸಮಸ್ಯೆಗಳು ಇಮ್ಮಡಿಗೊಂಡಿವೆ. ಮನೆಗಳ ಮುಂದಿನ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಕಾರುಗಳ ಅರ್ಧಭಾಗ ಮುಳುಗಡೆಯಾಗಿದೆ. ಇಲ್ಲೊಂದು ಕಾರನ್ನು ಮೂವ್ ಮಾಡಲೂ ಆಗುತ್ತಿಲ್ಲ, 6-7 ಜನ ಸೇರಿ ತಳ್ಳುತ್ತಿದ್ದಾರೆ.
ಇದನ್ನೂ ಓದಿ:ಕೆಅರ್ ಪುರದ ಸಾಯಿ ಲೇಔಟ್ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್

6,6,6,6,6:: ಬಿರುಗಾಳಿ ಬ್ಯಾಟಿಂಗ್ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!

‘ಎಸ್ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್

ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
