ಕೆಅರ್ ಪುರದ ಸಾಯಿ ಲೇಔಟ್ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ
ಇದು ಕೇವಲ ಸಾಯಿ ಲೇಔಟ್ ಕತೆ ಮಾತ್ರ ಅಲ್ಲ, ನಗರದ ಅನೇಕ ಪ್ರದೇಶಗಳಲ್ಲಿ ಇಂಥ ಸ್ಥಿತಿ ಇದೆ. ಮನೆಗಳಲ್ಲಿ ನೀರು ಸೇರಿದ ಕಾರಣ ಜನ ಅದನ್ನು ಖಾಲಿ ಮಾಡುವ ಕೆಲಸದಲ್ಲಿ ರಾತ್ರಿ ಕಳೆದಿದ್ದಾರೆ, ನಿದ್ದೆ ಮಾಡುವ ಮಾತು ದೂರವಾಯಿತು, ಕೂತುಕೊಳ್ಳಲೂ ಅವರಿಗೆ ಒಂದಷ್ಟು ಒಣನೆಲ ಸಿಗದ ಸ್ಥಿತಿ ನಿರ್ಮಾಣವಾಗಿತ್ತು. ಒಂದು ಮಳೆಗೆ ಪರಿಸ್ಥಿತಿ ಹೀಗಾದರೆ ಮಳೆಗಾಲಿದಲ್ಲಿ ಏನು ಅಂತ ಜನ ಚಿಂತೆಗೀಡಾಗಿದ್ದಾರೆ.
ಬೆಂಗಳೂರು, ಮೇ 14: ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿದೆ, ನಗರದ ಜನಸಂಖ್ಯೆ ಒಂದೂಕಾಲು ಕೋಟಿ ದಾಟಿದೆ, ಹೆಚ್ಚುಕಡಿಮೆ ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆಯೂ ಇದೆ, ಇನ್ಫ್ರಾಸ್ಟ್ರಕ್ಚರ್ (city infrastructure) ಬಗ್ಗೆ ದೂರುತ್ತಲೇ ಹೊಸ ಹೊಸ ಕಂಪನಿಗಳು ಬಂದು ನೆಲೆಯೂರುತ್ತಿವೆ; ಆದರೆ ರಸ್ತೆ ಮತ್ತು ಲೇಔಟ್ ಗಳ ಸ್ಥಿತಿ ಮಾತ್ರ ಕೇಳಬೇಡಿ. ಇದು ಮಳೆಗಾವಲ್ಲ, ಆದರೆ ನಿನ್ನೆ ಸುರಿದ ಧಾರಾಕಾರ ಮಳೆಗೆ ನಗರದ ಹಲವಾರು ಏರಿಯಾಗಳು ಜಲಾವೃತ ಮತ್ತು ರಸ್ತೆಗಳ ಮೇಲೆ ಈಜಾಡುವಷ್ಟು ನೀರು! ಕೆಅರ್ ಪುರ ವಿಧಾನಸಭಾ ಕ್ಷೇತ್ರದ ಸಾಯಿ ಲೇಔಟ್ನಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ಪಡುತ್ತಿರುವ ಬವಣೆ ದೇವರಿಗಷ್ಟೇ ಪ್ರೀತಿ.
ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿ ಕರ್ನಾಟಕದ 21 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, ಯೆಲ್ಲೋ ಅಲರ್ಟ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ