ಪಾಕಿಸ್ತಾನ ಮುಸ್ಲಿ ರಾಷ್ಟ್ರವಾದರೂ ಇಸ್ಲಾಮಿಕ್ ದೇಶಗಳು ಅದರ ಜೊತೆ ನಿಲ್ಲಲಿಲ್ಲ: ಯದುವೀರ್ ಕೃಷ್ಣದತ್ತ ಒಡೆಯರ್
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲ್ಲ, ಉಗ್ರರ ಪೋಷಕರಾಗಿ ಮುಂದುವರಿದರೆ ವ್ಯಾಪಾರಗಳೆಲ್ಲ ಸ್ಥಗಿತಗೊಳ್ಳುತ್ತವೆ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ, ಪಾಕಿಸ್ತಾನದ ಜೊತೆ ಯುದ್ಧದಲ್ಲಿ ಬಿಜೆಪಿ, ಕಾಂಗ್ರೆಸ್ ಅಂತಿಲ್ಲ, ಈ ವಿಷಯದಲ್ಲಿ ರಾಜಕೀಯ ಪ್ರಶ್ನೆಯೇ ಉದ್ಭವಿಸಲ್ಲ, ಭಾರತದ ಸಶಸ್ತ್ರ ಪಡೆ ಮತ್ತು ಭಾರತ ಸರ್ಕಾರ ಮಾತ್ರ ಮುಖ್ಯವಾಗುತ್ತವೆ ಎಂದು ಯದುವೀರ್ ಹೇಳಿದರು.
ಮೈಸೂರು, ಮೇ 14: ಪಹಲ್ಗಾಮ್ ಉಗ್ರರ ದಾಳಿಯ (Pahalgam terror attack) ನಂತರ ಭಾರತೀಯ ಸೇನೆ ಉಗ್ರರ 9 ಶಿಬಿರಗಳನ್ನು ಧ್ವಂಸ ಮಾಡಿದ್ದಲ್ಲದೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿಗಳನ್ನು ಮಣ್ಣು ಮುಕ್ಕಿಸಿದೆ, ಸೇನೆಯ ದಾಳಿಯಲ್ಲಿ ಏನಿಲ್ಲವೆಂದರೂ 100 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಮೈಸೂರು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು, ಪಾಕಿಸ್ತಾನ ಒಂದು ಮುಸ್ಲಿಂ ರಾಷ್ಟ್ರವಾದರೂ ಭಾರತದೊಂದಿಗೆ ಯುದ್ಧ ಮಾಡುವಾಗ ಇಸ್ಲಾಮಿಕ್ ರಾಷ್ಟ್ರಗಳ್ಯಾವೂ ಅದರ ಜೊತೆ ನಿಲ್ಲಲಿಲ್ಲ, ಭಯೋತ್ಪಾದನೆಯಿಂದ ಆ ರಾಷ್ಟ್ರಗಳು ಅಷ್ಟು ಬೇಸತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಡ್ರೋನ್, ಕ್ಷಿಪಣಿಗಳ ಬಗ್ಗೆ ಯೋಚಿಸಿದರೂ ಪಾಕಿಸ್ತಾನಕ್ಕೆ ನಿದ್ರೆ ಬರುವುದಿಲ್ಲ; ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಮೋದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ