ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಅವರು ಸಾಕಷ್ಟು ಖ್ಯಾತಿ ಪಡೆದುಕೊಂಡರು. ಅವರ ಬಗ್ಗೆ ಇದ್ದ ನೆಗೆಟಿವ್ ಟಾಕ್ ಪಾಸಿಟಿವ್ ಆಗಿ ಬದಲಾಯಿತು. ಈಗ ನೆಚ್ಚಿನ ನಾಯಕಿಗಾಗಿ ಅವರು ಹರಕೆ ಹೊತ್ತುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಡ್ರೋನ್ ಪ್ರತಾಪ್ (Drone Prathap) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ರನ್ನರ್ ಅಪ್. ಈಗ ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಇದ್ದಾರೆ. ಅವರಿಗೆ ಗಗನಾ ಜೊತೆಯಾಗಿದ್ದಾರೆ. ಗಗನಾ ಅವರಿಗೆ ಚಿತ್ರರಂಗದಲ್ಲಿ ಇನ್ನಷ್ಟೇ ಅವಕಾಶ ಹಾಗೂ ಯಶಸ್ಸು ಸಿಗಬೇಕಿದೆ. ಈ ಕಾರಣಕ್ಕೆ ಡ್ರೋನ್ ಪ್ರತಾಪ್ ಅವರು ಹರಕೆ ಹೊತ್ತುಕೊಂಡಿದ್ದಾರೆ! ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 14, 2025 11:54 AM

