ಯಾರೆಷ್ಟೇ ವಿರೋಧ ಮಾಡಿದರೂ ಮಂಡ್ಯದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಸ್ಥಾಪಿಸುತ್ತೇವೆ: ರವಿ ಗಣಿಗ
ಕಾವೇರಿ ಅರತಿ ಮಾಡುವುದರಿಂದ ಕೆಆರ್ಎಸ್ ಜಲಾಶಯಕ್ಕೆ ಯಾವುದೇ ಹಾನಿಯಿಲ್ಲ ಎಂದ ರವಿ ಗಣಿಗ, ಮಂಡ್ಯ ಒಂದು ದೊಡ್ಡ ಹಳ್ಳಿಯಂತಿದೆ, ಇಲ್ಲಿನ ಹೆಣ್ಣುಮಕ್ಕಳು ಗಾರ್ಮೆಂಟ್ ಕೆಲಸಕ್ಕೆ ಹೋಗೋದನ್ನು ನೋಡುತ್ತೇವೆ, ಅಮ್ಯೂಸ್ಮೆಂಟ್ ಪಾರ್ಕ್ ಬಂದರೆ ಅವರಿಗೆ ಮತ್ತು ಪಾರ್ಕ್ ಬೇಡ ಎಂದು ಹೋರಾಟ ಮಾಡುತ್ತಿರುವವರ ಮಕ್ಕಳಿಗೂ ಕೆಲಸಗಳು ಸಿಗುತ್ತವೆ ಎಂದರು.
ಮಂಡ್ಯ, ಮೇ 20: ಕೇವಲ ವಿರೋಧ ಮಾಡಬೇಕು ಅನ್ನೋ ದೃಷ್ಟಿಯಿಂದ ಮಂಡ್ಯದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಬೇಡ ಅಂತ ದರೆ ಹೇಳಿದರೆ ಪ್ರಯೋಜನವಿಲ್ಲ, ಅದು ಅಸ್ತಿತ್ವಕ್ಕೆ ಬರೋದ್ರಿಂದ ಆಗುವ ಪ್ರಯೋಜನಗಳ ಬಗ್ಗೆ ಯೋಚಿಸಬೇಕು, ಯಾರೋ ವಿರೋಧ ಮಾಡುತ್ತಾರೆ ಅನ್ನೋ ಕಾರಣಕ್ಕೆ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ದಸರಾ ಮಹೋತ್ಸವದಲ್ಲಿ ಕಾವೇರಿ ಆರತಿ ಯೋಜನೆಗಳನ್ನು ಕೈಬಿಡಲ್ಲ ಎಂದು ಸ್ಥಳೀಯ ಶಾಸಕ ರವಿ ಗಣಿಗ (MLA Ravi Ganiga) ಹೇಳಿದರು. ಶಿವಕುಮಾರ್ರನ್ನು ಪುಣ್ಯಾತ್ಮ ಎಂದ ಗಣಿಗ, ಡಿಸಿಎಂ ಅವರ ಪ್ರಯತ್ನದಿಂದ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಎರಡೂವರೆ ಸಾವಿರ ಕೋಟಿ ರೂ. ಗಳ ಪ್ರಾಜೆಕ್ಟ್ ಮಂಡ್ಯಗೆ ಬರುತ್ತಿದೆ, ಇದರಲ್ಲಿ ಸರ್ಕಾರದ ಹೂಡಿಕೆ ಶೂನ್ಯ, ಪಾರ್ಕ್ನಿಂದಾಗಿ ಸುಮಾರು 3-4 ಸಾವಿರ ಜನಕ್ಕೆ ಉದ್ಯೋಗ ಸಿಗಲಿದೆ ಎಂದು ಶಾಸಕ ಹೇಳಿದರು.
ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

