‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ
ಪ್ರವೀರ್ ಶೆಟ್ಟಿ ನಟನೆಯ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾದಲ್ಲಿ ಶೈನ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರವೀರ್ ಶೆಟ್ಟಿಯ ತಯಾರಿ ಮತ್ತು ಬದ್ಧತೆಯ ಬಗ್ಗೆ ಶೈನ್ ಶೆಟ್ಟಿ ಹೊಗಳಿದ್ದಾರೆ. ಈ ಚಿತ್ರದ ಹೊಸ ಹಾಡು ಬಿಡುಗಡೆ ಆಗಿದೆ. ಚಿತ್ರತಂಡದವರು ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದಾರೆ.
ನಟ ಶೈನ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ’ (Bigg Boss Kannada) ಶೋನಲ್ಲಿ ಸ್ಪರ್ಧಿಸಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಈಗ ‘ನಿದ್ರಾದೇವಿ ನೆಕ್ಸ್ಟ್ ಡೋರ್’ (Nidradevi Next Door) ಸಿನಿಮಾದಲ್ಲಿ ಅವರ ಗೆಟಪ್ ಬೇರೆ ರೀತಿ ಇದೆ. ಇತ್ತೀಚೆಗೆ ಈ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ (Shine Shetty) ಅವರು ಮಾತನಾಡಿದರು. ಚಿತ್ರತಂಡದ ಬಗ್ಗೆ ಅವರು ಖುಷಿಯಿಂದ ಮಾತಾಡಿದರು. ವೇದಿಕೆಯಲ್ಲಿ ಅವರು ಸಿನಿಮಾದ ಹಾಡಿನ ಹುಕ್ ಸ್ಟೆಪ್ಗೆ ಹೆಜ್ಜೆ ಹಾಕಿದರು. ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos