ಚಿಲ್ಲರೆ-ಸಗಟು ವ್ಯಾಪಾರಿಗಳನ್ನು ಎಂಎಸ್ಎಂಇ ವಲಯಕ್ಕೆ ಸೇರಿಸಿದ್ದು ನಮ್ಮ ಸರ್ಕಾರದ ಮೈಲಿಗಲ್ಲು: ಪ್ರಧಾನಿ ಮೋದಿ ಟ್ವೀಟ್
Retail, Wholesale Trade: ಆತ್ಮ ನಿರ್ಭರ ಭಾರತ್ ಆಂದೋಲನದಡಿ ಪರಿಚಯಿಸಲಾದ ಹಲವು ಯೋಜನೆಗಳ ಒಂದು ಭಾಗವಾಗಿ ಈಗ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನು ಎಂಎಸ್ಎಂಇ ವಲಯಕ್ಕೆ ಸೇರಿಸಲಾಗಿದೆ.
ನಿನ್ನೆ (ಶುಕ್ರವಾರ) ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಇನ್ನುಮುಂದೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳೂ ಸಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (MSMEs) ವಲಯದ ವ್ಯಾಪ್ತಿಯಲ್ಲಿ ಬರಲಿದ್ದಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು. ಎಂಎಸ್ಎಂಇ ಸಂಬಂಧಿತ ಮಾರ್ಗಸೂಚಿಯನ್ನು ಪರಿಷ್ಕರಿಸುವ ಮೂಲಕ ಕೇಂದ್ರ ಸರ್ಕಾರ ಈ ನಿಯಮ ಜಾರಿಗೊಳಿಸಿದೆ. ಹೀಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನೂ ಎಂಎಸ್ಎಂಇ ವ್ಯಾಪ್ತಿಗೆ ಸೇರ್ಪಡೆಗೊಳಿಸಿದ ಕ್ರಮವನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
Our government has taken a landmark step of including retail and wholesale trade as MSME. This will help crores of our traders get easier finance, various other benefits and also help boost their business.
We are committed to empowering our traders. https://t.co/FTdmFpaOaU
— Narendra Modi (@narendramodi) July 3, 2021
ಚಿಲ್ಲರೆ ಮತ್ತು ಸಗಟು ವ್ಯಾಪಾರವನ್ನೂ ಎಂಎಸ್ಎಂಇ ವಲಯಕ್ಕೆ ಸೇರಿಸುವ ಮೂಲಕ ನಮ್ಮ ಸರ್ಕಾರ ಒಂದು ಮೈಲಿಗಲ್ಲು ಸ್ಥಾಪಿಸಿದೆ. ಈಗ ಕೋಟ್ಯಂತರ ಚಿಲ್ಲರೆ ಮತ್ತ ಸಗಟು ವ್ಯಾಪಾರಿಗಳು ಎಂಎಸ್ಎಂಇ ವ್ಯಾಪ್ತಿಯಲ್ಲಿ ಇರುವ ಹಣಕಾಸಿನ ಅನುಕೂಲ ಪಡೆಯುತ್ತಾರೆ. ಇದರಿಂದಾಗಿ ಅವರ ಉದ್ಯಮ, ವ್ಯಾಪಾರವನ್ನು ಉತ್ತೇಜಿಸಿಕೊಳ್ಳಬಹುದಾಗಿದೆ. ನಮ್ಮ ಸಣ್ಣ ಉದ್ದಿಮೆದಾರರ ಸಬಲೀಕರಣಕ್ಕೆ ನಾವು ಎಂದಿಗೂ ಬದ್ಧರಾಗಿರುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನಿತಿನ್ ಗಡ್ಕರಿಯವರು ಶುಕ್ರವಾರ ಟ್ವೀಟ್ ಮಾಡಿ ಈ ಮಹತ್ವದ ವಿಚಾರವನ್ನು ತಿಳಿಸಿದ್ದರು. ಆತ್ಮ ನಿರ್ಭರ ಭಾರತ್ ಆಂದೋಲನದಡಿ ಪರಿಚಯಿಸಲಾದ ಹಲವು ಯೋಜನೆಗಳ ಒಂದು ಭಾಗವಾಗಿ ಈಗ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನು ಎಂಎಸ್ಎಂಇ ವಲಯಕ್ಕೆ ಸೇರಿಸಲಾಗಿದೆ. ಇದರಿಂದ ಚಿಲ್ಲರೆ ಮತ್ತು ಸಗಟು ವ್ಯಾಪಾರದಲ್ಲಿ ರಚನಾತ್ಮಕ ಬದಾಲಾವಣೆ ಉಂಟಾಗಲಿದೆ. ಎಂಎಸ್ಎಂಇ ಮೂಲಕ ಸಿಗುವ ಬೆಂಬಲದಿಂದ ಈ ವ್ಯಾಪಾರಿಗಳು ಇನ್ನಷ್ಟು ಅಭಿವೃದ್ಧಿಹೊಂದಬಹುದು. ಹಾಗೇ, ಅವರು ಇನ್ನು ಉದ್ಯಮ್ ರಿಜಿಸ್ಟ್ರೇಶನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: ಅಮೆರಿಕಾದಿಂದ ಅಂತರಿಕ್ಷಕ್ಕೆ ಹೊರಟ ಗುಂಟೂರು ಯುವತಿ; ಕಲ್ಪನಾ ಚಾವ್ಲಾ ನಂತರ ಸಾಧನೆಯತ್ತ ಮತ್ತೋರ್ವ ಭಾರತೀಯ ನಾರಿ
PM Narendra Modi hails the decision to include retail and wholesale trade as MSME