ಅನ್ಯಜಾತಿ ಯುವಕನನ್ನು ಪ್ರೀತಿಸಿದ ಯುವತಿಗೆ ಹಿಂಸೆ; ಮರಕ್ಕೆ ಕಟ್ಟಿ ಸಹೋದರರಿಂದ ಹಲ್ಲೆ

ಜೊತೆಯಲ್ಲಿ ಹುಟ್ಟಿದ ಸಹೋದರಿ ಬಿಟ್ಟುಬಿಡುವಂತೆ ಬೇಡಿಕೊಂಡರು ಕೇಳದ ಸಹೋದರರು ಊರಿನ ಜನರ ಮಧ್ಯದಲ್ಲಿ ಕ್ರೂರವಾಗಿ ತಂಗಿಯನ್ನು ಹಿಂಸಿಸಿದ್ದಾರೆ. ಸಹೋದರಿಯ ಮೇಲೆ ಹಲ್ಲೆ ಮಾಡುವ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ಸುದ್ದಿ ತಿಳಿದ ಪೊಲೀಸರು 4 ಸಹೋದರರನ್ನು ಬಂಧಿಸಿದ್ದಾರೆ.

ಅನ್ಯಜಾತಿ ಯುವಕನನ್ನು ಪ್ರೀತಿಸಿದ ಯುವತಿಗೆ ಹಿಂಸೆ; ಮರಕ್ಕೆ ಕಟ್ಟಿ ಸಹೋದರರಿಂದ ಹಲ್ಲೆ
ಮರಕ್ಕೆ ಕಟ್ಟಿ ಸಹೋದರರಿಂದ ಹಲ್ಲೆ
Follow us
TV9 Web
| Updated By: preethi shettigar

Updated on: Jul 03, 2021 | 3:03 PM

ಭೋಪಾಲ್: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮರಕ್ಕೆ ಕಟ್ಟಿ ಸಹೋದರರೇ ಹಲ್ಲೆ ಮಾಡಿದ ಅಮಾನುಷ ಘಟನೆ ಮಧ್ಯಪ್ರದೇಶದ ಅಲಿರಾಜಪೂರ್ ಜಿಲ್ಲಾ ಪುಟ್ಟಾಲಾಬ್ ಗ್ರಾಮದಲ್ಲಿ ನಡೆದಿದೆ. ಮರಕ್ಕೆ ನೇತು ಬಿಟ್ಟು ಸುತ್ತಲೂ ನಿಂತ ಯುವತಿಯ ನಾಲ್ಕು ಸಹೋದರರು ಮನ ಬಂದಂತೆ ಥಳಿಸಿದ್ದಾರೆ. ಜೊತೆಯಲ್ಲಿ ಹುಟ್ಟಿದ ಸಹೋದರಿ ಬಿಟ್ಟುಬಿಡುವಂತೆ ಬೇಡಿಕೊಂಡರು ಕೇಳದ ಸಹೋದರರು ಊರಿನ ಜನರ ಮಧ್ಯದಲ್ಲಿ ಕ್ರೂರವಾಗಿ ತಂಗಿಯನ್ನು ಹಿಂಸಿಸಿದ್ದಾರೆ. ಸಹೋದರಿಯ ಮೇಲೆ ಹಲ್ಲೆ ಮಾಡುವ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ಸುದ್ದಿ ತಿಳಿದ ಪೊಲೀಸರು 4 ಸಹೋದರರನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ಬುಧವಾರ ಕುಟುಂಬ ಕಲಹದಿಂದಾಗಿ ಏನೂ ಅರಿಯದ ಮಗುವೊಂದು ಬಲಿಯಾಗಿದೆ ಕುಟುಂಬದಲ್ಲಿನ ವಿರಸದ ಕಾರಣದಿಂದ ತಂದೆ ತನ್ನ ಮೂವರು ಮಕ್ಕಳಿಗೆ ಇಲಿ ಪಾಷಾಣವನ್ನು ನೀಡಿದ್ದು, ಐದು ವರ್ಷದ ಮಗುವೊಂದು ಸಾವನ್ನಪ್ಪಿದೆ. ಉಳಿದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಂದು ಮುಂಬೈ ಪೋಲೀಸರು ತಿಳಿಸಿದ್ದಾರೆ. ತಂದೆ ಮಹಮ್ಮದ್ ಅಲಿ ನೌಷಾದ್ ಅನ್ಸಾರಿಯು(27) ಐಸ್​ಕ್ರೀಮ್​ನಲ್ಲಿ ಇಲಿ ಪಾಷಾಣವನ್ನು ಬೆರೆಸಿ ಮಕ್ಕಳಿಗೆ ನೀಡಿದ್ದ. ಅದನ್ನು ಅರಿಯದೆ ತಿಂದ ಮಕ್ಕಳಲ್ಲಿ 5 ವರ್ಷದ ಅಲಿಶಾನ್ ಮಹಮ್ಮದ್ ಅಲಿ ಅನ್ಸಾರ್ ಎಂಬ ಮಗು ಮರಣವನ್ನಪ್ಪಿದೆ.

7 ವರ್ಷದ ಅಲೀನಾ ಹಾಗೂ 2 ವರ್ಷದ ಅರ್ಮಾನ್​ಗೆ ಚಿಕಿತ್ಸೆ ನೀಡುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಮಕ್ಕಳ ತಾಯಿ ನಾಜಿಯಾ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302 ಹಾಗೂ 307ರ ಅಡಿಯಲ್ಲಿ ಮಂಖುರ್ಡ್ ಠಾಣೆಯ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ತಂದೆಯು ಪರಾರಿಯಾಗಿದ್ದು ಅವನ ಪತ್ತೆಗೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಜೂನ್ 25ರಂದು ದಂಪತಿಯ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದೆ. ನಂತರ ನಾಜಿಯಾ ತನ್ನ ಸಹೋದರಿಯ ಮನೆಗೆ ತೆರಳಿದ್ದಾಳೆ. ಆಕೆ ಹೋದ ಗಂಟೆಯೊಳಗೆ ಮಕ್ಕಳಿಗೆ ಬಲವಂತವಾಗಿ ಐಸ್​ಕ್ರೀಮ್ ಎಂದು ಇಲಿ ಪಾಷಾಣವನ್ನು ತಂದೆ ತಿನ್ನಿಸಿದ್ದಾನೆ. ಮಕ್ಕಳಿಗೆ ಅಸ್ವಸ್ಥತೆ ಉಂಟಾದಾಗ ನಾಜಿಯಾ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಮೊದಲಿಗೆ ಆಸ್ಪತ್ರೆಯವರಲ್ಲಿ ಮಕ್ಕಳು ಅರಿವಿಲ್ಲದೇ ಪಾಷಾಣ ತಿಂದಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾಳೆ. ಆದರೆ ಮಗು ತೀರಿಕೊಂಡಾಗ ನಿಜವನ್ನು ತಿಳಿಸಿದ್ದಾಳೆ. ಆಸ್ಪತ್ರೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೋಲೀಸರು ಉಳಿದ ಮಕ್ಕಳ ಹೇಳಿಕೆಗಳನ್ನೂ ಪಡೆದುಕೊಂಡಿದ್ದು ಆರೋಪಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ದೂರು ನೀಡಲು ಠಾಣೆಗೆ ಬಂದವರ ಮೇಲೆ ಪಿಎಸ್ಐ ಹಲ್ಲೆ; ಎಸ್​ಪಿ ಮೊರೆ ಹೋದ ಕುಟುಂಬಸ್ಥರು

ಮದ್ಯದ ಅಮಲಿನಲ್ಲಿ ಮಹಿಳೆಯರ ಮುಂದೆ ಕುಡುಕನ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಮೂವರ ಮೇಲೆ ಹಲ್ಲೆ