ಮದ್ಯದ ಅಮಲಿನಲ್ಲಿ ಮಹಿಳೆಯರ ಮುಂದೆ ಕುಡುಕನ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಮೂವರ ಮೇಲೆ ಹಲ್ಲೆ
ಕೆಲಸ ಮಾಡುವ ವೇಳೆ ಮೂರ್ತಿ ಎಂಬ ವ್ಯಕ್ತಿ ಮಹಿಳೆಯರ ಎದುರು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಮೂರ್ತಿಯ ವರ್ತನೆಯನ್ನು ಪ್ರಶ್ನಿಸಿದ ಕಾಂತರಾಜು, ಮಣಿ, ಹಾಲಮ್ಮನವರ ಮೇಲೆ ಮೂರ್ತಿ ಮಕ್ಕಳಾದ ಮಹೇಂದ್ರ, ಸಂತೋಷ್ ಹಲ್ಲೆ ನಡೆಸಿದ್ದಾರೆ.
ಚಾಮರಾಜನಗರ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯರೆದುರು ವ್ಯಕ್ತಿ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ವ್ಯಕ್ತಿಯ ಅಸಭ್ಯ ವರ್ತನೆ ಪ್ರಶ್ನಿಸಿದವರಿಗೆ ಆತನ ಮಕ್ಕಳಿಂದ ಹಲ್ಲೆ ನಡೆದಿದೆ.
ಎನ್ಆರ್ಇಜಿನಲ್ಲಿ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ವೇಳೆ ಮೂರ್ತಿ ಎಂಬ ವ್ಯಕ್ತಿ ಮಹಿಳೆಯರ ಎದುರು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಮೂರ್ತಿಯ ವರ್ತನೆಯನ್ನು ಪ್ರಶ್ನಿಸಿದ ಕಾಂತರಾಜು, ಮಣಿ, ಹಾಲಮ್ಮನವರ ಮೇಲೆ ಮೂರ್ತಿ ಮಕ್ಕಳಾದ ಮಹೇಂದ್ರ, ಸಂತೋಷ್ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿ ಮೂರ್ತಿಗೆ ಮುಳ್ಳಿನ ಪೊರಕೆಯಿಂದ ಜನರು ಥಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಕಾಂತರಾಜುರ ಒಂದು ಕಣ್ಣು ಸಂಪೂರ್ಣ ಕುರುಡಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವನಹಳ್ಳಿ: ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಬಳಿಯ ಏರ್‌ಪೋರ್ಟ್ ಟೋಲ್‌ನಲ್ಲಿ ಗಲಾಟೆಯಾಗಿದೆ. ಟೋಲ್ ಕೇಳಿದ್ದಕ್ಕೆ ಕಾರು ಮಾಲೀಕ ಚಂದ್ರಪ್ಪ ಮಚ್ಚು ತೋರಿಸಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಸಿಬ್ಬಂದಿಗೆ ಬೆದರಿಕೆವೊಡ್ಡಿದ್ದ ಕಾರು ಮಾಲೀಕ ಚಂದ್ರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಲಾಕ್ ಕಲರ್ ಕಾರಿನಲ್ಲಿ ಬಂದು ಆಧಾರ್ ಕಾರ್ಡ್ ತೋರಿಸಿ ಸ್ಥಳೀಯರಿಗೆ ಉಚಿತವಾಗಿ ಟೋಲ್‌ನಲ್ಲಿ ಬಿಡುತ್ತಿಲ್ಲವೆಂದು ಚಂದ್ರಪ್ಪ, ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದ. ಆದ್ರೆ 5 ಕಿಮೀ ವ್ಯಾಪ್ತಿಯವರಿಗೆ ಮಾತ್ರ ಫ್ರೀ ಅಂತ ಸಿಬ್ಬಂದಿ ನಕಾರ ಮಾಡಿದ್ದರು. ಈ ವೇಳೆ ಮಚ್ಚು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ಹೀಗಾಗಿ ಪೊಲೀಸರು ಚಂದ್ರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಮಚ್ಚು ಕಾರು ಸಮೇತ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ – ಡಾ. ಪರಮೇಶ್ವರ್ ಅಳಲು