ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ – ಡಾ. ಪರಮೇಶ್ವರ್ ಅಳಲು

Next Chief Minister: ಪರಮೇಶ್ವರ್ ಹೇಳಿಕೆಯಿಂದ ಅಲ್ಲಿದ್ದವರು ಅಚ್ಚರಿಗೊಂಡರು. 2013 ರ ವಿಧಾನ ಸಭೆ ಚುನಾವಣೆ ಫಲಿತಾಂಶ ನೆನಪಾಗಿರಬಹುದು ಪರಮೇಶ್ವರ್ ಅವರಿಗೆ. ಸಿಎಂ ಅಭ್ಯರ್ಥಿಯಾಗಿದ್ದ ಪರಮೇಶ್ವರ್ ಆಗ ಸೋಲು ಕಂಡಿದ್ದರು. ಸಿಎಂ ಆಗುತ್ತಾರೆ ಅಂತಾ ಸ್ವತಃ ಪಕ್ಷದವರೇ ಸೋಲಿಸಿದ್ದರು ಎನ್ನುವ ಆರೋಪವಿದೆ. ಹೀಗಾಗಿ ಈ ಬಾರಿ ಹಾಗೇ ಆಗಬಾರದೆಂದು ಪರಮೇಶ್ವರ್ ಜಾಗೃತರಾಗಿದ್ದಾರೆ ಎನ್ನಲಾಗಿದೆ.

ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ - ಡಾ. ಪರಮೇಶ್ವರ್ ಅಳಲು
ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ‘ಆ ಪದವೇ ನನಗೆ ಡೇಂಜರ್ ಆಗುತ್ತೆ - ಡಾ. ಪರಮೇಶ್ವರ್ ಅಳಲು
Follow us
| Updated By: ಸಾಧು ಶ್ರೀನಾಥ್​

Updated on:Jun 24, 2021 | 12:01 PM

ತುಮಕೂರು: ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್​ ನಾಯಕ  ಡಾ. ಜಿ ಪರಮೇಶ್ವರ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.  ಮಧುಗಿರಿ ತಾಲೂಕಿನ ಗಂಕಾರನಹಳ್ಳಿ ಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಪರಮೇಶ್ವರ್ ಭಾಷಣ ಮಾಡುವಾಗ ‘ಮುಂದಿನ ಸಿಎಂ ಪರಮೇಶ್ವರ್’ ಎಂದು ಸ್ಥಳೀಯರು ಘೋಷಣೆ ಕೂಗುತ್ತಿದ್ದಂತೆ ಹಾವುತುಳಿದವರಂತೆ ಜಿ. ಪರಮೇಶ್ವರ್ ಅವರು ಮೇಲಿನ ಹೇಳಿಕೆ ನೀಡಿದ್ದಾರೆ. 

ಭಾಷಣ ಮಾಡುವಾಗ ನಿಮ್ಮಿಂದ ಈ ರಾಜ್ಯದ ಉಪಮುಖ್ಯಮಂತ್ರಿಯಾದೇ ಎಂದು ಪರಮೇಶ್ವರ್ ಹೇಳಿದರು. ಈ ವೇಳೆ ಮುಂದಿನ ಸಿಎಂ ಪರಮೇಶ್ವರ್ ಅಂತಾ ಸ್ಥಳೀಯರೊಬ್ಬರು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಸಿಎಂ ಪದ ಹೇಳಬೇಡಿ, ಅದು ನನಗೆ ಡೇಂಜರ್ ಆಗುತ್ತದೆ ಅಂತಾ ಕಿವಿಮಾತು ಹೇಳಿದರು.

ಪರಮೇಶ್ವರ್ ಹೇಳಿಕೆಯಿಂದ ಅಲ್ಲಿದ್ದವರು ಅಚ್ಚರಿಗೊಂಡರು. 2013 ರ ವಿಧಾನ ಸಭೆ ಚುನಾವಣೆ ಫಲಿತಾಂಶ ನೆನಪಾಗಿರಬಹುದು ಪರಮೇಶ್ವರ್ ಅವರಿಗೆ. ಸಿಎಂ ಅಭ್ಯರ್ಥಿಯಾಗಿದ್ದ ಪರಮೇಶ್ವರ್ ಆಗ ಸೋಲು ಕಂಡಿದ್ದರು. ಸಿಎಂ ಆಗುತ್ತಾರೆ ಅಂತಾ ಸ್ವತಃ ಪಕ್ಷದವರೇ ಸೋಲಿಸಿದ್ದರು ಎನ್ನುವ ಆರೋಪವಿದೆ. ಹೀಗಾಗಿ ಈ ಬಾರಿ ಹಾಗೇ ಆಗಬಾರದೆಂದು ಪರಮೇಶ್ವರ್ ಜಾಗೃತರಾಗಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್ ಅವರು ಸದ್ಯಕ್ಕೆ ಕ್ಷೇತ್ರದಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗೆದ್ದ ಬಳಿಕ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಬಹುದು.  ಸಿಎಂ ರೇಸನಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ, ಡಿಕೆಶಿ ಹೆಸರುಗಳು ಕೇಳಿಬರುತ್ತಿರುವ ಹಿನ್ನೆಲೆ ಕ್ಷೇತ್ರದಲ್ಲಿ ಡಾ ಜಿ ಪರಮೇಶ್ವರ್ ಅವರು ಮತ್ತಷ್ಟು ಆಕ್ಟಿವ್ ಆಗಿದ್ದಾರೆ  ಎಂದು ಪಕ್ಷದ ಸ್ಥಳೀಯ ಮುಖಂಡರೊಬ್ಬರು ಇಂದಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದರು.

‘ಮುಂದಿನ ಮುಖ್ಯಮಂತ್ರಿ’ ವಿವಾದ, ಮುಂದಿನ ವಾರ ದೆಹಲಿಗೆ ಬರುವಂತೆ ಸಿದ್ದರಾಮಯ್ಯಗೆ ಹೈಕಮಾಂಡ್​ ಬುಲಾವ್​: ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾನು ಯಾವತ್ತೂ ಮುಖ್ಯಮಂತ್ರಿ ಆಗಬೇಕು ಅಂತಾ ಹೇಳಲ್ಲ. ಆದರೂ ನನ್ನನ್ನು ಚೀಫ್ ಮಿನಿಸ್ಟರ್ ಅಂತಾ ಸಂಬೋಧಿಸಬೇಡಿ ಎಂದು ನಮ್ಮ ಶಾಸಕರಿಗೆ ನಾನು ಹೇಳ್ತಿನಿ  ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

ಇದೇ ವೇಳೆ, ಶಾಸಕರಿಗೆ ‘ಮುಂದಿನ ಮುಖ್ಯಮಂತ್ರಿ’ ಬಗ್ಗೆ ಹೇಳಿಕೆ ಕೊಡದಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಾಕೀತು ಮಾಡಿರುವ ಬಗ್ಗೆ ಪ್ರಸ್ತಾಪಿಸಿದಾಗ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಅಂದರು. ನಾನು ಅವರ (ಡಿ.ಕೆ.ಶಿವಕುಮಾರ್) ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಏನೋ ಮಾತಾಡಿದಾರೆ. ನಾನು ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರ ಸಾಲು ಸಾಲು ದೆಹಲಿ ಯಾತ್ರೆ:  ತಮ್ಮ ಅಭಿಮಾನೀ ಶಾಸಕರುಗಳಿಂದ  ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳು ಹೊರಹೊಮ್ಮುತ್ತಿರುವುದು, ಮತ್ತು ತದನಂತರ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್​ ಆಕ್ರೋಶಗೋಮಡಿರುವ ಬಗ್ಗೆ ಗಲಿಬಿಲಿಗೊಂಡವರಂತೆ ಕಂಡುಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳುತ್ತಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಡಾ.ಜಿ.ಪರಮೇಶ್ವರ್‌ರಿಂದಲೂ ರಾಹುಲ್ ಗಾಂಧಿ ಭೇಟಿಗೆ ಯತ್ನ ನಡೆದಿದೆ. ಮತ್ತೊಂದೆಡೆ ಹೆಚ್.ಕೆ.ಪಾಟೀಲ್‌ ಅವರೂ ರಾಹುಲ್​ ಭೇಟಿಗೆ ಪ್ರಯತ್ನ ಪಡುತ್ತಿದ್ದಾರೆ.  ಇನ್ನು ಹಿಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೂ ಮುಂದಿನ ವಾರ ದೆಹಲಿಗೆ ತೆರಳುವವರಿದ್ದಾರೆ. ರಾಹುಲ್ ಜತೆ ಮಾತುಕತೆಗೆ ಕೆ.ಹೆಚ್.ಮುನಿಯಪ್ಪ ಸಹ ಯತ್ನಿಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ರಾಜಕೀಯ ಮುಂದಿನ ವಾರ ದೆಹಲಿಗೆ ಶಿಫ್ಟ್ ಸಾಧ್ಯತೆ: ಈ ಬೆಳವಣಿಗೆಗಳಿಂದಾಗಿ ರಾಜ್ಯ ಕಾಂಗ್ರೆಸ್ ರಾಜಕೀಯ ಮುಂದಿನ ವಾರ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು ಹಲವು ಹಿರಿಯ ನಾಯಕರಿಗೆ ಅಸಮಾಧಾನ ತಂದಿದೆ. ಅಸಮಾಧಾನಗೊಂಡಿರುವ ರಾಜ್ಯದ ಕಾಂಗ್ರೆಸ್‌ ನಾಯಕರು ಕೆಲ ನಾಯಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ಅಸಮಾಧಾನಗೊಂಡಿದ್ದಾರೆ. ಡಿಕೆ ಶಿವಕುಮಾರ್​ ಕಾರ್ಯವೈಖರಿ ಬಗ್ಗೆಯೂ ತೆರೆಮರೆಯಲ್ಲಿ ಅಸಮಾಧಾನವುಂಟಾಗಿದೆ. ಈಗ ಸಾಗುತ್ತಿರುವ ನಾಯಕತ್ವದ ಹಾದಿ ಬಗ್ಗೆ ಅಸಮಾಧಾನ ಎದ್ದಿದೆ. ಈ ಕಚ್ಚಾಟದ ಬಗ್ಗೆ ರಾಹುಲ್ ಜತೆ ಚರ್ಚಿಸಲಿರುವ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ, ಹೋರಾಟಗಳು, ಕಾರ್ಯಕ್ರಮಗಳಿಗೆ ಹೊಸ ರೂಪ ನೀಡುವಂತೆ ಒತ್ತಾಯ ಮಾಡುವ ಅಂದಾಜಿದೆ.

(Dont project me next chief minister pleads dr g parameshwara in madhugiri)

Published On - 11:38 am, Thu, 24 June 21

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ