AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ?

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆದಿರುವುದು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಕ್ಷಯ್ ಕುಮಾರ್ ಪರೇಶ್ ರಾವಲ್ ಅವರಿಗೆ 25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಪರೇಶ್ ರಾವಲ್ ಚಿತ್ರದಿಂದ ಹೊರನಡೆದಿದ್ದಕ್ಕೆ ಅಕ್ಷಯ್ ಕಾರಣ ಎಂಬ ವದಂತಿಗಳು ಹಬ್ಬಿದೆ.

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ?
ಪರೇಶ್-ಅಕ್ಷಯ್
ರಾಜೇಶ್ ದುಗ್ಗುಮನೆ
|

Updated on: May 21, 2025 | 7:30 AM

Share

‘ಹೇರಾ ಫೇರಿ’ ಹಾಗೂ ‘ಫಿರ್ ಹೇರಾ ಫೇರಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar), ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಅವರು ಬಹುವಾಗಿ ನಗಿಸಿದ್ದರು. ಅದರಲ್ಲೂ ಬಾಬು ಭಯ್ಯಾ ಪಾತ್ರದ ಮೂಲಕ ಪರೇಶ್ ರಾವಲ್ ಅವರು ಎಲ್ಲರ ಮೆಚ್ಚುಗೆ ಪಡೆದರು. ಆದರೆ, ಈಗ ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆದಿದ್ದಾರೆ. ಈ ಬೆನ್ನಲ್ಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್​ಗೆ ನೋಟಿಸ್ ಕಳುಹಿಸಿದ್ದು, 25 ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಮಧ್ಯೆ ಪರೇಶ್ ಚಿತ್ರದಿಂದ ಹೊರ ನಡೆಯಲು ಅಕ್ಷಯ್ ಕಾರಣ ಇರಬಹುದು ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ಈ ಮೊದಲಿನಿಂದಲೂ ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇವರ ಮಧ್ಯೆ ಒಳ್ಳೆಯ ಗೆಳೆತನ ಇದೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಆದರೆ, ಅವರು ಒಬ್ಬ ಸಹೋದ್ಯೋಗಿ ಅಷ್ಟೇ ಎಂದು ಪರೇಶ್ ಕೆಲವೇ ವಾರಗಳ ಹಿಂದೆ ಹೇಳಿದ್ದರು. ಅಲ್ಲದೆ, ಆರಂಭದಲ್ಲಿ ಕೆಲಸ ಮಾಡಿದ ವ್ಯಕ್ತಿಗಳು ಮಾತ್ರ ಗೆಳೆಯರು ಎನ್ನಿಸುತ್ತಾರೆ ಎಂದು ಕೂಡ ಪರೇಶ್ ಅಭಿಪ್ರಾಯಪಟ್ಟಿದ್ದರು.

ಪರೇಶ್ ರಾವಲ್ ಹೇಳಿಕೆ ಬೆನ್ನಲ್ಲೇ ಅನೇಕರಿಗೆ ಈ ಬಗ್ಗೆ ಅನುಮಾನ ಮೂಡಿತ್ತು. ಪರೇಶ್ ಹಾಗೂ ಅಕ್ಷಯ್ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಅನೇಕರು ಅಂದುಕೊಂಡಿದ್ದರು. ಹೀಗಿರುವಾಗಲೇ ಪರೇಶ್ ಅವರು ಚಿತ್ರದಿಂದ ಹೊರ ನಡೆಯುವುದಾಗಿ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದಾರೆ. ಚಿತ್ರತಂಡದ ಗಮನಕ್ಕೆ ತರದೆ ಈ ನಿರ್ಧಾರ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ
Image
3.5 ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ
Image
ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ
Image
ಜೂನಿಯರ್ ಎನ್​ಟಿಆರ್​ಗೆ 9999 ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಆರಂಭದಲ್ಲಿ ಎಲ್ಲರೂ ನಿರ್ದೇಶಕರ ಜೊತೆ ಕಿರಿಕ್ ಆಗಿರಬಹುದು ಎಂದು ಭಾವಿಸಿದ್ದರು. ಆದರೆ, ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ನಿರ್ದೇಶಕ ಪ್ರಿಯದರ್ಶನ್ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಅವರನ್ನು ಬಹುವಾಗಿ ಗೌರವಿಸುತ್ತೇನೆ. ನಾನು ಆ ಪಾತ್ರದಿಂದ ರಿಟೈರ್ ಆಗುತ್ತಿದ್ದೇನೆ’ ಎಂದು ಕೂಡ ಪರೇಶ್ ರಾವಲ್ ಹೇಳಿದ್ದರು.

ಇದನ್ನೂ ಓದಿ: ಸಿನಿಮಾ ಗೆದ್ದರೆ ಮಾತ್ರ ಸಂಭಾವನೆ ಪಡೆಯುತ್ತಾರೆ ಅಕ್ಷಯ್ ಕುಮಾರ್; ನಟನಿಗೆ ಆದ ನಷ್ಟ ಎಷ್ಟು?

ಈ ಎರಡೂ ಹೇಳಿಕೆ ಬೆನ್ನಲ್ಲೇ ಅಕ್ಷಯ್ ಕುಮಾರ್ ಹಾಗೂ ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಪರೇಶ್​ಗೆ ಅಕ್ಷಯ್ ಲೀಗಲ್ ನೋಟಿಸ್ ಕಳುಹಿಸಿರುವುದು ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.